ಅತೃಪ್ತರ ಶಾಸಕರನ್ನು ಜೊತೆಗೆ ಕರೆದುಕೊಳ್ಳುತ್ತೇವೆ: ಮಾಧುಸ್ವಾಮಿ
ಬೆಂಗಳೂರು, ಜುಲೈ 23: ಬಿಜೆಪಿಗೆ ಸಹಾಯ ಮಾಡಿದ ಎಲ್ಲರನ್ನೂ ನಾವು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಬಿಜೆಪಿ ಮುಖಂಡ ಮಾಧುಸ್ವಾಮಿ ಅವರು ಹೇಳಿದರು.
ವಿಶ್ವಾಸಮತದಲ್ಲಿ ಸರ್ಕಾರವನ್ನು ಸೋಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಒಟ್ಟಾಗಿಯೇ ಇರುತ್ತೇವೆ, ಅತೃಪ್ತ ಶಾಸಕರೂ ನಮ್ಮವರೇ ಎಂದರು.
ಯಾರೂ ಸಹ ಪಕ್ಷಕ್ಕೆ ಗುಲಾಮರಲ್ಲ, ಪಕ್ಷಕ್ಕೆ ರಾಜೀನಾಮೆ ಕೊಡಬಾರದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂದೇನೂ ನಿಯಮವಿಲ್ಲ ಎಂದು ಮಾಧುಸ್ವಾಮಿ ಅವರು ಹೇಳಿದರು.

ಅತೃಪ್ತ ಶಾಸಕರು ನಾವೂ ಒಗ್ಗಟ್ಟಾಗಿ ಇರುತ್ತೇವೆ, ಅವರನ್ನು ಅತಂತ್ರ ಮಾಡುವುದಿಲ್ಲ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಧುಸ್ವಾಮಿ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.
ಇಂದು ಸದನಕ್ಕೆ 20 ಮಂದಿ ಗೈರಾಗಿದ್ದರು. ಅಷ್ಟೂ ಜನರು ಬಿಜೆಪಿಯ ಜೊತೆಯಾಗಿ ಇದ್ದರು ಎನ್ನಲಾಗಿದೆ.












Click it and Unblock the Notifications