Actor Darshan Case: ನಟ ದರ್ಶನ್‌ ವಿಷಯದಲ್ಲಿ ಮುಂದೆ ಆಗೋದೆ ಬೇರೆ.! ಪೊಲೀಸ್‌ ಅಧಿಕಾರಿ ಹೇಳಿದ್ದೇನು?

Actor Darshan Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ & ಪಟಾಲಂ ಗ್ಯಾಂಗ್‌ ಜೈಲು ಸೇರಿದ್ದಾರೆ. ಪ್ರಕರಣದ ತನಿಖೆಯನ್ನು ಈಗಾಗಲೇ ಪೊಲೀಸರು ಚರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಈ ನಡುವೆಯೇ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ನಟ ದರ್ಶನ್‌ ಭವಿಷ್ಯದಲ್ಲಿ ಮುಂದೆ ಏನೆಲ್ಲ ಆಗಬಹುದು ಎನ್ನುವ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ದರ್ಶನ್ ಮತ್ತು ಆತನ ಗ್ಯಾಂಗ್ ಜೈಲು ಸೇರಿದ್ದಾರೆ. ಕಳೆದ ಒಂದು ತಿಂಗಳಿನಿಂದ ವಿಚಾರಣೆ ನಡಯುತ್ತಿದ್ದು, ಎಲ್ಲಿವೂ ದರ್ಶನ್ ಜೈಲಿನಿಂದ ಹೊರಗಡೆ ಬರುತ್ತಾರೆಯಾ ಅಥವಾ ಇಲ್ಲವಾ ಅನ್ನುವ ಸ್ಪಷ್ಟತೆ ಯಾರಿಗೂ ಸಿಗುತ್ತಿಲ್ಲ. ಈ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ಸಾಕ್ಷಿಗಳು ಪೊಲೀಸರ ಕೈಸೇರಿವೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಮೂಲಕ ದರ್ಶನ್‌ ಬಿಡುಗಡೆ ಅಸಾಧ್ಯ ಎನ್ನುವ ಮಾತುಗಳಷ್ಟೇ ಕೇಳಿಬರುತ್ತಿವೆ.

What did retired senior police officer say about actor Darshan Bail

ದರ್ಶನ್‌ ವಿರುದ್ಧ ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿರುವ ಪೊಲೀಸರಿಗೆ ಈ ಪ್ರಕರಣ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗೆ ಆಗಿದೆ. ಮತ್ತೊಂದೆಡೆ ದರ್ಶನ್‌ಗೆ ಜಾಮೀನು‌ ಸಿಗುವುದು ಯಾವಾಗ? ಈ ಪ್ರಕರಣ ಅಂತ್ಯ ಕಾಣುವುದು ಯಾವಾಗ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ.

ಇನ್ನು ಈ ಕುರಿತು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಮ್ಮ ಪೊಲೀಸರು ಈಗಾಗಲೇ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ರೇಣುಕಾಸ್ವಾಮಿ ಮೃತದೇಹ ಸಿಕ್ಕಿದಾಗಿನಿಂದಲೂ ಪೊಲೀಸರು ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದು, ಈಗಾಗಲೇ ಸುಮಾರು ಎವಿಡೆನ್ಸ್‌ ಸಿಕ್ಕಿವೆ ಎನ್ನಲಾಗುತ್ತಿದೆ ಆದ್ದರಿಂದ ಬಿಡುಗಡೆ ಅಸಾಧ್ಯ ಎನ್ನುವ ಮಾತುಗಳನ್ನು ಹೇಳಿದ್ದಾರೆ.

"ಹೀಗೆಲ್ಲ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ ಅಂದರೆ, ಈ ಸಮಸ್ಯೆಯನ್ನು ಪೊಲೀಸ್‌ನವರ ಮೂಕಾಂತರವೇ ಅರ್ಧ ಗಂಟೆಯಲ್ಲೇ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ದಡ್ಡರ ಗುಂಪಿನವರು ಮಾಡುವಂತೆ ಕಿಡ್ನ್ಯಾಪ್‌ ಮಾಡಿ ಹತ್ಯೆ ಮಾಡಿರುವುದು ಸರಿಯಲ್ಲ. ಒಂದೇ ಒಂದು ಮಾತು ಹೀಗೆ ಆಗಿದೆ. ಇದನ್ನು ಬಗೆಹರಿಸಿ, ಆತನಿಗೆ ವಾರ್ನ್‌ ಮಾಡಿ ಎಂದು ಹೇಳಿದ್ದರೆ ಸಾಕಾಗಿತ್ತು. ಎಲ್ಲವೂ ಯಾವುದೇ ಸಮಸ್ಯೆ ಇಲ್ಲದ ಹಾಗೆ ಬಗೆಹರಿದು ಹೋಗುತ್ತಿತ್ತು," ಎಂದು ಹೇಳಿದ್ದಾರೆ.

ನೇರವಾಗಿ ಹೇಳಬೇಕೆಂದರೆ ಕಿಡ್ನ್ಯಾಪ್‌ ಮಾಡಿರುವುದು ಕಾನೂನಿನ ಪ್ರಕಾರ ಒಂದು ದೊಡ್ಡ ಅಪರಾಧವಾಗಿದೆ. ಅಷ್ಟೇ ಅಲ್ಲದೆ, ಬಳಿಕ ಶೆಡ್‌ ಕರ್ಕೊಂಡ್‌ ಬಂದು ಭೀಕರವಾಗಿ ಕೊಲೆ ಮಾಡಿರುವುದು ಕೂಡ ದೊಡ್ಡ ಅಪರಾಧವೇ ಆಗಿದೆ. ಇಂತಹ ಕೆಲಸಗಳನ್ನೆಲ್ಲ ದಡ್ಡರ ಗುಂಪುಗಳು ಮಾಡುತ್ತವೆ. ಆದರೆ ನಟ ದರ್ಶನ್‌ ಕೂಡ ಅದೇ ಸಾಲಿಗೆ ಸೇರಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಕಾರಣಕ್ಕೆ ನಟ ದರ್ಶನ್‌ & ಗ್ಯಾಂಗ್‌ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿರುವುದಾಗಿ ಈಗಾಗಲೇ ಪ್ರಕರಣ ದಾಖಲಾಗಿದೆ. ಇನ್ನೂ ಈ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಗುವುದು ಬಹುತೇಕ ಅಸಾಧ್ಯ ಎಂದೇ ಹೇಳಲಾಗುತ್ತಿದೆ.

ಮತ್ತೊಂದೆಡೆ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ನನ್ನು ಬಿಡಿಸಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ತೆರೆಮರೆಯಲ್ಲಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಇವೆಲ್ಲವೂ ವ್ಯರ್ಥ ಆಗುತ್ತಲೇ ಇವೆ. ಆದ್ದರಿಂದ ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ಜೈಲಿನಲ್ಲಿ ಪತಿ ದರ್ಶನ್‌ನನ್ನು ಭೇಟಿ ಮಾಡಿ ಜಾಮೀನು ಸಿಗುವುದು ಅಸಾಧ್ಯ ಎನ್ನುವ ಶಾಕಿಂಗ್‌ ಮಾಹಿತಿಯನ್ನು ನೀಡಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+