ಬೆಂಗಳೂರು ಪಾಟ್ನಾ ನಡುವೆ ವಿಶೇಷ ರೈಲು
ಬೆಂಗಳೂರು. ಮೇ.24: ಬೇಸಗೆಯಲ್ಲಿ ರಾಜ್ಯದಿಂದ ಉತ್ತರ ಭಾರತದ ಕಡೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪೂರ್ವ ಮಧ್ಯ ರೈಲ್ವೆ, ಪಾಟ್ನಾ- ಬೆಂಗಳೂರು ನಡುವೆ ಸೂಪರ್ ಫಾಸ್ಟ್ ವಾರದ ವಿಶೇಷ ರೈಲನ್ನು ಆರಂಭಿಸಲಿದೆ.
ಈ ರೈಲು ಮೇ.28ರಿಂದ ಜೂನ್ 27ರವರೆಗೆ ಓಡಲಿದ್ದು, ಈ ಅವಧಿಯಲ್ಲಿ ಒಟ್ಟು ಐದುಬಾರಿ ಈ ಮಾರ್ಗದಲ್ಲಿ ರೈಲು ಸಂಚರಿಸಲಿದೆ.ಪಾಟ್ನಾ- ಬೆಂಗಳೂರು ಸೂಪರ್ ಫಾಸ್ಟ್ ಕಾಂಟೋನ್ಮೆಂಟ್ ವಿಶೇಷ ರೈಲು ಮೇ.28ರಿಂದ ಜೂನ್ 25ರವರೆಗೆ ಪ್ರತಿ ಬುಧವಾರ ಮಧ್ಯಾಹ್ನ 1 ಗಂಟೆಗೆ ಪಾಟ್ನಾದಿಂದ ಹೊರಟು ಶುಕ್ರವಾರ ಬೆಳಗ್ಗೆ 7.30ಕ್ಕೆ ಬೆಂಗಳೂರು ತಲುಪಲಿದೆ.[ಬೆಂಗಳೂರಿನಿಂದ ಶಿರಡಿಗೆ ವಿಶೇಷ ರೈಲು ಯಾತ್ರೆ]

ಬೆಂಗಳೂರು- ಪಾಟ್ನಾ ಸೂಪರ್ ಫಾಸ್ಟ್ ರೈಲು ಮೇ.30ರಿಂದ ಜೂನ್ 27ರವರಗೆ ಪ್ರತಿ ಶುಕ್ರವಾರ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಾಟ್ನಾ ತಲುಪಲಿದೆ.[ತಿರುಪತಿಗೆ ಎಸಿ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ರೈಲು]
ಈ ವಿಶೇಷ ರೈಲಿನಲ್ಲಿ 24 ಕೋಚ್‌ಗಳಿದ್ದು, 22 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳಿದ್ದರೆ, ಎರಡು ಲಗೇಜ್ ಕೋಚ್‌ಗಳು ಇರುತ್ತವೆ ಎಂದು ಪೂರ್ವ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications