ಬೆಂಗಳೂರಲ್ಲಿ ತರಕಾರಿ ಬೆಲೆ ದಿಢೀರ್ ಇಳಿಕೆ: ಸಂಕಷ್ಟದಲ್ಲಿ ರೈತರು

ಬೆಂಗಳೂರು, ಮಾರ್ಚ್ 9: ಕೊರೊನಾ ಇದಿಗ ರೈತರನ್ನೂ ಬಿಡದೆ ನಡುಗಿಸುತ್ತಿದೆ. ತರಕರಿಗಳು ಬೇರೆ ರಾಜ್ಯಗಳಿಗೆ ರಫ್ತಾಗದ ಹಿನ್ನೆಲೆಯಲ್ಲಿ ತರಕಾರಿ ಬೆಲೆಗಳ ಬೆಲೆ ನೆಲ ಕಚ್ಚಿದೆ.

ಶಿವರಾತ್ರಿ ಹಬ್ಬ ಕಳೆದ ಬೆನ್ನಲ್ಲೇ ಹೂವು, ಹಣ್ಣುಗಳ ಬೆಲೆ ಕಡಿಮೆಯಾಗುವುದು ಸಾಮಾನ್ಯ ಆದರೆ ಈ ಬಾರಿ ಹೂವು ಹಣ್ಣಿಗಿಂತ ತರಕಾರಿ ಬೆಲೆ ತಗ್ಗಿದೆ. ಮಾರುಕಟ್ಟೆಯಲ್ಲಿ 100ರೂಗೆ 5 ರಿಂದ 6ಕೆಜಿ ಬಗೆಬಗೆಯ ತರಕಾರಿ ಕೊಳ್ಳಬಹುದಾಗಿದೆ.

ಇದು ಗ್ರಾಹಕರ ಮುಖದಲ್ಲಿ ಸಂತೋಷವನ್ನುಂಟು ಮಾಡಿದರೆ ರೈತರ ಕಣ್ಣಲ್ಲಿ ನೀರು ಬರುತ್ತಿದೆ. ಕಳೆದ ತಿಂಗಳು ದುಬಾರಿಯಾಗಿದ್ದ ಬೀನ್ಸ್, ಟೊಮೆಟೋ, ಮೂಲಂಗಿ, ಬದನೆಕಾಯಿ , ಬೆಂಡೆಕಾಯಿ, ಗೋರಿಕಾಯಿ, ಹಸಿ ಮೆಣಸಿನಕಾಯಿ, ಕ್ಯಾರೆಟ್ ದರ ದಿಢೀರ್ ಅರ್ಧದಷ್ಟು ಕಡಿಮೆಯಾಗಿದೆ. ಇನ್ನು ಕೊತ್ತಂಬರಿ ಸೊಪ್ಪು , ಮೆಂತ್ಯೆ, ಪುದೀನಾ ಸುಪ್ಪುಗಳ ಪ್ರತಿ ಕಟ್ಟಿಗೆ ತಲಾ 10 ರೂ.ನಂತೆ ಮಾರಾಟವಾಗುತ್ತಿದೆ.

Vegetable Price Decreased In Bengaluru Due To Coronovirus

ಹಣ್ಣಿನ ದರ ಹೆಚ್ಚಳ ಸಾಧ್ಯತೆ: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.ಮಾರುಕಟ್ಟೆಯಲ್ಲಿ ರಾಶಿ ರಾಶಿ ಹಣ್ಣುಗಳು ಆವಕವಾಗುತ್ತಿದ್ದು, ಹಬ್ಬದ ವೇಳೆ ಇದ್ದ ದರವೇ ಈಗಲೂ ಯಥಾಸ್ಥಿತಿ ಕಾಯ್ದುಕೊಂಡಿದೆ.

ಆದರೆ ಬೇಸಿಗೆ ಮುಗಿಯುವಷ್ಟರಲ್ಲಿ ದರವೂ ಕೂಡ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

ಕ್ಯಾರೆಟ್ ,ಬೀನ್ಸ್ , ನುಗ್ಗೇಕಾರಿ 20 ರೂ, ಆಲೂಗಡ್ಡೆ 18 ರೂಗೆ ಮಾರಾಟವಾಗುತ್ತಿದೆ. ಬೇರೆ ರಾಜ್ಯಗಳಿಗೆ ತರಕಾರಿ ರಫ್ತಾಗದ ಹನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+