Get Updates
Get notified of breaking news, exclusive insights, and must-see stories!

Holi Festival: ಹಬ್ಬದಾಚರಣೆಗೆ ಬೆಂಗಳೂರು ಜಲಮಂಡಳಿ ಸೂಚಿಸಿದ ನಿರ್ಬಂಧಗಳೇನು?

ಬೆಂಗಳೂರು, ಮಾರ್ಚ್ 20: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೋಳಿ ಹಬ್ಬ (Holi Festival) ಆಚರಣೆಗೆ ಸಜ್ಜಾಗುತ್ತಿದೆ. ಕ್ಯಾಲೆಂಡರ್ ಪ್ರಕಾರ ಮಾರ್ಚ್ 24ರಂದು ಹೋಳಿ ಹಬ್ಬ ಇದೆ. ಕೆಲವೆಡೆ ಶುಕ್ರವಾರದಿಂದಲೇ ಸಂಭ್ರಮಾಚರಣೆ ಆರಂಭವಾಗುತ್ತಿದೆ. ಈ ಕಾರಣಕ್ಕೆ ನಗರಕ್ಕೆ ಅನ್ವಯವಾಗುವಂತೆ ಬೆಂಗಳೂರು ಜಲಮಂಡಳಿ (BWSSNB) ಖಡಕ್ ಸೂಚನೆಗಳನ್ನು ನಿಡಿದೆ.

ಬೆಂಗಳೂರು ಹೋಳಿ ಹಬ್ಬ ಕುರಿತು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಅವರು ಸಾರ್ವಜನಿಕ ಸಲಹಾ ರೂಪದ ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿ, ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ.

Water Crisis BWSSB What Was Gave Instructions to Holi Celebrations of Bengaluru

ಈ ಸಂಬಂಧ, ಉಲ್ಬಣವಾಗಿರುವ ಸಮಸ್ಯೆಗಳನ್ನು ಮಂಡಳಿಯೂ ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವದಾಗಿರುತ್ತದೆ. ನೀರು ಉಳಿಸಬೇಕಿದೆ.

ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಬೇಡ

ಹೋಳಿ ಹಬ್ಬ ಸಾಂಸ್ಕೃತಿಕವಾದ ಆಚರಣೆಯ ಹಬ್ಬ. ಇದನ್ನ ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಬೇಡ ಎಂದು ಹೇಳಿದ್ದಾರೆ.

ಹಬ್ಬದ ಸಂದರ್ಭದಲ್ಲಿ ನೀವು ಮನರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್‌ ಡ್ಯಾನ್ಸ್‌ ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸಬಾರದು. ಜಲಮಂಡಳಿಯ ಸೂಚನೆ ಪಾಲಿಸುವ ಮೂಲಕ ನೀರು ರಕ್ಷಣೆಗೆ ಮನವಿ ಮಾಡಿದ್ದೇವೆ ಎಂದರು.

Water Crisis BWSSB What Was Gave Instructions to Holi Celebrations of Bengaluru

ಅಂತರ್ಜಲ ಕುಸಿತ: ಕುಡಿಯುವ ನೀರಿಗೆ ಸಮಸ್ಯೆ

ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿ ತಿಂಗಳು ಕಳೆಯುತ್ತಾ ಬಂದರೂ ಸಹ ಇನ್ನೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಕಾವೇರಿ ನೀರು ಪೂರೈಕೆಗೆ ಯಾವುದೇ ತೊಂದರೆ ಇಲ್ಲದಾದರೂ ಸಹಿತ, ಅಂತರ್ಜಲ ಕುಸಿತದಿದೆ. ಇದರಿಂದ ಬೋರ್‌ವೆಲ್‌ ನಲ್ಲಿ ನೀರು ಬರದೇ ಸಮಸ್ಯೆ ಉಂಟಾಗಿದೆ.

ಮಹಾನಗರದಲ್ಲಿ ಕಾವೇರಿ ನೀರಿನ ಜೊತೆಗೆ ಬೋರ್‌ವೆಲ್ ನೀರಿನ ಮೇಲಿನ ಅವಲಂಬನೆ ಸಾಕಷ್ಟು ಪ್ರಮಾಣದಲ್ಲಿ. ಇತ್ತ ನಿರೀಕ್ಷಿತ ಮಳೆ ಆಗದೇ ಜಲಾಶಯಗಳು ಬತ್ತಿ ಹೋಗಿವೆ. ಸದ್ಯ ನದಿಪಾತ್ರದಲ್ಲಿ ಇರುವ ನೀರು ಈ ಇಡೀ ಬೇಸಿಗೆಗೆ ಸಾಕಾಗುವುದು ಅನುಮಾನ. ಬೇಸಿಗೆ ಆರಂಭದಲ್ಲಿಯೇ ನೀರಿಗೆ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ.

ಆದ್ದರಿಂದ ಇರುವ ನೀರನ್ನು ಸುಸೂತ್ರವಾಗಿ, ಸಮರ್ಪಕವಾಗಿ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಹೋಳಿ ಹಬ್ಬದ ನೆಪದಲ್ಲಿ ಸುಖಾ ಸುಮ್ಮನೇ ನೀರು ಪೋಲಾಗುವುದು ಬೇಡ ಎಂದು ಜಲಮಂಡಳಿ ಬೆಂಗಳೂರಿನ ಜನರಿಗೆ ಮನವಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+