Watch Video: ಬೆಂಗಳೂರಲ್ಲಿ ಟ್ಯಾಂಕರ್ ಮಾಫಿಯಾ ಅಟ್ಟಹಾಸ; ಬೈಕ್ ಮೇಲೆ ಹರಿದ ಲಾರಿ, ಜಸ್ಟ್ ಮಿಸ್ ಆದ ಸವಾರ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಮಾಫಿಯಾ ಎಷ್ಟಿದೆ ಎಂದರೆ, ಲೈಸೆನ್ಸ್ ಇಲ್ಲದ, ಯುವಕನ ಕೈಗೆ ಲಾರಿ ಕೊಟ್ಟು ಕಳಿಸುವಷ್ಟು ಮತ್ತು ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡುವ ಮಟ್ಟಕ್ಕೆ ಬೆಳೆದಿದೆ. ನಗರದಲ್ಲಿ ಗುಂಡಿಗಳು ಬಿದ್ದ ಪ್ರಮುಖ ರಸ್ತೆಯೊಂದರಲ್ಲಿ ಬೈಕ್ ಮೇಲೆ ಟ್ಯಾಂಕರ್ ಲಾರಿಯು ಹರಿದಿದೆ. ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಿಟ್ ಆಂಡ್ ರನ್ ಮಾಡಿ ಹೊರಟಿದ್ದ ಲಾರಿಯನ್ನು ಸಾರ್ವಜನಿಕರು ಹಿಡಿದಿದ್ದಾರೆ. ಇದು ಬೆಂಗಳೂರು ನಗರದ ಮೂಲಸೌಕರ್ಯ, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ, ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಬೆಂಗಳೂರಿನ ವರ್ತೂರು ಮತ್ತು ಗುಂಜೂರು ವ್ಯಾಪ್ತಿಯಲ್ಲಿ ನಡೆದ ಭಯಾನಕ ಘಟನೆ ಇದಾಗಿದೆ. ಇಲ್ಲಿನ ಪ್ರಮುಖ ರಸ್ತೆಯೇ ಸಂಪೂರ್ಣ ಗುಂಡಿಮಯವಾಗಿದೆ. ನಿತ್ಯ ಸಂಜೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರಸ್ತೆಗುಂಡಿಗಳಲ್ಲಿ ನೀರು ತುಂಬಿದ್ದು, ಬೈಕ್ ಸವಾರರು ನೋಡಿಕೊಂಡು ನಿಧಾನವಾಗಿ ವಾಹನ ಚಾಯಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

Viral Video

ಬೈಕ್ ಮೇಲೆ ಹರಿದ ಲಾರಿ, ಸವಾರ ಜಸ್ಟ್ ಮಿಸ್!

ಈ ವೇಳೆ ಬೈಕ್ ಪಕ್ಕ ಬಂದ ಟ್ಯಾಂಕರ್ ಲಾರಿಯೊಂದು ನೋಡ ನೋಡುತ್ತಿದ್ದಂತೆ ಬೈಕ್ ಸವಾರನ ಮೇಲೆ ಎರಗಿದೆ. ರಸ್ತೆಗುಂಡಿ ತಪ್ಪಿಸುವಲ್ಲಿ ನಿರತನಾಗಿದ್ದ ಯುವಕ ಲಾರಿ ಮೈಮೇಲೆ ಬಂದಿದ್ದು ನೋಡಿ ಕೂಡಲೇ ಬೈಕ್ ಬಿಟ್ಟು ಒಂದು ಹೆಜ್ಜೆ ದೂರು ಸರಿಯುತ್ತಿದ್ದಂತೆ ಲಾರಿ ಹಿಂಬದಿ ಚಕ್ರ ಸಂಪೂರ್ಣ ಬೈಕ್ ಮೇಲೆ ಹರಿದಿದೆ. ಸವಾರ ಜಸ್ಟ್ ಮೀಸ್ ಆಗಿದ್ದಾನೆ! ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬೆಚ್ಚಿ ಬೀಳಿಸುವ ವಿಡಿಯೋ ಸ್ಥಳದಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇಂಟರ್‍‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.

ಆತಂಕಗೊಂಡ ಬೈಕ್ ಸವಾರ

ದೊಡ್ಡ ಅನಾಹುತದಿಂದ ತಪ್ಪಿಕೊಂಡ ಯುವಕನಿಗೆ ಏನು ಮಾಡಬೇಕೆಂದು ತೋಚದೇ ಆತಂಕಕ್ಕೆ ಒಳಗಾಗಿದ್ದಾರೆ. ಇಷ್ಟೆಲ್ಲ ಆದರೂ ಸಹಿತ ಟ್ಯಾಂಕರ್ ಲಾರಿ ಚಾಲಕ ಮಾತ್ರ ನಿಲ್ಲಿಸದೇ, ಕನಿಷ್ಠ ಪಕ್ಷ ತಿರುಗಿ ಸಹ ನೋಡದೇ ಹೋಗಿದ್ದಾನೆ. ಇದು ಟ್ಯಾಂಕರ್ ಮಾಫಿಯಾ ಎಷ್ಟರ ಮಟ್ಟಿಗೆ ಕಾನೂನು ಮೀರಿ ಬೆಳೆದಿದೆ ಎಂಬುದು ಗೊತ್ತಾಗುತ್ತದೆ.

ಹಿಟ್ & ರನ್ ಲಾರಿ ಹಿಡಿದ ಸಾರ್ವಜನಿಕರು ಶಾಕ್!

ಈ ಲಾರಿಯನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಾರಿಗೆ ಹಿಂದೆ ಮುಂದೆ ಎರಡು ಕಡೆಗೂ ರಿಜಿಸ್ಟರ್ ನಂಬರ ಪ್ಲೇಟೇ ಇಲ್ಲದ್ದು ನೋಡಿ ಜನ ದಂಗಾಗಿದ್ದಾರೆ. ಚಾಲಕ 18 ವರ್ಷ ದಾಟಿವನಂತೆ ಕಾಣುತ್ತಿಲ್ಲ. ಗಮನಿಸಬೇಕಾದ ಅಂಶವೆಂದರೆ ಸಾರ್ವಜನಿಕರು ಬೈಯ್ಯುತ್ತಿದ್ದಂತೆ ಚಾಲಕ ಐದು ದಿನಗಳ ಹಿಂದಷ್ಟೇ ಚಾಲನೆ ಕಲಿತಿದ್ದೇನೆ ಎಂದು ಹೇಳಿದ್ದಾನೆ. ಇದು ಮತ್ತಷ್ಟು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ವಾಹನ ಮಾಲೀಕನಿಗೆ ತಕ್ಕ ಶಿಕ್ಷೆಗೆ ಆಗ್ರಹ

ಐದು ದಿನಗಳ ಹಿಂದೆ ಚಾಲನೆ ಕಲಿತವರ ಕೈಲಿ ದೊಡ್ಡ ಲಾರಿ ಕೊಟ್ಟು ಕಳುಹಿಸುವ ಮೂಲಕ ನಗರದ ಬೈಕ್ ಸವಾರರ ಜೀವಕ್ಕೆ ಅಪಾಯ ಒಡ್ಡಲಾಗುತ್ತಿದೆ. ಲಾರಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಕೋರಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ, ವರ್ಷಗಳಿಂದ ಈ ಭಾಗದ ರಸ್ತೆ ಸರಿಪಡಿಸುವಂತೆ ವರ್ತೂರು, ಗಂಜೂರು ಭಾಗದ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸರ್ಕಾರ ಇತ್ತೀಚೆಗೆ ರಸ್ತೆ ಅಭಿವೃದ್ಧಿ ಕೆಲಸ ನಡೆಸಿತ್ತು. ಆದರೆ ದಿಢೀರನೇ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿತ್ತು.

ಇದರಿಂದಾಗಿ ಮಳೆಗಾಲದಲ್ಲಿ ರಸ್ತೆಯಲ್ಲಿ ಸಂಚಾರ ಮಾಡದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ನಿಧಾನವಾಗಿ ಚಲಿಸುತ್ತೇವೆ ಎಂದರೆ ರಸ್ತೆಗುಂಡಿಗಳು ಜನ ಜೀವ ಬಲಿಪಡೆಯಲು ಕಾದು ಕೂತಂತಿವೆ ಎಂದು ವಿಡಿಯೋವನ್ನು ಬೆಂಗಳೂರು ನಗರ ಪೊಲೀಸ್, ಜಿಬಿಎ, ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಂಬಂಧಿಸಿದ ಇಲಾಖೆಗೆ ಟ್ಯಾಗ್ ಮಾಡಿ ಹೊಣೆ ಮಾಡಲಾಗಿದೆ.

ಬೇರೆ ಅನಾಹುತವಾಗುವ ಮುನ್ನ ಎಚ್ಚೆತ್ತುಕೊಳ್ಳಿ..

ಜನರು ತಡೆಯುತ್ತಿದ್ದಂತೆ ನಿಲ್ಲಿಸಿದ ಟ್ಯಾಂಕರ್ ವಾಹನ ಚಾಲಕ ಅದ್ಯಾರಿಗೋ ಕರೆ ಮಾಡುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ನಂಬರ್ ಪ್ಲೇಟ್ ಇಲ್ಲದ ಲಾರಿ ಮಾಲೀಕರನ್ನು ಪತ್ತೆ ಮಾಡಬೇಕು. ಸೂಕ್ತ ತನಿಖೆ ಮಾಡಿ ಸಂಭವನೀಯ ಅನಾಹುತ ತಡೆಯಬೇಕು. ಈತನನ್ನು ಹೀಗೆಯೇ ಬಿಟ್ಟರೆ ಮುಂದೆ ಇನ್ನಾರದ್ದೋ ಜೀವ ಬಲಿ ಪಡೆಯುತ್ತಾನೋ ಗೊತ್ತಿಲ್ಲ! ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಸರ್ಕಾರ, ಪೊಲೀಸ್ ಅಧಿಕಾರಿಗಳ ಪ್ರತಿಕ್ರಿಯೆ, ಕ್ರಮಕ್ಕೆ ಜನ ಎದುರು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+