ವೈದ್ಯರ ಭೇಟಿಗೂ ಮುನ್ನ ಈ ವೆಬ್ ಸೈಟ್ ಜಾಲಾಡಿ
ಬೆಂಗಳೂರು, ಫೆ. 18: ನಿಮ್ಮ ಲೊಕಾಲಿಟಿಯಲ್ಲಿರುವ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆಯಬೇಕಾ? ಹಾಗಾದರೆ ನಿಮ್ಮ ಮನೆಯ ಸುತ್ತಮುತ್ತ ಹತ್ತಾರು ಕ್ಲಿನಿಕ್ಕುಗಳು, ನರ್ಸಿಂಗ್ ಹೋಂಗಳು ಇರುತ್ತವೆ. ಆದರೆ ಹೋಗುವುದು ಯಾರಲ್ಲಿಗೆ, ಚಿಕಿತ್ಸೆ ಪಡೆಯುವುದು ಹೇಗೆ ಎಂಬ ಚಿಂತೆ, ಚಿಕಿತ್ಸೆಗಿಂತ ಹೆಚ್ಚಾಗಿ ನಿಮ್ಮನ್ನು ಬಾಧಿಸುತ್ತಿದೆಯಾ?
ಹಾಗಾದರೆ ಇದಕ್ಕೊಂದು ಮಾರ್ಗೋಪಾಯ ಇಲ್ಲಿದೆ. ಅದುವೇ ವೆಬ್ ಸೈಟ್ ದಾರಿ. ಅಂದರೆ ರೋಗಿಗಳು ಸರಿಯಾದ ವೈದ್ಯರನ್ನು ಗುರುತಿಸಲು ಬೆಂಗಳೂರಿನ ಒಂದಷ್ಟು ವೈದ್ಯರು ಮತ್ತು ಟೆಕ್ನಿಷಿಯನ್ನುಗಳು ಸೇರಿಕೊಂಡು ವೆಬ್ ಸೈಟ್ ಒಂದನ್ನು ಸೃಷ್ಟಿಸಿದ್ದಾರೆ.
doctree.in ಎಂಬ ಈ ಸೈಟನ್ನು ರೋಗಿಗಳ ನೆರವಿಗಾಗಿ ಹುಟ್ಟುಹಾಕಿರುವವರು ಡಾ. ಶ್ರೀನಿವಾಸನ್ ನಾರಾಯಣ- doctree.in ಸೈಟಿನ ವ್ಯವಸ್ಥಾಪಕ ಸಿಇಒ ಇವರೇ.

ವೈದ್ಯಕೀಯವಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು: ಈ ಮಾಹಿತಿಯನ್ನು ಆಧರಿಸಿ, ಡಾ. ಶ್ರೀನಿವಾಸನ್ ನಾರಾಯಣ ತಂಡದವರು ಸಮಂಜಸ ವೈದ್ಯರನ್ನು ನಿಮ್ಮ ಪರಿಶೀಲನೆಗೆ ತರುತ್ತಾರೆ.
ಇದಲ್ಲದೆ, ಹೆಚ್ಚಿನ ಮಾಹಿತಿಯೂ ಇರುತ್ತದೆ- knowledge branch. ಇದರಲ್ಲಿ ನಿರ್ದಿಷ್ಟ ಕಾಯಿಲೆ ಮತ್ತು ಚಿಕಿತ್ಸೆಗಳ ಬಗ್ಗೆ ಸ್ಥೂಲ ಮಾಹಿತಿಯಿರುತ್ತದೆ. ತನ್ಮೂಲಕ ರೋಗಿಗಳು ಸಕ್ರಿಯವಾಗಬಹುದು ಜತೆಗೆ ಸೂಕ್ತ ಚಿಕಿತ್ಸೆ ಪಡೆಯಬಹುದು.
ಈ Virtual Hospital ವ್ಯವಸ್ಥೆ ಮೂಲಕ ಸುಮಾರು 70 ವೈದ್ಯರು ನಿಮ್ಮ ಸೇವೆಗೆ ಲಭ್ಯವಾಗುತ್ತಾರೆ. ಸಂಸ್ಥೆಯ ಕಚೇರಿ ರಿಚ್ಮಂಡ್ ರಸ್ತೆಯಲ್ಲಿದೆ.












Click it and Unblock the Notifications