ಕೊಯಮತ್ತೂರು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ, ವಿವರ
ಬೆಂಗಳೂರು, ಡಿಸೆಂಬರ್ 25: ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲು ಸ್ಥಳ, ಮಾರ್ಗ ದಿನಾಂಕ ಸಿದ್ಧವಾಗಿದೆ. ಈ ಬಾರಿ ಸೆಮಿ ಹೈಸ್ಪೀಡ್ ರೈಲಾದ ವಂದೇ ಭಾರತ್ ಕೊಯಮತ್ತೂರು ಬೆಂಗಳೂರು ನಡುವೆ ಸಂಚಾರ ಆರಂಭಿಸಲಿದೆ.
ಕೊಯಮತ್ತೂರು ಪೊಲ್ಲಾಚಿ ನಡುವೆ ಕಾಯ್ದಿರಿಸದ ರೈಲು ಸೇವೆಯನ್ನು ಪ್ರಾರಂಭಿಸಿದ ನಂತರ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರು ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ರೈಲು ಸೇವೆಯನ್ನು ಡಿಸೆಂಬರ್ 30 ರಂದು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

ಇದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಈಗಾಗಲೇ ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುತ್ತದೆ. ರೈಲು ಕೊಯಮತ್ತೂರಿನಿಂದ ಬೆಳಿಗ್ಗೆ ಹೊರಟು ಸಂಜೆ ತಲುಪುವ ಸಾಧ್ಯತೆಯಿದೆ. ಆದರೆ, ರೈಲಿನ ವೇಳಾಪಟ್ಟಿ ಮತ್ತು ಪ್ರಯಾಣ ದರವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ.
ಹೊಸ ರೈಲಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಲ್ ಮುರುಗನ್, ಕೊಯಮತ್ತೂರು ಮತ್ತು ಪೊಲ್ಲಾಚಿ ನಡುವೆ ಕಾಯ್ದಿರಿಸದ ರೈಲು ಸೇವೆಗಾಗಿ ಜನರ ಬಹುಕಾಲದ ಬೇಡಿಕೆಯನ್ನು ಕೇಂದ್ರ ರೈಲ್ವೆ ಸಚಿವರು ಒಂದೇ ತಿಂಗಳಲ್ಲಿ ಬಹಳ ಬೇಗನೆ ಈಡೇರಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ 6,000 ಕೋಟಿ ರೂ. ನಿಗದಿಪಡಿಸಿದ್ದು, ಈ ಪೈಕಿ ತಮಿಳುನಾಡಿನಲ್ಲಿ 10 ಹೊಸ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.
ತಮಿಳುನಾಡಿನ ಕೊಯಮತ್ತೂರು, ಮೆಟ್ಟುಪಾಳ್ಯಂ, ಉದಗಮಂಡಲಂ, ತಿರುಪುರ್ ಮತ್ತು ಸೇಲಂ ಸೇರಿದಂತೆ 75 ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಸೆಪ್ಟೆಂಬರ್ 24, 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭಿಸಲಾದ ಚೆನ್ನೈ - ಕೊಯಮತ್ತೂರು ಜೊತೆಗೆ ತಿರುನಲ್ವೇಲಿ-ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದರು.
ಮಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್:
ಮಂಗಳೂರು ಮತ್ತು ಮಡಗಾನ್‌ಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ವರ್ಷಾಂತ್ಯದ ವೇಳೆಗೆ ಸಂಚಾರ ಪ್ರಾರಂಭಿಸಲಿದೆ. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ನಿಗದಿತ ವೇಳಾಪಟ್ಟಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಮಂಗಳೂರಿನಿಂದ 08:30 ಕ್ಕೆ ಹೊರಟು 13:05 ಕ್ಕೆ ಮಡಗಾನ್ ತಲುಪಲಿದೆ. ಹಿಂದಿರುಗುವ ಪ್ರಯಾಣವು ಮಡಗಾನ್‌ನಿಂದ 18:10 ಕ್ಕೆ ನಿರ್ಗಮಿಸುತ್ತದೆ. ಸುಮಾರು 22:45 ಕ್ಕೆ ಮಂಗಳೂರಿಗೆ ಆಗಮನವಾಗುತ್ತದೆ. ಎಂಟು ಬೋಗಿಗಳ ವಂದೇ ಭಾರತ್ ರೇಕ್ ಅನ್ನು ಒಳಗೊಂಡಿರುವ ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲು ಓಡುವ ನಿರೀಕ್ಷೆಯಿದೆ.











Click it and Unblock the Notifications