ವಿಡಿಯೋ; ಹೊಸಕೋಟೆಯಲ್ಲಿ ಬಿರಿಯಾನಿಗೆ 1.5 ಕಿ. ಮೀ. ಸಾಲು!
ಬೆಂಗಳೂರು, ಅಕ್ಟೋಬರ್ 11: ಇಲ್ಲಿ ಜನರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿಲ್ಲ, ಸರ್ಕಾರಿ ಕಚೇರಿಯಲ್ಲಿ ಯಾವುದೋ ದಾಖಲೆ ಪಡೆಯಲು ನಿಂತಿಲ್ಲ. ಮುಂಜಾನೆಯಿಂದಲೇ ಜನರು ಶಿಸ್ತಿನಿಂದ ಸಾಲಾಗಿ ನಿಂತಿರುವುದು ಬಿರಿಯಾನಿ ತಿನ್ನಲು.
ವಾರಾಂತ್ಯದಲ್ಲಿ ಬಿರಿಯಾನಿ ತಿನ್ನಲು ಜನರು ಹೀಗೆ ಸಾಲುಗಟ್ಟಿ ನಿಲ್ಲುವುದು ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮುಂಜಾನೆಯೇ ಎದ್ದು ಬೆಂಗಳೂರು ನಗರದಿಂದ ಹೊಸಕೋಟೆಗೆ ಬರುವ ಜನರು 4 ಗಂಟೆಗೆಲ್ಲಾ ಕ್ಯೂನಲ್ಲಿ ನಿಲ್ಲುತ್ತಾರೆ.
4 ಗಂಟೆಗೆ ನಿಂತರೆ 6.30ಕ್ಕೆ ನಿಮ್ಮ ಕೈಯಲ್ಲಿ ಘಮಘಮಿಸುವ ಬಿರಿಯಾನಿ ಇರುತ್ತದೆ. ಹೊಸಕೋಟೆಯ ಆನಂದ್ ಬಿರಿಯಾನಿ ಅಂಗಡಿ ಮುಂದೆ ಜನರು ಹೀಗೆ ಸಾಲುಗಟ್ಟಿ ನಿಲ್ಲುತ್ತಾರೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಜನ ಸಾಲುಗಟ್ಟಿ ನಿಲ್ಲುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹೋಸಕೋಟೆ ಧಮ್ ಬಿರಿಯಾನಿ ತಿಂದವರು ಅದರ ರುಚಿಗೆ ಸೋತು ಸಾಲುಗಟ್ಟಿ ನಿಲ್ಲುತ್ತಾರೆ. ಬೆಂಗಳೂರು ನಗರದಿಂದ ಸಾವಿರಾರು ಜನರು ಬಿರಿಯಾನಿ ತಿನ್ನವುದಕ್ಕಾಗಿಯೇ ಇಲ್ಲಿಗೆ ಓಡೋಡಿ ಬಂದು ಸಾಲಿನಲ್ಲಿ ನಿಲ್ಲುತ್ತಾರೆ.
"ನಾನು ಮುಂಜಾನೆ 4 ಗಂಟೆಗೆ ಬಂದಿದ್ದೇನೆ. 6.30ಕ್ಕೆ ನನ್ನ ಆರ್ಡರ್ ಸಿಕ್ಕಿತ್ತು. ಸುಮಾರು 1.5 ಕಿ. ಮೀ. ದೂರ ಜನರು ಸಾಲುಗಟ್ಟಿ ನಿಂತಿದ್ದಾರೆ" ಎಂದು ಬಿರಿಯಾನಿ ಸವಿಯಲು ಬಂದವರೊಬ್ಬರು ಹೇಳಿದ್ದಾರೆ.
#WATCH Karnataka: People queue up at an eatery in Hoskote to buy biryani.
— ANI (@ANI) October 11, 2020
A customer says, "I came here at 4 am, but got my order at 6:30 am, as there's a long queue of about 1.5 km for biryani. The food is too delicious, it's worth the wait." pic.twitter.com/ThiT3zmEM6












Click it and Unblock the Notifications