ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪರ ವಿಸಿಕೆ ಅಧ್ಯಕ್ಷ ತೋಳ್‌ ತಿರುಮಾವಳವನ್ ಪ್ರಚಾರ

ಬೆಂಗಳೂರು, ಮೇ 3: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೊರ ರಾಜ್ಯಗಳಿಂದಲೂ ಬೆಂಬಲ ನೀಡುತ್ತಿರುವ ಬೆನ್ನಲ್ಲೇ ತಮಿಳುನಾಡಿನ ವಿಡುದಲೈ ಚಿರುತೆಗಳ್ ಕಚ್ಚಿ ಅಧ್ಯಕ್ಷ ಹಾಗೂ ಸಂಸದ ತಿರು ತೋಳ್‌ ತಿರುಮಾವಳವನ್ ಅವರು ಬೆಂಗಳೂರಿನಲ್ಲಿ ಬುಧವಾರ ಕಾಂಗ್ರೆಸ್‌ ಪಕ್ಷದ ಪರ ಪ್ರಚಾರ ಕೈಗೊಂಡಿದ್ದರು.

ಕಳೆದ ಜುಲೈ ತಿಂಗಳಿನಲ್ಲಿ ಮಾಜಿ ಸಿದ್ದರಾಮಯ್ಯ ಅವರಿಗೆ ಇದೇ ತಮಿಳುನಾಡಿನ ವಿಡುದಲೈ ಚಿರುತೆಗಳ್ ಕಚ್ಚಿಯಿಂದ ಅಂಬೇಡ್ಕರ್‌ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಚೆನ್ನೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಸ್ವೀಕಾರ ಮಾಡಿದ್ದರು. ಗಡಿ ರೇಖೆಗಳನ್ನು ಮೀರಿ ದೇಶದ ಉದ್ದಗಲಕ್ಕೂ ನನ್ನ ಸೈದ್ಧಾಂತಿಕ ನಿಲುವಿಗೆ ಜೊತೆಯಾಗಿ ನಿಂತಿರುವ ಜನರೇ ನನ್ನ ರಾಜಕೀಯ ಶಕ್ತಿ ಎಂದು ಸಂತಸ ವ್ಯಕ್ತಪಡಿಸಿದ್ದರು.

VCK president Thol. Thirumavalavan campaigned for Congress in Bengaluru

ಇಂದು ಬುಧವಾರ ಬಿಟಿಎಂ ಲೇ ಔಟ್‌ನ ರಾಮಲಿಂಗ ರೆಡ್ಡಿ ಹಾಗೂ ಕುವೆಂಪುನಗರದಲ್ಲಿ ಕೃಷ್ಣಬೈರಾಗೌಡ ಅವರ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಬೈರಗೌಡ ತಿರುಮಾವಳವನ್ ಅವರು ರಾಷ್ಟ್ರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ನಾಯಕ. ಅಂಬೇಡ್ಕರ್‌ ಅವರ ಸಿದ್ದಾಂತದಂತೆ ಬದುಕುತ್ತಿರುವ ನಾಯಕ. ಇಲ್ಲಿ ಅವರು ಬಂದಿರುವುದರಿಂದ ಎಲ್ಲ ನಮ್ಮ ಬೆಂಗಳೂರಿನ ನಾಗರಿಕರು ಸಂತಸಗೊಂಡಿದ್ದಾರೆ. ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬಹುಸಂಖ್ಯಾತರ ಪರ ಹೋರಾಡುವವರು, ಅವರು ನಮ್ಮ ತಮಿಳುನಾಡಿಗೂ ಬಂದಿದ್ದರು. ಬಿಜೆಪಿಯವರು ತಮಿಳುನಾಡಿನಲ್ಲಿ, ಕೇರಳ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಜಾಗ ಪಡೆಯಲಾಗಲಿಲ್ಲ. ಅದರೆ ಕರ್ನಾಟಕದಲ್ಲಿ ಮಾತ್ರವೇ ಅವರ ಅಸ್ತಿತ್ವವಿದೆ. ಹೀಗಾಗಿ ಅವರು ತಮ್ಮ ಅಧಿಕಾರ ಹಿಡಿಯಲು ಮತಾಂಧೆಯನ್ನು ಹರಡಲು ಮುಂದಾಗಿದ್ದಾರೆ. ಅವರು ಬೇರೆ ನಾವು ಬೇರೆ ಎಂದು ಸಮಾಜ ವಿಂಗಡಿಸುತ್ತಿದ್ದಾರೆ.

VCK president Thol. Thirumavalavan campaigned for Congress in Bengaluru

ಅವರು ಅವರು ಮುಸ್ಲಿ, ಅವರು ಕ್ರಿಶ್ಚಿಯನ್, ಅವರು ಹಿಂದೂ ಇದನ್ನೇ ಮಾತನಾಡುತ್ತಾರೆ. ಬದಲಾಗಿ ಮಕ್ಕಳ ವಿದ್ಯಾಭ್ಯಾಸ, ಸರ್ಕಾರಿ ಉದ್ಯೋಗ, ನೀರಿನ ಸಮಸ್ಯೆ, ಶಾಲೆಗಳ ಸುಸ್ಥಿತಿ ಇವುಗಳನ್ನೇ ಮಾತನಾಡುತ್ತಾರೆ, ಆದರೆ ಕಾಂಗ್ರೆಸ್‌ ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಾರೆ, ಕಾಂಗ್ರೆಸ್‌ ನಾಯಕ ಅಧಿಕಾರ ವ್ಯಾವೋಹವಿಲ್ಲದೆ ಭಾರತ್‌ ಜೋಡೊ ಯಾತ್ರೆ ಮಾಡಿದರು.

ಅವರು ಮಳೆ, ಬಿಸಿಲು, ಚಳಿ ಮೂರು ಕಾಲದಲ್ಲಿ ಕಾಲ್ನಡಿಗೆ ನಡೆಸಿದರು. ಇದಕ್ಕೆ ಕಾರಣ ಏನು ಎಂಬುದನ್ನು ಜನರು ಯೋಚಿಸಬೇಕು. ಮೋದಿ ಅವರ ಮತಾಂಧ ಭಾಷಣಕ್ಕೆ ನಾವು ಮಾರು ಹೋಗಬಾರದು. ಮೋದಿ ಅವರು ತಮ್ಮ ಸ್ನೇಹಿತರಾದ ಅಂಬಾನಿ, ಅದಾನಿ ಪರ ರಸ್ತೆ, ವಿಮಾನ ನಿಲ್ದಾಣ, ಸಾರ್ವಜನಿಕ ಉದ್ದಿಮೆಗಳನ್ನು ಅವರಿಗೆ ಮಾರಿದರು. ಬಿಜೆಪಿ, ಆರ್‌ಎಸ್‌ಎಸ್‌ ಹಿಂದೂಗಳಿಗೆ ಮಾತ್ರವಾದರೆ, ಕಾಂಗ್ರೆಸ್‌ಗೆ ಈ ದೇಶದ ಎಲ್ಲರಿಗೂ ಸಮಾನವಾಗಿ ನೋಡುತ್ತದೆ. ಇದೇ ಭಾರತ್‌ ಜೋಡೋ ಯಾತ್ರೆಯ ಉದ್ದೇಶ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+