ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟಿ ಪದ್ಮಾ ಕುಮುಟ ನಿಧನ

ಚೋಮನ ದುಡಿ, ದೇವತಾ ಮನುಷ್ಯ ಸೇರಿದಂತೆ ಸುಮಾರು ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ. ಮೂವತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

ಬೆಂಗಳೂರು, ಮಾರ್ಚ್ 6: ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕೋಟ್ಯಂತರ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಹಿರಿಯ ನಟಿ ಪದ್ಮಾ ಕುಮುಟಾ (58) ಅವರು ಬೆಂಗಳೂರಿನಲ್ಲಿ ಮಾರ್ಚ್ 6ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

1975ರಲ್ಲಿ ತೆರೆಕಂಡಿದ್ದ ಚೋಮನದುಡಿ ಚಿತ್ರದಿಂದ ಹಿಡಿದು ದೇವತಾ ಮನುಷ್ಯ, ಶಿವ ಮೆಚ್ಚಿದ ಕಣ್ಣಪ್ಪ, ಕಳ್ಳ ಮಳ್ಳ, ಸೋಲಿಲ್ಲದ ಸರದಾರ, ಬೇವು ಬೆಲ್ಲ, ಶ್ರೀ ಮಂಜುನಾಥ, ಲಕ್ಕಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

Veteran actress Padma Kumuta dies in Bengaluru

ಸೋಮವಾರದಂದು ಶೃತಿ ನಾಯ್ಡು ಅವರ 'ಮಹಾನದಿ' ಸೀರಿಯಲ್ ಶೂಟಿಂಗ್ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಉಸಿರಾಟದ ತೊಂದರೆಯಿಂದಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದಿದ್ದರು.

ಒನ್ ಇಂಡಿಯಾದೊಂದಿಗೆ ಮಾತನಾಡಿದ ನಟ ಮಂಡ್ಯ ರಮೇಶ್, ಹಿರಿಯ ನಟಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಚೋಮನದುಡಿ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಪದ್ಮಾ ಕುಮುಟ, ಇತ್ತೀಚಿನ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+