Bengaluru : ಬೈಕ್ ಹಿಂದೆ ಕೂತಿದ್ದಾಗಲೂ ಆಫೀಸ್ ಕೆಲಸ: ವೈರಲ್ ಆಯ್ತು ಫೋಟೊ
ಬೆಂಗಳೂರು ಐಟಿ ಹಬ್‌ನಲ್ಲಿ ಕೆಲಸ ಮಾಡುವುದು ಅನೇಕರ ಕನಸು, ಉತ್ತಮ ಸಂಬಳಕ್ಕಾಗಿ ಆಸೆ ಪಟ್ಟು ಎಷ್ಟೋ ಪದವೀಧರರು ಐಟಿ ಕಂಪನಿಗಳಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಉತ್ತಮ ಸಂಬಳದಷ್ಟೇ ಕೆಲಸದ ಒತ್ತಡ ಕೂಡ ಹೆಚ್ಚಾಗೇ ಇರುತ್ತದೆ. ಬೆಂಗಳೂರಿನ ಟ್ರಾಫಿಕ್ ಕೂಡ ಕೆಲಸಗಾರರಿಗೆ ದೊಡ್ಡ ಸಮಸ್ಯೆಯಾಗಿದೆ, ಅದಕ್ಕೆ ಸಾಕ್ಷಿ ಎನ್ನುವಂತೆ ಒಂದು ಫೋಟೊವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಮಹಿಳೆ ಕೆಲಸಕ್ಕೆ ಹೋಗುವಾಗ ಬೈಕ್ ಹಿಂದೆ ಕೂತಿರುವ ಮಹಿಳೆಯೊಬ್ಬರ ಚಿತ್ರವನ್ನು ನಿಹಾರ್ ಲೋಹಿಯಾ ಎನ್ನುವವರು ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪೀಕ್ ಸಮಯ, ಕೆಲಸ ಮಾಡುವ ಬೈಕ್‌ನಲ್ಲಿ ಕಚೇರಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ. ಪೀಕ್ ಸಮಯದಲ್ಲಿ ಬೆಂಗಳೂರು ಟ್ರಾಫಿಕ್ ವಾಹನ ಸವಾರರನ್ನು ಹೈರಾಣಾಗಿಸುತ್ತದೆ, ಆಫೀಸ್‌ಗೆ ತಡವಾಗುತ್ತದೆ ಎನ್ನುವ ಭಯದಲ್ಲಿ ಮಹಿಳೆಯೊಬ್ಬರು ಬೈಕ್‌ನಲ್ಲೇ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುತ್ತಿರುವುದನ್ನು ಫೋಟೊದಲ್ಲಿ ನೋಡಬಹುದು.

ಇದಕ್ಕೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕಂಪನಿಗಳ ಕೆಲಸದ ಸಂಸ್ಕೃತಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. "ಆ ಮಹಿಳೆ ಬೈಕ್‌ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ಎಂದರೆ, ಅವರ ಮೇಲಿರುವ ಒತ್ತಡವನ್ನು ಊಹಿಸಬಹುದು. ಉದ್ಯೋಗದಾತರು ಎಷ್ಟು ಸಂವೇದನಾಶೀಲರು ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ. ಆಕೆ ಸ್ವಂತ ಇಚ್ಛೆಯಿಂದ ಕೆಲಸಕ್ಕೆ ತಡವಾದರೆ ಆಕೆಯನ್ನು ದೂಷಿಸಬೇಕು, ಆದರೆ ಇದು ಬೆಂಗಳೂರಿನ ಎಲ್ಲಾ ಕೆಲಸಗಾರರ ಸಮಸ್ಯೆ" ಎಂದು ಹೇಳಿದ್ದಾರೆ.
ರಸ್ತೆಯಿಂದ ಕೆಲಸ ಮಾಡುತ್ತಿದ್ದಾರ?
ಮತ್ತಷ್ಟು ಬಳಕೆದಾರರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ಮಹಿಳೆಗೆ "ವರ್ಷದ ಉದ್ಯೋಗಿ ಪ್ರಶಸ್ತಿ" ನೀಡಬೇಕು ಎಂದು ಒತ್ತಾಯಿಸಿದರೆ, ಇನ್ನೂ ಕೆಲವರು "Wfr: ರಸ್ತೆಯಿಂದ ಕೆಲಸ?" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Peak Bangalore moment. Women working on a rapido bike ride to the office. #TrafficJam #TrafficAlert #bangaloretraffic #Bangalore #roadblock #peakbangalore pic.twitter.com/bubbMj3Qbs
— Nihar Lohiya (@nihar_lohiya) May 16, 2023
ಮತ್ತಷ್ಟು ಬಳಕೆದಾರರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಉದ್ಯೋಗಿಗಳು ಎಷ್ಟೇ ಬೇಗ ಮನೆಯಿಂದ ಹೊರಟರು ಬೆಂಗಳೂರು ಟ್ರಾಫಿಕ್ ಸಾಕಷ್ಟು ತೊಂದರೆ ನೀಡುತ್ತದೆ, ಹಲವು ಬಾರಿ ಇದೇ ಕಾರಣಕ್ಕೆ ನಮಗೂ ತಡವಾಗಿದೆ ಎಂದು ತಮ್ಮ ಸಮಸ್ಯೆ ಹಂಚಿಕೊಂಡಿದ್ದಾರೆ.
ಇನ್ನೂ ಕೆಲವರು, ಬೆಂಗಳೂರಿನಲ ಟ್ರಾಫಿಕ್‌ನಲ್ಲಿ ಈ ರೀತಿಯ ದೃಶ್ಯಗಳು ಸಾಮಾನ್ಯ, ಆಟೋ, ಕಾರು, ಬಸ್ಸುಗಳಲ್ಲಿ ಕುಳಿತು ಕೆಲಸ ಮಾಡುವುದನ್ನು ನೋಡಿದ್ದೇವೆ. ಇವರು ಬೈಕ್‌ನಲ್ಲಿ ಕೂತು ಕೆಲಸ ಮಾಡುತ್ತಿದ್ದಾರೆ ಇದು ಹೊಸ ಸೇರ್ಪಡೆ ಎಂದು ಹೇಳಿದ್ದಾರೆ.












Click it and Unblock the Notifications