'ಮತ ಕ್ರೋಡೀಕರಣವೇ ಮತಾಂತರ ನಿಷೇಧ ಕಾನೂನು' ಸಿದ್ದರಾಮಯ್ಯ

ಬೆಂಗಳೂರು ಡಿಸೆಂಬರ್ 27: ಮತ ಕ್ರೋಡೀಕರಣವೇ ಮತಾಂತರ ನಿಷೇಧ ಕಾನೂನಿನ ಉದ್ದೇಶ. ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದು ರಾಜ್ಯದಲ್ಲಿ ಪರ ಮತ್ತು ವಿರೋಧಕ್ಕೆ ಕಾರಣವಾಗಿದೆ.

ಈ ಬಗ್ಗೆ ಸೋಮವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, 'ಬಲವಂತದ, ಆಸೆ ಆಮಿಷ ಒಡ್ಡಿ ಮೋಸದಿಂದ ಮತಾಂತರ ಮಾಡುವುದಕ್ಕೆ ನಮ್ಮ ಪಕ್ಷದ ವಿರೋಧವೂ ಇದೆ. ಸೆಕ್ಷನ್ 295 ರಡಿ ಕಾನೂನು ಕ್ರಮ ಜರುಗಿಸಲು ಸಂವಿಧಾನದಲ್ಲಿ ಅವಕಾಶವಿದೆ. ಮದುವೆಯ ಕಾರಣಕ್ಕೆ ಮತಾಂತರವಾದರೆ ಹತ್ತು ವರ್ಷಗಳ ವರೆಗೆ ಶಿಕ್ಷೆ ಕೊಡಬಹುದು ಎಂಬ ನಿಯಮ ಮತಾಂತರ ನಿಷೇಧ ಕಾಯ್ದೆಯಲ್ಲಿ ಇದೆ. ಒಬ್ಬ ಪುರುಷ ಅಥವಾ ಮಹಿಳೆ ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗೋದು ಮತಾಂತರವಾಗುತ್ತಾ? ಇದನ್ನು ನಿರ್ಬಂಧಿಸೋದು ಸಂವಿಧಾನ ಬಾಹಿರವಾಗುತ್ತದೆ. ಮತ ಕ್ರೋಢೀಕರಣವೇ ಮತಾಂತರ ನಿಷೇಧ ಕಾನೂನಿನ ಉದ್ದೇಶ. ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಹೊರಟಿದ್ದಾರೆ' ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಜ್ಯದಲ್ಲಿ ಕೊರೊನಾದಿಂದಾಗಿ ಜನ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ನಿರುದ್ಯೋಗ, ಭ್ರಷ್ಟಾಚಾರ, ಹಸಿವು, ಬಡತನ ಹೀಗೆ ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಇದೆಲ್ಲದನ್ನು ಬಿಟ್ಟು, ಇವುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಮಾಡುತ್ತಿರುವ ಹುನ್ನಾರವಿದು. ಈ ಕಾಯ್ದೆ ಒಂದು ಸೀಮಿತ ಧರ್ಮವನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ತರುತ್ತಿರುವ ದುರುದ್ದೇಶದ ಕಾಯ್ದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಸಿದ್ದರಾಮಯ್ಯ ಹೇಳಿದ್ದೇನು?

ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, 'ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ. ಸರ್ಕಾರದಲ್ಲಿ ಆಡಳಿತ ಯಂತ್ರವೇ ಇಲ್ಲದ ಕಾರಣ ಈ ವಿಚಾರ ಯಾವುದೇ ಪರಿಣಾಮ ಬೀರುವುದಿಲ್ಲ. ಅಧಿಕಾರಿಗಳಿಗೆ ವರ್ಗಾವಣೆಗೆ ಲಂಚ ಕೊಟ್ಟು ಸಾಕಾಗಿ ಹೋಗಿದೆ. ಈ ಸರ್ಕಾರ ತೊಲಗಿದರೆ ಸಾಕು ಎಂದು ಅವರಿಗೂ ಅನ್ನಿಸತೊಡಗಿದೆ. ಜನರ ಆಶಯವೂ ಇದೇ ಆಗಿದೆ' ಎಂದರು.

ಪಾದಯಾತ್ರೆಯಿಂದ ಕೊರೊನಾ ಬರಲ್ವೇ?

ಪಾದಯಾತ್ರೆಯಿಂದ ಕೊರೊನಾ ಬರಲ್ವೇ?

ರಾಜ್ಯದಲ್ಲಿ ಹೊರಡಿಸಿರುವ ಕೊರೊನಾ ಹಿನ್ನೆಲೆಯ ರಾತ್ರಿ ಕರ್ಫ್ಯೂಗೂ ಹಾಗೂ ನಮ್ಮ ಪಕ್ಷದ ಪಾದಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಪಾದಯಾತ್ರೆಯನ್ನು ನಾವು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಮಾಡುತ್ತೇವೆ. ಪಾದಯಾತ್ರೆಯ ತಯಾರಿ ಕೆಲಸ ನಡೆಯುತ್ತಿದೆ. ಕೊರೊನಾ ಇದ್ದಾಗಲೇ ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಈಗ ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ನಮಗೆ ಬೇರೆ ಅವರಿಗೆ ಬೇರೆ ಎಂದು ಎರಡೆರಡು ಕಾನೂನು ಇದೆಯಾ? ಹೀಗಾಗಿ ನಮ್ಮ ಪಾದಯಾತ್ರೆಗೆ ಸರ್ಕಾರ ಯಾವುದೇ ರೀತಿಯ ಕಡಿವಾಣ ಹಾಕಲು ಬರಲ್ಲ.

2009 ರ ನವೆಂರ್ 5 ರಂದು ಚಿದಾನಂದ ಮೂರ್ತಿ ಅವರ ನಾಯಕತ್ವದಲ್ಲಿ ಜೈದೇವ್, ನರಹರಿ, ಬಿ.ಎನ್ ಮೂರ್ತಿ, ಆರ್.ಲೀಲಾ, ಮತ್ತೂರ್ ಕೃಷ್ಣಮೂರ್ತಿ ಮುಂತಾದ ಆರ್.ಎಸ್.ಎಸ್ ಮೂಲದ ನಾಯಕರು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ರೂಪಿಸುವಂತೆ ಕಾನೂನು ಸಮಿತಿಗೆ ಮನವಿ ನೀಡಿದ್ದರು. ಇದರ ಜೊತೆಗೆ ಮಧ್ಯಪ್ರದೇಶದಲ್ಲಿ ಬಲವಂತದ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದಾರೆ. ಆ ಕಾನೂನು ಸರಿಯಾಗಿದೆ, ತಾವು ದಿ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಅಧಿನಿಯಮವನ್ನು ಮಾದರಿಯಾಗಿಟ್ಟುಕೊಂಡು, ಆ ಕಾನೂನಿನಲ್ಲಿ ಮಧ್ಯಪ್ರದೇಶ ತೆಗೆದು ಕರ್ನಾಟಕ ಎಂಬ ಪದ ಹಾಕಿದರೆ ಸಾಕು ಎಂದು ಸಲಹೆ ನೀಡಿದ್ದರು.

ಮಳೀಮಠ್ ಅವರು ಕಾನೂನು ಸಮಿತಿ ಅಧ್ಯಕ್ಷರಾಗಿದ್ದರು. ಅವರು ಒಂದು ಕರಡು ಪ್ರತಿ ರೂಪಿಸಿ ಸರ್ಕಾರಕ್ಕೆ ಕಳುಹಿಸಿದ್ದರು. 2015 ರಲ್ಲಿ ನಾನು ಅದನ್ನು ಸಚಿವ ಸಂಪುಟದ ಮುಂದೆ ಇಡುವಂತೆ ಸಹಿ ಮಾಡಿದ್ದೆ. ನಂತರ ಆ ಕಡತ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರ ಬಳಿ ಹೋಗಿತ್ತು, ನಾನೇ ಆಂಜನೇಯ ಅವರಿಗೆ ಅದನ್ನು ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಷರಾ ಬರೆಯುವಂತೆ ಹೇಳಿ ಕಡತವನ್ನು ಕ್ಲೋಸ್ ಮಾಡಿಸಿದ್ದೆ. ಬಿಜೆಪಿಯವರು ಬರೀ ಸುಳ್ಳು ಹೇಳುವವರಿಂದಲೇ ತುಂಬಿದೆ. ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ಬರೀ ಸುಳ್ಳು ಹೇಳೋರೆ. ಈ ಹಿಂದಿನ ಮತಾಂತರ ನಿಷೇಧ ಕರಡು ರೂಪಿಸಲು ತಮ್ಮದೇ ಸರ್ಕಾರ ಕಾರಣ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಇದನ್ನು ಆರ್.ಎಸ್.ಎಸ್ ನವರೇ ಮಾಡಿಸಿದ್ದು ಎಂದು ಈಶ್ವರಪ್ಪನವರೂ ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ನಮ್ಮ ಪಾತ್ರ ಏನಿರಲು ಸಾಧ್ಯ? ಎಂದರು.

ಹಲವು ವಿಚಾರಗಳ ಬಗ್ಗೆ ಚರ್ಚೆ

ಹಲವು ವಿಚಾರಗಳ ಬಗ್ಗೆ ಚರ್ಚೆ

ಬಿಟ್ ಕಾಯಿನ್ ಹಗರಣ, 40% ಕಮಿಷನ್ ಪ್ರಕರಣ, ರೈತ ವಿರೋಧಿ ಕಾನೂನುಗಳ ವಾಪಾಸಾತಿ ಮುಂತಾದ ವಿಚಾರಗಳ ಚರ್ಚೆ ಮಾಡಬೇಕು, ಸದನವನ್ನು ಒಂದು ವಾರ ವಿಸ್ತರಿಸಿ ಎಂದು ಹಲವು ಬಾರಿ ಮನವಿ ಮಾಡಿದೆ. ಸರ್ಕಾರ ಇದಕ್ಕೆ ಅವಕಾಶ ನೀಡದೆ ತರಾತುರಿಯಲ್ಲಿ ಸದನ ಮುಗಿಸಿತು. ಮುಂದೆ ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಅಥವಾ ಪ್ರಥಮ‌ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ. ಇದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+