ಬೆಂಗಳೂರು ನಗರದಲ್ಲಿ 80 ಲಕ್ಷ ವಾಹನಗಳು

ಬೆಂಗಳೂರು, ಏಪ್ರಿಲ್ 02 : ಉದ್ಯಾನ ನಗರಿ ಬೆಂಗಳೂರು ವಾಹನಗಳ ನಗರವಾಗುತ್ತಿದೆ. ನಗರದಲ್ಲಿ 80 ಲಕ್ಷಕ್ಕೂ ಅಧಿಕ ವಾಹನಗಳಿವೆ ಎಂದು ಸಾರಿಗೆ ಇಲಾಖೆ ಹೇಳಿದೆ. ಕರ್ನಾಟಕದಲ್ಲಿನ ವಾಹನಗಳ ಸಂಖ್ಯೆ 2.10 ಕೋಟಿ ದಾಟಿದೆ.

ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 2018ರ ಮಾರ್ಚ್ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ 74.92 ಲಕ್ಷ ವಾಹನಗಳಿದ್ದವು. ಪ್ರಸ್ತುತ ಈ ಸಂಖ್ಯೆ 80.90 ಲಕ್ಷಕ್ಕೆ ಏರಿಕೆಯಾಗಿದೆ.

ಸಾರಿಗೆ ಇಲಾಖೆ ಹೊಸ ವಾಹನಗಳ ನೋಂದಣಿಯನ್ನು ತಡೆಯಲು ಸಾಧ್ಯವಿಲ್ಲ. ಪರಿಸರದ ಮೇಲೆ ಆಗುತ್ತಿರುವ ಪರಿಣಾಮವನ್ನು ಗಮನಿಸಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Vehicle

2018-19ನೇ ಆರ್ಥಿಕ ವರ್ಷದಲ್ಲಿ ಸಾರಿಗೆ ಇಲಾಖೆ 6,528 ಕೋಟಿ ರಾಜಸ್ವ ಸಂಗ್ರಹಿಸಿದೆ. ಕಳೆದ ವರ್ಷ 5987.82 ಕೋಟಿ ಸಂಗ್ರಹವಾಗಿತ್ತು. 160 ಕೋಟಿ ಆದಾಯವನ್ನು ದಂಡದ ರೂಪದಲ್ಲಿಯೇ ಇಲಾಖೆ ಸಂಗ್ರಹ ಮಾಡಿದೆ.

ಖಾಸಗಿ ವಾಹನಗಳಿಗೆ ಎಚ್ಚರಿಕೆ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದೂರದ ಊರುಗಳಿಗೆ ಕೆಲವು ಖಾಸಗಿ ವಾಹನಗಳು ಜನರನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಕುರಿತು ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+