Actor Darshan: ಈ ವಿಚಾರಗಳಿಂದ ಮಾತ್ರ ನಟ ದರ್ಶನ್ ಬದಲಾಗಲು ಸಾಧ್ಯ.!
ದರ್ಶನ್ ತೂಗದೀಪ್.. ಕನ್ನಡ ಚಿತ್ರರಂಗದ ಸ್ಟಾರ್ ನಟ. ಐಶಾರಾಮಿ ಜೀವನ.. ತಾನು ಹೇಳಿದಂತೆ ಕೇಳುವ ಆಳುಗಳು.. ತಾನು ಮಾಡಿದ್ದೇ ಆಟ.. ದಿನವೂ ಮನೆಯ ಮುಂದೆ ಜನ ಜಂಗುಳಿ.. ಮನೆಯಿಂದ ಹೊರಗೆ ಕಾಲಿಡುತ್ತಲೆ ಕೇಳುತ್ತಿದ್ದ ಘೋಷಣೆಗಳು.. ತನ್ನ ಅಭಿಮಾನಿಗಳ ನಡುವೆ ರಾಜನಂತೆ ಮೆರೆದ ನಟ ಈಗ ಪರಪ್ಪನ ಅಗ್ರಾಹರ ಜೈಲಿನಲ್ಲಿ ಕಂಬಿ ಹಿಂದೆ ದಿನಗಳನ್ನು ಕಳೆಯುತ್ತಿದ್ದಾನೆ.
ತನ್ನ ಹೆಂಡತಿಗೆ ಹೊಡೆದು ಜೈಲು ಸೇರಿದ್ದಾಗ ನೀಡಿದ ಒಂದು ಸಂದರ್ಶನದಲ್ಲಿ ದರ್ಶನ್, ಜೈಲಿನಲ್ಲಿರುವ ಕೈದಿಗಳ ಮನಸ್ಥಿತಿಯನ್ನು ವಿವರಿಸಿದ್ದರು. ಆಗ ಒಂದು ನಿಮಿಷ ಸಿಟ್ಟು ಕಂಟ್ರೋಲ್ ಮಾಡಿಕೊಂಡಿದ್ದರೆ, ಎಂಬ ಈ ಘಟನೆ ನಡೆಯುತ್ತಿರಲಿಲ್ಲ ಎಂಬುದಾಗಿ ಖೈದಿಗಳು ಹೇಳಿದ್ದರು. ಅಕ್ಷರಶಃ ಈ ಮಾತು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನಗೆ ಪದೆ ಪದೇ ನೆನಪು ಆಗುತ್ತಿದೆ.

ದರ್ಶನ್ ಹೀಗೆ ಆಗಿದ್ದು ಹೇಗೆ?
ದರ್ಶನ್ ನಿಜಕ್ಕೂ ಕೆಟ್ಟ ಮನುಷ್ಯ ಅಲ್ಲವೇ ಅಲ್ಲ. ಸಂಪ್ರದಾಯಸ್ತ ಕುಟುಂಬದಲ್ಲಿ ಹುಟ್ಟಿ ತಾಯಿ, ತಮ್ಮ, ಹೆಂಡತಿ ಎಂಬ ಬಂಧನವನ್ನು ನೆಚ್ಚಿಕೊಂಡವರು. ಆದರೆ ಯಾವಾಗ ಸ್ಟಾರ್ ಗಿರಿ ಬೆಳೆದು ಅವರ ಸುತ್ತ ಒಂದು ಸರ್ಕಲ್ ಬೆಳೆಯಿತೋ ಆಗಲೇ ಅವರು ಚೇಂಜ್ ಆದರು. ತಮ್ಮ ಹಿಂಬಾಲಕರು ಹೇಳುತ್ತಿದ್ದ ಮಾತುಗಳನ್ನು ಕೇಳಿ ನಡೆಯಲು ಆರಂಭಿಸಿದರು. ಆಗಲೇ ದರ್ಶನ್ ಚೇಂಜ್ ಆದರು. ಆಗಲೇ ಶಾಸ್ತ್ರಿ ದಾರಿ ತಪ್ಪಿದರು.
ಕಪ್ಪು ಚುಕ್ಕೆ
ತನ್ನ ಗೆಳತಿ ಪವಿತ್ರಾ ಗೌಡಾಗೆ ಅಶ್ಲೀಲ ಮೆಸೇಜ್ ಮಾಡಿದ್ದರಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ತಮ್ಮ ಅಭಿಮಾನಿಗಳ ಸಹಾಯದಿಂದ ಬೆಂಗಳೂರಿಗೆ ಕರೆಸಿಕೊಂಡು ಚಿತ್ರ ಹಿಂಸೆ ನೀಡಿದ್ದಾರೆ. ಈ ಘಟನೆಯಲ್ಲಿ ರೇಣುಕಾಸ್ವಾಮಿ ಕೊಲೆ ಸಹ ನಡೆದಿದೆ. ಈ ಕೊಲೆ ಮುಚ್ಚಿ ಹಾಕಲು ಬೇಕಾದ ಎಲ್ಲ ಪ್ರಯತ್ನ ಮಾಡಿದ್ದ ದರ್ಶನ್, ವಿಫಲರಾಗಿ ಮೈಸೂರಿನಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಪೊಲೀಸ್ ಕಸ್ಟಡಿಯನ್ನು ಮುಗಿಸಿರುವ ದರ್ಶನ್, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ಗೋಡೆಯ ಮಧ್ಯದಲ್ಲಿ ದಿನವನ್ನು ದೂಡುವಂತೆ ಆಗಿದೆ.
ಜೈಲಿನಲ್ಲಿ ಏನು ಮಾಡ್ತಾ ಇದ್ದಾರೆ?
ದರ್ಶನ್‌ಗೆ ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವ ಹಾಗೆ, ನಾಲ್ಕು ಗೋಡೆಯ ಮಧ್ಯದಲ್ಲಿ ಜೀವನ ಕಳೆಯುವಾಗ ಈಗ ಎಲ್ಲವೂ ನೆನಪು ಆಗುತ್ತಿದೆ. ಕೆಟ್ಟ ಸಮುಯದಲ್ಲಿ ಎಲ್ಲವೂ ನೆನಪು ಆಗುತ್ತದೆ ಎನ್ನುತ್ತಾರಲ್ಲಾ ಹಾಗೆ.. ದರ್ಶನ್‌ಗೆ ಈಗ ದೊಡ್ಡವರ ಮಾತುಗಳಿಗೆ ಇರುವು ಮರ್ಯಾದೆ ತಿಳಿಯುತ್ತದೆ. ಏಕೆ ದೊಡ್ಡವರಿಗೆ ಗೌರವ ನೀಡಬೇಕು ಎಂಬುದು ಅರ್ಥವಾಗುತ್ತಿದೆ. ತಾವು ಎಡವಿದಾಗ ಸರಿ ಮಾಡುವ ಜನರು ನಮ್ಮ ಸುತ್ತಮುತ್ತ ಇಲ್ಲದೇ ಇದ್ದರೆ ಏನಾಗುತ್ತದೆ ಎಂಬ ಕಲ್ಪನೆ ದರ್ಶನ್‌ಗೆ ಆಗುತ್ತದೆ.
ಆಗ ದರ್ಶನ್‌ರನ್ನು ಕುರಿಸಿಕೊಂಡು ಚಿತ್ರೋದ್ಯಮದ ಹಲವರು ಹಾಗೂ ಕುಟುಂದ ಆಪ್ತರು, ನೀನು ಸರಿಹೋಗು ಬೇಕು. ನೀನು ಮಾಡುತ್ತಿರುವ ಕೆಲಸ ಸರಿಯಲ್ಲ. ಚಟಗಳಿಗೆ ಕಡಿವಾಣ ಹಾಕಬೇಕು ಎಂದು ಕಿವಿ ಮಾತು ಹೇಳಿದ್ದರು. ಆದರೆ ಆಗೆಲ್ಲಾ ಕ್ಯಾರೆ ಎನ್ನದ ದರ್ಶನ್‌ಗೆ ಈಗ ಆ ಮಾತುಗಳೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಿವಿಗೆ ನಾಟುತ್ತಿವೆ.
ದರ್ಶನ್ ಜೈಲಿನಲ್ಲಿ ಏನು ಮಾಡಬೇಕು?
ದರ್ಶನ್ ಜೈಲಿಗೆ ಹೋಗುತ್ತಲೇ ಅವರ ಆಪ್ತರು ಹಾಗೂ ಹಿರಿಯರು ದರ್ಶನ್ ಜೈಲಿನಲ್ಲಿ ಏನು ಮಾಡಬೇಕು ಎಂಬ ಬಗ್ಗೆ ತಿಳಿಸಿದ್ದಾರೆ. ದರ್ಶನ್ ನಾಲ್ಕು ಗೋಡೆಯ ಮಧ್ಯದಲ್ಲಿ ತನ್ನನ್ನು ತಾನು ಇನ್ನು ಗಟ್ಟಿ ಮಾಡಿಕೊಳ್ಳಲು ಹಲವು ದಾರಿಗಳಿವೆ. ಆಗಿದನ್ನು ಮರೆತು ಜೈಲಿನಿಂದ ಹೊರ ಬಂದು ಹೊಸ ಜೀವನ ಆರಂಭಿಸಬೇಕಿದೆ ಎಂದು ಆಶಿಸಿದ್ದಾರೆ.
ದರ್ಶನ್ ಜೈಲಿನಲ್ಲಿ ಮಹಾತ್ವಾಗಾಂಧಿ, ಸ್ವಾಮಿ ವಿವೇಕಾನಂದ, ಡಾಕ್ಟರ್ ರಾಜಕುಮಾರ್, ಅವರ ಪುಸ್ತಕಗಳನ್ನು ಓದಬೇಕು. ಅಲ್ಲದೆ ಡಾ ರಾಜಕುಮಾರ್ ಅವರ ನಟಿಸಿರುವ ಚಿತ್ರಗಳನ್ನು ನೋಡಬೇಕು. ತೆರೆಯ ಮೇಲೆ ಅಣ್ಣಾವರು ನೈಜ ನಟನೆ, ನಿಜ ಜೀವನದಲ್ಲಿ ಹೇಗೆ ಮೈಗೂಡಿಸಿಕೊಳ್ಳಬೇಕು ಎಂಬ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದ್ದಾರೆ.












Click it and Unblock the Notifications