ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಾರಿಗೆ ಬೈಕ್ ಡಿಕ್ಕಿ, 5ಕಿ.ಮೀ. ಹಿಂಬಾಲಿಸಿ ದಂಪತಿಗೆ ಬೆದರಿಕೆ ಹಾಕಿದ ಸವಾರ: ವಿಡಿಯೋ ವೈರಲ್

ನಗರದಲ್ಲಿ ತಡರಾತ್ರಿ ಕಾರು ಚಲಿಸುತ್ತಿದ್ದ ರಸ್ತೆಯಲ್ಲಿ ಎದುರಿನಿಂದ ಬಂದ ಬೈಕ್ ಕಾರಿಗೆ ಗುದ್ದಿದೆ. ಈ ಮೂಲಕ ಕಾರಿನಲ್ಲಿರುವವರನ್ನು ದುರುದ್ದೇಶದಿಂದಲೇ ತಡೆದು ನಿಲ್ಲಿಸಲು ಪ್ರಯತ್ನಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಘಟನೆಯ ಈ ವಿಡಿಯೋವನ್ನು ಟ್ವೀಟ್ಟರ್‌ನಲ್ಲಿ ಸ

|
Google Oneindia Kannada News

ಬೆಂಗಳೂರು, ಜನವರಿ 29: ನಗರದಲ್ಲಿ ತಡರಾತ್ರಿ ಕಾರು ಚಲಿಸುತ್ತಿದ್ದ ರಸ್ತೆಯಲ್ಲಿ ಎದುರಿನಿಂದ ಬಂದ ಬೈಕ್ ಕಾರಿಗೆ ಗುದ್ದಿದೆ. ಈ ಮೂಲಕ ಕಾರಿನಲ್ಲಿರುವವರನ್ನು ದುರುದ್ದೇಶದಿಂದಲೇ ತಡೆದು ನಿಲ್ಲಿಸಲು ಪ್ರಯತ್ನಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಬೆಂಗಳೂರಿನಲ್ಲಿ ಮುಂಜಾನೆ 3 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದ ದಂಪತಿ ಇದ್ದ ಕಾರನ್ನು ಬೈಕ್ ಸವಾರನೊಬ್ಬ ಹಿಂಬಾಲಿಸಿದ ಘಟನೆ ನಡೆದಿದೆ. ದರುದ್ದೇಶದಿಂದಲೇ ಬೈಕ್ ಸವಾರರು ಎದುರುಗಡೆಯಿಂದ ಕಾರಿಗೆ ಡಿಕ್ಕಿ ಹೊಡೆಯುತ್ತಿರುವುದು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಂದ ಗಸ್ತು, ಬಿಗಿಕ್ರಮಗಳ ನಡುವೆಯು ಆಗಾಗ ಬೆದರಿಕೆ, ಕಳ್ಳತನ, ದಾಳಿಯಂತಹ ಘಟನೆಗಳು ನಡೆಯುತ್ತಿರುತ್ತವೆ. ಅದೇ ರೀತಿ ಶನಿವಾರ ತಡರಾತ್ರಿ, ಅಂದರೆ ಭಾನುವಾರ ಬೆಳಗ್ಗೆ 3ಗಂಟೆ ಹೊತ್ತಿಗೆ ಸರ್ಜಾಪುರ ರಸ್ತೆಯಲ್ಲಿ ದಂಪತಿಯೊಬ್ಬರು ಕಾರಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದರು. ಇದೇ ವೇಳೆ ಪಕ್ಕದ ನಿಗದಿತ ಮಾರ್ಗದಲ್ಲಿ ತೆರಳಬೇಕಿದ್ದ ಬೈಕ್ ಸವಾರೊಬ್ಬ ನೇರವಾಗಿ ಬಂದು ಕಾರಿಗೆ ಗುದ್ದಿದ್ದಾನೆ. ಈ ವಿಡಿಯೋವನ್ನು ಸಿಟಿಜನ್ಸ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು ಪೇಜ್ ಹಂಚಿಕೊಂಡಿದೆ.

Video viral: A bike rider hit a car midnight and rider threatened the couple

ವಿಡಿಯೋದಲ್ಲಿ, ಕಾರಿಗೆ ದಂಪತಿಗಳು ಇಂಡಿಕೇಟರ್‌ ಹಾಕಿದ್ದ ಗುದ್ದಿದ ಬೈಕ್ ಸವಾರ ಹಾಗೂ ಆತನ ಜೊತೆಗಿದ್ದ ಹಿಂಬದಿ ಸವಾರ ಕಾರಿನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾರೆ. ಕೆಳಕ್ಕೆ ಇಳಿಯಲು ನಿರಾಕರಿಸಿದ್ದಕ್ಕೆ ಕಾರಿನ ಕಿಟಕಿ ಬಳಿ ಬಂದು ಗ್ಲಾಸ್ ಬಡಿದಿದ್ದಾರೆ. ಆದರೆ ದಂಪತಿ ಕೆಳಗೆ ಇಳಿಯಲು ನಿರಾಕರಿಸಿದ್ದಾರೆ. ನಂತರ ಕಾರನ್ನು ರಿವರ್ಸ್ ಗೇರಿನಲ್ಲೇ ವಾಪಸ್ ಓಡಿಸಿದ್ದಾರೆ. ಈ ವೇಳೆ ಬೈಕ್‌ ಸವಾರರು ಸುಮಾರು 5 ಕಿಲೋ ಮೀಟರ್ ಕಾರನ್ನು ಹಿಂಬಾಲಿಸಿದ್ದಾರೆ. ರಸ್ತೆಯುದ್ದಕ್ಕೂ ಓಡೋಡಿ ಕಾರನ್ನು ತಡೆಯಲು ಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಒಂಟಿಯಾಗಿ ಓಡಾಡುವವರಿಗೆ, ದಂಪತಿಗಳಿಗೆ ರಾತ್ರಿ ವೇಳೆ ಬೆಂಗಳೂರಿನಲ್ಲಿ ರಕ್ಷಣೆ ಇಲ್ಲವೆ ಎಂಬ ಅನುಮಾನ ಮೂಡಲು ಕಾರಣವಾಗಿದೆ.

ಸರ್ಜಾಪುರ ರಸ್ತೆಯ ಸೋಫಾಸ್ ಮತ್ತು ಮೋರ್ ಬಳಿ ಈ ಭಯಾನಕ ಘಟನೆ ನಡೆದಿದೆ. ದಂಪತಿಗೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ರಸ್ತೆಯಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂಬಂತಾಗಿದೆ. ಇಲ್ಲಿ ಕೆಲವೆಡೆ ವಿದ್ಯುತ್ ದೀಪಗಳ ಬಲ್ಬಗಳು ಪ್ರಕಾಶಮಾನವಾಗಿಲ್ಲ.ಕೆಲವೆಡೆ ಮಾತ್ರ ಪೊಲೀಸರು ಗಸ್ತು ತಿರುಗುತ್ತಾರೆ. ಆದ್ದರಿಂದ ಇಂತಹ ಸಮಸ್ಯೆ ಮರುಕಳಿಸದಂತೆ ಅಗತ್ಯ ಬೀದಿ ದೀಪ ಅಳವಡಿಸಿ ಹಾಗೂ ಗಸ್ತು ತಿರುಗುವ ವ್ಯವಸ್ಥೆ ಬಲಪಡಿಸಿ ಎಂದು ನಗರ ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಆಯುಕ್ತರನ್ನು ಟ್ಯಾಗ್ ಮಾಡಿ ಕಾಮೆಂಟ್ ಮಾಡಿದ್ದಾರೆ.

Video viral: A bike rider hit a car midnight and rider threatened the couple

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದರು, ಬೆಂಗಳೂರು ಪೊಲೀಸರು ಕಾರ್ಯಾಚರಣೆಗಿಳಿದು ತನಿಖೆ ಆರಂಭಿಸಿದ್ದಾರೆ. ನಾವು ನಿಮ್ಮ ಸಮಸ್ಯೆ, ನೋವು ಅರ್ಥ ಮಾಡಿಕೊಳ್ಳುತ್ತೇವೆ. ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪೂರ್ವ ಸಂಚಾರಿ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

English summary
Video viral: A bike rider hit a car midnight and rider chases to car than threatened the couple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X