Get Updates
Get notified of breaking news, exclusive insights, and must-see stories!

ಗಮನಿಸಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.5ರಂದು ನೀರು ಸರಬರಾಜು ವ್ಯತ್ಯಯ

ಬೆಂಗಳೂರು, ಜನವರಿ 04: ಬೆಂಗಳೂರಿನಲ್ಲಿ ಜನವರಿ 5ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ತೊರೆಕಾಡನಹಳ್ಳಿ ವ್ಯಾಪ್ತಿಯ ಕಾವೇರಿ ನೀರು ಸರಬರಾಜು ಯೋಜನೆಯ ಒಂದು ಮತ್ತು ಎರಡನೇ ಹಂತದಲ್ಲಿ ವಿವಿಧ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಿಂದಾಗಿ ಜನವರಿ 5ರಂದು ಹಾಗೂ ಜನವರಿ 6ರಂದು ನಗರದ ಹಲವಾರು ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ.

ಕಾಮಗಾರಿ ಕಾರಣದಿಂದಾಗಿ ಈ ಅವಧಿಯಲ್ಲಿ ನಗರದ ಹಲವಾರು ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 5ರಂದು ರಾತ್ರಿ 12:30ರಿಂದ ಜನವರಿ 6ರ ರಾತ್ರಿ 11:30ರವರೆಗೆ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಇನ್ನು ಈಗಾಗಲೇ ಕಾಮಗಾರಿ ಹಿನ್ನೆಲೆಯಿಂದಾಗಿ ನಗರದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗುವ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದೆ. ಜನವರಿ 3ರಂದು ಹಲವಾರು ಕಡೆ ವಿದ್ಯುತ್‌ ವ್ಯತ್ಯಯವಾಗಿದೆ. ಇನ್ನು ಜನವರಿ 4 ಹಾಗೂ 5ರಂದು ಕೂಡಾ ನಗರದ ಹಲವಾರು ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ. ಇನ್ನು ನಗರದ ಯಾವೆಲ್ಲಾ ಪ್ರದೇಶದಲ್ಲಿ ಜನವರಿ 5ರಂದು ಹಾಗೂ ಜನವರಿ 6ರಂದು ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ತಿಳಿಯಲು ಮುಂದೆ ಓದಿ....

Water Supply Shutdown in These Bengaluru Areas: Heres Details

ಈ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯ

ವಿದ್ಯಾಪೀಠ, ಕತ್ತರಿಗುಪ್ಪೆ, ಬಸವನಗುಡಿ, ಕುಮಾರಸ್ವಾಮಿ ಬಡಾವಣೆ, ಇಸ್ರೋ ಲೇಔಟ್‌, ದೊಮ್ಮಲೂರು, ಆಡುಗೋಡಿ, ಕೋರಮಂಗಲ, ಕೆಎಚ್‌ಬಿ ಕಾಲನಿ, ಜಯನಗರ, ಕಸ್ತೂರಬಾನಗರ, ಹೊಸಗುಡ್ಡದಹಳ್ಳಿ, ಬಾಪೂಜಿನಗರ, ಕಲಾಸಿಪಾಳ್ಯ, ಸುಧಾಮನಗರ, ಕೆಜಿ ನಗರ, ಪಾದರಾಯನಪುರ, ಜಗಜೀವನರಾಮ್‌ ನಗರ, ಕರಿಸಂದ್ರ, ಇಟ್ಟಮಡು, ಹೊಸಕೆರೆಹಳ್ಳಿ, ಪದ್ಮನಾಭನಗರ, ಉತ್ತರಹಳ್ಳಿ, ಚಿಕ್ಕಲ್ಲಸಂದ್ರ, ಶಾಂತಿನಗರ, ಸಿದ್ಧಾಪುರ, ವಿಲ್ಸನ್‌ ಗಾರ್ಡನ್‌, ಲಕ್ಕಸಂದ್ರ, ಜೆಪಿನಗರ, ಗಾಂಧಿನಗರ, ಚಿಕ್ಕಪೇಟೆ, ಶಿವಾಜಿನಗರ, ಬ್ಯಾಡರಹಳ್ಳಿ, ಕಾಕ್ಸ್‌ಟೌನ್‌, ಡಿಜೆ ಹಳ್ಳಿ, ನಾಗವಾರ, ಚಾಮರಾಜಪೇಟೆ, ಗಿರಿನಗರ, ಬ್ಯಾಟರಾಯನಪುರ, ಅವಲಹಳ್ಳಿ, ಶ್ರೀನಗರ, ಬನಶಂಕರಿ, ಯಶವಂತಪುರ, ಮಲ್ಲೇಶ್ವರ, ವಸಂತನಗರ, ಟೌನ್‌ಹಾಲ್‌, ಲಾಲ್‌ಬಾಗ್‌ ರಸ್ತೆ, ಕಾಟನ್‌ಪೇಟೆ, ಜಯಮಹಲ್‌, ಶೇಷಾದ್ರಿಪುರ, ಸದಾಶಿವನಗರ, ಪ್ಯಾಲೇಸ್‌ ಗುಟ್ಟಹಳ್ಳಿ, ಸಂಜಯನಗರ, ಡಾಲರ್ಸ್ ಕಾಲನಿ ಗೆದ್ದಲಹಳ್ಳಿ, ಕಾವಲ್‌ ಬೈರಸಂದ್ರ, ಎಂಜಿ ರಸ್ತೆ, ಎಚ್‌ಎಎಲ್‌ ಎರಡನೇ ಹಂತ, ಇಂದಿರಾನಗರ, ಜೀವನಭೀಮಾನಗರ, ಮಾರುತಿನಗರ, ನೇತಾಜಿನಗರ, ಹಲಸೂರು, ಜೋಗುಪಾಳ್ಯ, ಬಿಟಿಎಂ ಬಡಾವಣೆ, ಮಡಿವಾಳ, ಡೇರಿ ಸರ್ಕಲ್‌, ನಿಮ್ಹಾನ್ಸ್‌ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜು ಇರುವುದಿಲ್ಲ. ಎಂದು ಜಲಮಂಡಳಿ ಮಾಹಿತಿ ನೀಡಿದೆ.

ಇಂದು ಈ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿನಾಯಕ ನಗರ, ಪಂಚಲಿಂಗೇಶ್ವರ, ಎಸ್‌ಆರ್ ನಗರ, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಮಾರುತಿ ಲೇಔಟ್, ವಿಟ್ಟಲ್‌ ನಗರ, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತಪುರ ಮುಖ್ಯ ರಸ್ತೆ, ವಸಂತ ವಲ್ಲಭ ನಗರ, ಕುವೆಂಪು ನಗರ ಮುಖ್ಯ ರಸ್ತೆ, ವಸಂತಪುರ, ಎಲ್‌ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಜಯನಗರ 8ನೇ ಬ್ಲಾಕ್, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಬಿಡಿಎ ಕಾಂಪ್ಲೆಕ್ಸ್, ಕೆಐಎಂಎಸ್ ಕಾಲೇಜು , ಜೆ.ಪಿ.ನಗರ 2ನೇ ಹಂತ, ಜೆ.ಪಿ.ನಗರ 3ನೇ ಹಂತ, ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಡಾಲರ್ಸ್ ಲೇಔಟ್, ಚನ್ನಮ್ಮನ ಅಚ್ಚುಕಟ್ಟು, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತ, ಚಿಕ್ಕಲಸಂದ್ರ, ಉತ್ತರಹಳ್ಳಿ ಮುಖ್ಯರಸ್ತೆ, ಸಾರ್ವಭೌಮನಗರ ಭಾಗ, ರಾಮಾಂಜನೇಯ ನಗರದ ಭಾಗ, ವಿವೇಕನಗರ, ನಾಗಸಂದ್ರ, ರಾಜು ಕಾಲೋನಿ, ಮುನ್ನಿರೆಡ್ಡಿ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ, ಬಿಡಿಎ 2ನೇ ಹಂತ ಮತ್ತು ಬಿಡಿಎ 2ನೇ ಹಂತದಲ್ಲಿ ವಿದ್ಯುತ್‌ ಕಡಿತ ಉಂಟಾಗಲಿದೆ. ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸ್ವಾಮಿ ವಿವೇಕಾನಂದ ರಸ್ತೆ, ಕೆಜಿ ಪುರ ಮುಖ್ಯರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ದೊಮ್ಮಲೂರು ಗ್ರಾಮ, ಬಾಣಸವಾಡಿ ಮುಖ್ಯರಸ್ತೆ, ಬಿ ಚನ್ನಸಂದ್ರ, ಯುಇಲಾಲ್ ನಗರ, ನಾಗವಾರ, ಚಾಣಕ್ಯ ಲೇಔಟ್ ಗೆದ್ದಲಹಳ್ಳಿ, ಹಿರೇಮಠ ಲೇಔಟ್, ಬಸವಣ್ಣ ಲೇಔಟ್, ಕಾಫಿ ಬೋರ್ಡ್ ಲೇಔಟ್ ಮತ್ತು ಕೆ.ಎಸ್. ರಸ್ತೆಯಲ್ಲಿ ವಿದ್ಯುತ್‌ ಕಡಿತ ಉಂಟಾಗಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಅಯ್ಯಪ್ಪ ದೇವಸ್ಥಾನ ರಸ್ತೆ, ಶ್ರೀರಾಮ್‌ಪುರ, ಯಶವಂತಪುರ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಜಾಲಹಳ್ಳಿ ಗ್ರಾಮ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಸಿಂಗಾಪುರ, ಹೆಗಡೆ ನಗರ, ಶಿವನಹಳ್ಳಿ, ಚೊಕ್ಕನಹಳ್ಳಿ, ಪಾಲನಹಳ್ಳಿ, ಪುಟ್ಟೇನಹಳ್ಳಿ, ಹಳೇಹಳ್ಳಿ, ಪುಟ್ಟೇನಹಳ್ಳಿ , ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ತುಮಕೂರು ಮುಖ್ಯರಸ್ತೆ ಟಿ ದಾಸರಹಳ್ಳಿ, ಹಂಸಸಾಗರ, ಎಂಜಿ ನಗರ, ವಿಎಚ್‌ಬಿಸಿಎಸ್ ಲೇಔಟ್, ಕುರುಬರಹಳ್ಳಿ, ಜೆಸಿ ನಗರ, ನಂದಿನಿ ಲೇಔಟ್, ಸಾಕಮ್ಮ ಬಡಾವಣೆ, ಪರಿಮಳ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸೀತಾ ವೃತ್ತ, ಬೈತ್ರನಪುರದ ಕೆಲವು ಭಾಗಗಳು, ಬಿಎಚ್‌ಇಎಲ್ ಲೇಔಟ್, ದೊಡ್ಡಬೆಲೆ ರಸ್ತೆ, ಅನ್ನಪೂರ್ಣೇಶ್ವರಿ ಲೇಔಟ್, ಟಿಜಿ ಪಾಳ್ಯ, ವಿದ್ಯಾಮಾನನಗರ, ಕೆರೆಚೂಡಳ್ಳಿ, ಹೊಸದೊಡ್ಡಿ, ಸದನಪಾಳ್ಯ, ಬಿಡಿ ಕಾಲೋನಿ, ದುಬಾಸಿಪಾಳ್ಯ, ಉತ್ತರಹಳ್ಳಿ ರಸ್ತೆ, ಕೋಣಚಂದ್ರಾಪುರ ರಸ್ತೆ, ಮಲ್ಲತ್ತಳ್ಳಿ ರಸ್ತೆ, ಕೋಡಿಬಪ್ಪಳ್ಳಿ ರಸ್ತೆ, ಅಂಬೇಡ್ಕರ್ ನಗರ, ಉಳ್ಳಾಲ ಬಸ್ ನಿಲ್ದಾಣ ಮತ್ತು ಬಿಡಿಎ ಕಾಲೋನಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. (ಒನ್‌ಇಂಡಿಯಾ ಸುದ್ದಿ)

Recommended Video

      ಓಮಿಕ್ರಾನ್ ರೂಪಾಂತರದ ಭೀತಿ: ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಹೊಸ ಮಾರ್ಗಸೂಚಿ ಸಾಧ್ಯತೆ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+