Vegetables Price:ಬೆಂಗಳೂರಿನಲ್ಲಿ ಹೆಚ್ಚಾಯ್ತು ತರಕಾರಿ ದರ; ಯಾವ್ಯಾವ ತರಕಾರಿಗೆ ಎಷ್ಟೆಷ್ಟು ಬೆಲೆ ತಿಳಿಯಿರಿ
ಬೆಂಗಳೂರು, ಜೂನ್.24: ದೇಶದಲ್ಲಿ ಈ ಬಾರು ಮುಂಗಾರು ಕೈ ಕೊಟ್ಟಿದೆ. ಮಳೆ ಕೊರತೆ ಎದುರಾಗಿದೆ. ಉತ್ತರ ಭಾರತದಲ್ಲಿ ಉಷ್ಣಾಂಶ ಹೆಚ್ಚಾಗುತ್ತಲೆ ಇದೆ. ದಕ್ಷಿಣ ಭಾರತದಲ್ಲಿ ಕೊಂಚ ಮಟ್ಟಿಗೆ ಮಳೆಯಾಗುತ್ತಿದ್ದು, ಕೃಷಿಕರು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ, ತರಕಾರಿ, ಹಣ್ಣು, ಹೂವಿನ ಬೆಲೆ ಗಗನಕ್ಕೆ ಏರಿದ್ದು ಜನ ಸಾಮಾನ್ಯರು ಜೇಬು ಖಾಲಿ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಜನರು ಚಿಂತೆಯಲ್ಲಿದ್ದಾರೆ. ಇದರ ಜೊತೆಗೆ ತರಕಾರಿ ಬೆಲೆ ಕೂಡ ಗಗನಕ್ಕೇರುತ್ತಿದ್ದು. ಜನ ತರಕಾರಿ ಅಂಗಡಿಗಳಿಗೆ ಹೋಗಲು ಯೋಚಿಸುವಂತಾಗಿದೆ. ಎರಡು ವಾರಗಳ ಹಿಂದಷ್ಟೇ 20, 30 ರೂಪಾಯಿಯಿದ್ದ ಟೊಮೊಟೋ ಬೆಲೆ ಈಗಾಗಲೇ ನೂರು ರೂಪಾಯಿಯತ್ತ ದಾಪುಗಾಲು ಹಾಕುತ್ತಿದೆ.

ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ ಹೇಗಿದೆ?
ಬೆಳ್ಳುಳ್ಳಿ - ಕೆಜಿಗೆ 300 ರೂಪಾಯಿ
ಈರುಳ್ಳಿ (ಚಿಕ್ಕದು) - ಕೆಜಿಗೆ 60 ರೂಪಾಯಿ
ಈರುಳ್ಳಿ (ದೊಡ್ಡದು) - ಕೆಜಿಗೆ 40 ರೂಪಾಯಿ
ಟೊಮ್ಯಾಟೋ - ಕೆಜಿಗೆ 85 ರೂಪಾಯಿ
ಕ್ಯಾರೆಟ್ - ಕೆಜಿಗೆ 110 ರೂಪಾಯಿ
ಆಲೂಗಡ್ಡೆ - ಕೆಜಿಗೆ 60 ರೂಪಾಯಿ
ಹೂಕೋಸು - ಕೆಜಿಗೆ 60 ರೂಪಾಯಿ
ಬೆಂಡೆಕಾಯಿ - ಕೆಜಿಗೆ 66 ರೂಪಾಯಿ
ಕ್ಯಾಪ್ಸಿಕಂ - ಕೆಜಿಗೆ 80 ರೂಪಾಯಿ
ನುಗ್ಗೇಕಾಯಿ - ಕೆಜಿಗೆ 210 ರೂಪಾಯಿ

ಮೆಣಸಿನಕಾಯಿ - ಕೆಜಿಗೆ 140 ರೂಪಾಯಿ
ಬೀನ್ಸ್ - ಕೆಜಿಗೆ 150 ರೂಪಾಯಿ
ಬಿಟ್‌ರೂಟ್ - 55 ರೂಪಾಯಿ
ಬದನೆಕಾಯಿ - ಕೆಜಿಗೆ 90 ರೂಪಾಯಿ
ಹಾಗಲಕಾಯಿ - ಕೆಜಿಗೆ 40 ರೂಪಾಯಿ
ತೆಂಗಿನ ಕಾಯಿ -ಕೆಜಿಗೆ 45 ರೂಪಾಯಿ
ಶುಂಠಿ- ಕೆಜಿಗೆ 130 ರೂಪಾಯಿ
ಬದನೆ ಕಾಯಿ - ಕೆಜಿಗೆ 40 ರೂಪಾಯಿ
ಹಸಿರು ಬಟಾಣಿ- ಕೆಜಿಗೆ 70 ರೂಪಾಯಿ
ನಿಂಬೆ ಹಣ್ಣು - ಕೆಜಿಗೆ 180 ರೂಪಾಯಿ
ಕುಂಬಳಕಾಯಿ- ಕೆಜಿಗೆ 35 ರೂಪಾಯಿ
ಮೂಲಂಗಿ- ಕೆಜಿಗೆ 55 ರೂಪಾಯಿ












Click it and Unblock the Notifications