ವಿಬ್ ಗಯಾರ್ ಶಾಲೆ ಮಾನ್ಯತೆ ರದ್ದತಿಗೆ ಪತ್ರ
ಬೆಂಗಳೂರು, ಜು. 19 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್ ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ನಡೆದ ಅತ್ಯಾಚಾರ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಾಲೆಯ ಮಾನ್ಯತೆ ರದ್ದುಪಡಿಸುವಂತೆ ಐಸಿಎಸ್ ಸಿ ಮಂಡಳಿಗೆ ಪತ್ರ ಬರೆದಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಸಿನ್ ಪತ್ರಿಕಾ ಹೇಳಿಕೆ ನೀಡಿದ್ದು, ಮಿಬ್ ಗಯಾರ್ ಶಾಲೆಗೆ ನೋಟಿಸ್ ಜಾರಿಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಮ್ಮ ಶಾಲೆಗೆ ನೀಡಲಾಗಿರುವ ನಿರಕ್ಷೇಪಣಾ ಪತ್ರವನ್ನು ಹಿಂದಕ್ಕೆ ಪಡೆಯಬಾರದೇಕೆ ಎಂದು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. [ಅತ್ಯಾಚಾರ ಪ್ರಕರಣ : ವರದಿ ಕೇಳಿದ ಕೇಂದ್ರ]

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಅಪರಾಧ. ಹೀಗಾಗಿ ನಿಮ್ಮ ಶಾಲೆಗೆ ನೀಡಲಾಗಿರುವ ನಿರಾಕ್ಷೇಪಣಾ ಪತ್ರವನ್ನು ಹಿಂದಕ್ಕೆ ಪಡೆದು ನಿಮ್ಮ ಶಾಲೆಯ ಮಾನ್ಯತೆ ರದ್ದುಪಡಿಸಬಾರದೇಕೆ ಎಂದು ಕಾರಣ ಕೇಳಲಾಗಿದೆ. [ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ]
ಆ ಶಾಲೆಗೆ ಹೋಗಲ್ಲ : ಅತ್ಯಾಚಾರದಿಂದ ಆಘಾತಕ್ಕೆ ಒಳಗಾಗಿರುವ ಬಾಲಕಿ ಮತ್ತೆ ಆ ಶಾಲೆಗೆ ಹೋಗಲ್ಲ, ಶಿಕ್ಷಕರು ತುಂಬಾ ಕೆಟ್ಟವರು, ಶಾಲೆಗೆ ಹೋಗಲ್ಲ ಎಂದು ಕನವರಿಸುತ್ತಿದ್ದಾಳೆ ಎಂದು ಫೋಷಕರು ತಿಳಿಸಿದ್ದಾರೆ. [ಕಾಮನಬಿಲ್ಲು ಶಾಲೆಯಲ್ಲಿ 'ಕಾಮುಕ']
ಇಂದು ಪ್ರತಿಭಟನೆ : VIBGYOR HIGH ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಫೋಷಕರು ಶನಿವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಶಾಲೆಯ ಮುಂಭಾಗದಲ್ಲಿ ನಡೆಯಲಿದೆ.












Click it and Unblock the Notifications