ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಾರಿಯಾಗಿರುವ ಶ್ರೀರಾಂಪುರ ಬಾಂಬ್ ನಾಗನ ಪೂರ್ವಾಪರ

ಶ್ರೀರಾಮಪುರದ ವಿ.ನಾಗರಾಜ್ ಕಚೇರಿ ಮೇಲೆ ಶುಕ್ರವಾರ ಪೊಲೀಸರು ನಡೆಸಿದ ದಾಳಿಯಲ್ಲಿ ಕೋಟ್ಯಂತರ ರುಪಾಯಿ ಮೊತ್ತದ ಹಳೆ ನೋಟು ಸಿಕ್ಕಿದೆ. ವಿ.ನಾಗರಾಜ್ ಯಾರು ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಶ್ರೀರಾಮಪುರದ ವಾಸಿ, ಬಿಬಿಎಂಪಿ ಮಾಜಿ ಸದಸ್ಯ ವಿ.ನಾಗರಾಜ ಅಂದರೆ ಪ್ರಾಯಶಃ ಆತನ ಗುರುತು ಸಿಗಲಿಕ್ಕಿಲ್ಲ. ಆದರೆ ತನ್ನನ್ನು 'ಬಾಂಬ್ ನಾಗ' ಅಂತ ಕರೆಯಕೂಡದು ಎಂದು ಹೈಕೋರ್ಟ್ ಮೆಟ್ಟಿಲೇರಿ, ಅದರಲ್ಲಿ ಗೆದ್ದು ಬಂದಿದ್ದ ನಾಗರಾಜ್ ಮೇಲೆ ಆ ನಂತರ ಕೂಡ ಆರೋಪಗಳು ಕೇಳಿಬಂದಿದ್ದವು.

ಏಳನೇ ತರಗತಿ ಓದಿರುವ 56 ವರ್ಷದ ವಿ.ನಾಗರಾಜ್ 2013ರಲ್ಲಿ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ, ಬೆಂಗಳೂರಿನ ಶ್ರೀರಾಮಪುರ ಸ್ವತಂತ್ರಪಾಳ್ಯದ ನಾಲ್ಕನೇ ಮುಖ್ಯರಸ್ತೆಯ 34ನೇ ನಂಬರಿನ ಮನೆಯಲ್ಲಿ ವಾಸ. ಸ್ಪರ್ಧೆ ಸಂದರ್ಭದಲ್ಲಿ ತೋರಿಸಿರುವ ಪ್ರಕಾರ ನಾಗರಾಜ್ ಆದಾಯ 3,39,075 ರುಪಾಯಿ.[100 ಕೋಟಿ ಹಣ 3ಮಚ್ಚು 2 ಡ್ಯಾಗರ್ ಪತ್ತೆ, ವಿ ನಾಗರಾಜ್ ಪರಾರಿ!]

Who is bomb Naga alias V Nagaraj?

ಆ ವೇಳೆಗೆ ನಾಗರಾಜ್ ಮೇಲೆ ಒಂಬತ್ತು ಪ್ರಕರಣಗಳಿದ್ದವು. ಕೃಷಿ ಭೂಮಿ ಹಾಗೂ ಕ್ವಾಲಿಸ್ ಕಾರು ಇತ್ತು. ಮನೆ ಇದ್ದವು. ಇಂಥ ನಾಗರಾಜ್ ವಿರುದ್ಧ ಕಾರ್ಪೋರೇಟರ್ ಹತ್ಯೆ ಯತ್ನ ಪ್ರಕರಣದ ಆರೋಪ ಎದುರಾಗಿತ್ತು. ಒಂದೂವರೆ ಲಕ್ಷ ರುಪಾಯಿಗೆ ಸುಪಾರಿ ಕೊಟ್ಟಿದ್ದಾರೆ ಎಂಬುದು ಆರೋಪವಾಗಿತ್ತು. ಐವರು ಸೇರಿ ರೇಜರ್ ಹಾಗೂ ಚಾಕುಗಳಿಂದ ಗೋವಿಂದರಾಜು ಮೇಲೆ ದಾಳಿ ನಡೆಸಿದ್ದರು.

ಇನ್ನು ನಾಗರಾಜ್ ಪತ್ನಿ ಲಕ್ಷ್ಮಿ ಮೇಲೆ ಶ್ರೀರಾಮಪುರದ ಸ್ವತಂತ್ರಪಾಳ್ಯದ ಮನೆ ಬಳಿಯೇ ಸ್ಥಳೀಯರಿಂದ ದಾಳಿ ನಡೆದಿತ್ತು. ಲಕ್ಷ್ಮಿ ಹಾಗೂ ಅವರ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿತ್ತು. ಬಿಬಿಎಂಪಿ ಕಾರ್ಪೋರೇಟರ್ ಆಗಿ ಕೂಡ ನಾಗರಾಜ್ ಆಯ್ಕೆ ಆಗಿದ್ದಿದೆ. ಹಿಂದೊಮ್ಮೆ ಪೊಲೀಸರು ನಾಗರಾಜ್ ನನ್ನು ಬಂಧಿಸಲು ತೆರಳಿದ್ದ ವೇಳೆ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟಿಸಿದ್ದು ಸುದ್ದಿಯಾಗಿತ್ತು.[ಯುನೈಟೆಡ್ ವೇ ಬೆಂಗಳೂರಿನ ಸ್ವಚ್ಛ ಶಾಲೆ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ]

Money

ಪ್ರಕಾಶ್ ನಗರ ವಾರ್ಡ್ ನಿಂದ ಸ್ಪರ್ಧಿಸಿ 2001-2005ರ ಅವಧಿಗೆ ಬಿಬಿಎಂಪಿ ಸದಸ್ಯನಾಗಿದ್ದ ನಾಗರಾಜ್ ಮನೆಯಲ್ಲಿ ಸಿಕ್ಕಿರುವ ಹಳೆ ನೋಟುಗಳ ಮೌಲ್ಯ 14.2 ಕೋಟಿ ರುಪಾಯಿ. ಅಮಾನ್ಯವಾದ ನೋಟುಗಳನ್ನು ಇರಿಸಿಕೊಳ್ಳುವುದು ಅಪರಾಧ, ಜತೆಗೆ ಅಪಹರಣ ಮತ್ತಿತರ ಅರೋಪಗಳು ಕೂಡ ಆತನ ಮೇಲಿದೆ.

English summary
Bengaluru Police raid former BBMP councilor V Nagarajs Srirampura residence cum office. Recover around 40 cr rupees in demonetized currency. Police also recovered deadly weapons. Cops are hunting V Nagaraj, nick named as Bomb Naga who has escaped from city. V Nagarajs Dossier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X