ಪ್ರೇಮಿಗಳ ದಿನಾಚರಣೆ ಮತ್ತು ಭಗ್ನ ಪ್ರೇಮಿಗಳ ದಿನಾಚರಣೆ, ಇಲ್ಲಿದೆ ನೋಡಿ ವ್ಯತ್ಯಾಸ... Valentine's Day
ಪ್ರೇಮಿಗಳ ದಿನಾಚರಣೆ ಸಂಭ್ರಮ ಪ್ರಪಂಚದ ಮೂಲೆ ಮೂಲೆಯಲ್ಲೂ ಕಳೆಗಟ್ಟಿದ್ದು, ಪ್ರೇಮಿಗಳು ಈ ದಿನವನ್ನು ತಮ್ಮ ಸಂಗಾತಿ ಜೊತೆಗೆ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅದರಲ್ಲೂ ಸ್ಪೆಷಲ್ ಡೇ ಇದ್ದಾಗ ತುಂಬಾನೇ ಸಂಭ್ರಮಿಸುವ, ಹಾಗೇ ತಮಗೆ ಇಷ್ಟಬಂದ ಜಾಗದಲ್ಲಿ ಕೈಕೈ ಹಿಡಿದು ಸುತ್ತಾಡಿ ಕಷ್ಟ & ಸುಖ ಹಂಚಿಕೊಳ್ಳುವ ಜೋಡಿಗಳು ಭವಿಷ್ಯದ ಬಗ್ಗೆ ಪ್ಲಾನ್ ಮಾಡ್ತಾನೇ ಇರುತ್ತಾರೆ. ಆದರೆ ಇದೇ ಸಮಯದಲ್ಲಿ ಮತ್ತೊಂದು ಚರ್ಚೆ ಕೂಡ ಹುಟ್ಟಿಕೊಳ್ಳುತ್ತದೆ, ಅದು ಏನೆಂದರೆ ಪ್ರೇಮಿಗಳೆಲ್ಲಾ ಇಂದು ಸಂಭ್ರಮದಿಂದ ವ್ಯಾಲೆಂಟೈನ್ಸ್ ಡೇ ಆಚರಿಸುವಾಗ ಒಂಟಿಯಾಗಿರುವ ಹುಡುಗ & ಹುಡುಗಿಗೆ ಯಾವುದೇ ದಿನ ಇಲ್ವಾ? ಅನ್ನೋದು. ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ!
ಜಗತ್ತಿನಲ್ಲಿ ಪ್ರೇಮ ಎಂಬುದಕ್ಕೆ ದೊಡ್ಡ ಅರ್ಥವೇ ಇದ್ದು, ಆಧುನಿಕ ಕಾಲದಲ್ಲಿ ಪ್ರೀತಿ ಮತ್ತು ಪ್ರೇಮ ಬೇರೆಯದ್ದೇ ರೂಪ ಪಡೆದಿದೆ ಅಂತಾ ಪದೇ ಪದೇ ಚರ್ಚೆಗಳು ಕೂಡ ನಡೆಯುತ್ತಲೇ ಇರುತ್ತವೆ ಬಿಡಿ. ಪ್ರೇಮಿಗಳು ತಮ್ಮ ಪ್ರೀತಿ ಹೇಳಿಕೊಳ್ಳಲು & ಈಗಾಗಲೇ ಪ್ರೀತಿಯಲ್ಲಿ ಬಿದ್ದವರು ತಮ್ಮ ತಮ್ಮ ಸಂಗಾತಿ ಜೊತೆ ಸುತ್ತಾಡಲು ಪ್ರೇಮಿಗಳ ದಿನಾಚರಣೆ ಒಳ್ಳೆಯ ಚಾನ್ಸ್ ಕೊಡುತ್ತದೆ. ಅದರಲ್ಲೂ ಒಂದು ವಾರ ಪೂರ್ತಿ ಪ್ರೇಮಿಗಳ ದಿನಾಚರಣೆ ನಡೆಯುತ್ತದೆ ಎಂದರೆ ನೀವು ನಂಬಲೇಬೇಕು, ಪ್ರತಿವರ್ಷ ಫೆಬ್ರವರಿ 7ಕ್ಕೆ ಶುರು ಆಗುವ ಪ್ರೇಮಿಗಳ ದಿನಾಚರಣೆ 7 ದಿನಗಳ ಸಂಭ್ರಮ ಕೊಡುತ್ತದೆ.

ಮೊದಲ ದಿನವೇ ರೋಸ್ ಡೇ ಎಂದರೆ ಗುಲಾಬಿ ಕೊಡುವ ದಿನವಾಗಿರುತ್ತದೆ. ಫೆಬ್ರವರಿ 7 ಗುಲಾಬಿ ದಿನ, ಫೆಬ್ರವರಿ 8 ಪ್ರಪೋಸ್ ಡೇ ಎಂದು ಆಚರಿಸಿದರೆ ಫೆಬ್ರವರಿ 9 ಚಾಕೊಲೇಟ್ ಡೇ, ಫೆಬ್ರವರಿ 10 ಟೆಡ್ಡಿ ಡೇ, ಫೆಬ್ರವರಿ 11 ಪ್ರಾಮಿಸ್ ಡೇ, ಫೆಬ್ರವರಿ 12 ಅಪ್ಪುಗೆಯ ದಿನ ಅಂದರೆ ಹಗ್ ಡೇ ಇರುತ್ತದೆ, ಫೆಬ್ರವರಿ 13 ಕಿಸ್ ಡೇ ನಂತರವೇ ಕೊನೆಯದಾಗಿ ಪ್ರೇಮಿಗಳ ದಿನ ಫೆಬ್ರವರಿ 14ಕ್ಕೆ ಕೊನೆಯಾಗುತ್ತದೆ. ಹಾಗಾದರೆ ನಿಮಗೆ ಸಂಗಾತಿ ಅಥವಾ ಜೋಡಿ ಇರದೇ ಇದ್ದರೆ ನೀವು ಏನು ಮಾಡಬೇಕು ಗೊತ್ತಾ? ಅದರಲ್ಲೂ, ನೀವು ಅಕಸ್ಮಾತ್ ಭಗ್ನಪ್ರೇಮಿ ಆಗಿದ್ದರೆ ನಿಮಗೆ ಅಂತಲೇ ಒಂದು ವಾರ ಪೂರ್ತಿ ವಿಶೇಷ ಆಚರಣೆ ಕೂಡ ಪ್ರತಿವರ್ಷ ಇರುತ್ತದೆ...
ಭಗ್ನ ಪ್ರೇಮಿಗಳ ದಿನಾಚರಣೆ ಇಲ್ಲಿದೆ!
ವ್ಯಾಲೆಂಟೈನ್ಸ್ ವೀಕ್ ಅಥವಾ ಪ್ರೇಮಿಗಳ ವಾರ ಎಂದು ಫೆಬ್ರವರಿ 7 ರಿಂದ ಫೆಬ್ರವರಿ 14ರ ತನಕ ಭರ್ಜರಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಫೆಬ್ರವರಿ 15 ರಿಂದ ಫೆಬ್ರವರಿ 21ರ ತನಕ ಮುಂದಿನ ಒಂದು ವಾರ ಕಾಲ, ಭಗ್ನ ಪ್ರೇಮಿಗಳ ದಿನಾಚರಣೆ ಎಂದು ಸೆಲೆಬ್ರೇಷನ್ ಮಾಡಲಾಗುತ್ತದೆ. ಇದನ್ನೇ ಆಂಟಿ-ವ್ಯಾಲೆಂಟೈನ್ಸ್ ವೀಕ್ ಎಂದು ಕರೆಯಲಾಗುತ್ತದೆ,
ಫೆಬ್ರವರಿ 15 : ಸ್ಲ್ಯಾಪ್ ಡೇ ಎಂದು ಆಚರಣೆ ಮಾಡಲಾಗುತ್ತೆ- ಎಂದರೆ ಹಳೆಯ ನೋವು ತುಂಬಿದ ನೆನಪುಗಳಿಗೆ ಒಂದು 'ಪೆಟ್ಟು' ಕೊಟ್ಟು ಅದನ್ನು ಮರೆಯಲು ಪ್ರಯತ್ನಿಸುವ ದಿನ ಇದಾಗಿದೆ.
ಫೆಬ್ರವರಿ 16 : ಕಿಕ್ ಡೇ ಎಂದು ಆಚರಣೆ ಮಾಡಲಾಗುತ್ತೆ- ಇದರ ಅರ್ಥ ಮಾಜಿ ಪ್ರೇಮಿಯ ನೆನಪು ಅಥವಾ ಅವರು ಕೊಟ್ಟ ಉಡುಗೊರೆ ಜೀವನದಿಂದ ಹೊರಗೆ ಹಾಕುವುದೇ ಆಗಿರುತ್ತದೆ.
ಫೆಬ್ರವರಿ 17 : ಪರ್ಫ್ಯೂಮ್ ಡೇ ಎಂದು ಆಚರಣೆ ಮಾಡಲಾಗುತ್ತೆ- ಈ ದಿನದಂದು ಹಳೆಯ 'ವಾಸನೆ' ಹೋಗಲಾಡಿಸಬೇಕು & ಹೊಸ ಬದುಕಿನ ಸುಗಂಧ ಹರಡಲು ಮುಂದಾಗಬೇಕು ಎಂಬ ಅರ್ಥವಿದೆ.
ಫೆಬ್ರವರಿ 18 : ಫ್ಲರ್ಟಿಂಗ್ ಡೇ ಎಂದು ಆಚರಣೆ ಮಾಡಲಾಗುತ್ತೆ- ಈ ದಿನದಂದು ಯಾರ ಹಂಗೂ ಇಲ್ಲದೇ ತುಂಬಾ ಆರಮವಾಗಿ, ಎಲ್ಲರ ಜೊತೆ ನಗುನಗುತ ಮಾತನಾಡುವ ಸಮಯ ಎಂದು ಆಚರಿಸುತ್ತಾರೆ.
ಫೆಬ್ರವರಿ 19 : ಕನ್ಫೆಷನ್ ಡೇ ಎಂದು ಆಚರಣೆ ಮಾಡಲಾಗುತ್ತೆ- ಭಗ್ನ ಪ್ರೇಮಿಯ ಮನಸ್ಸಿನಲ್ಲಿದ್ದ ಕಹಿ ನೆನಪು ಹೇಳಿಕೊಂಡು ಹಗುರವಾಗಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಫೆಬ್ರವರಿ 20 : ಮಿಸ್ಸಿಂಗ್ ಡೇ ಎಂದು ಆಚರಣೆ ಮಾಡಲಾಗುತ್ತೆ- ಅಂದಹಾಗೆ ಈ ದಿನ ಬಿಟ್ಟು ಹೋದ ಸಂಗಾತಿ ನೆನೆದು ಭಾವುಕರಾಗುವ ಕ್ಷಣವಾಗಿದೆ, ಹೀಗಿದ್ದರು ಕೂಡ ಮತ್ತೆ ಅವರಿಗೆ ಫೋನ್ & ಮೆಸೇಜ್ ಮಾಡುವಂತೆ ಇಲ್ಲ ಎಂಬ ನಿಯಮವೂ ಇದೆ!
ಫೆಬ್ರವರಿ 21 : ಬ್ರೇಕ್ ಅಪ್ ಡೇ ಎಂದು ಆಚರಣೆ ಮಾಡಲಾಗುತ್ತೆ- ಈ ದಿನ ಭಗ್ನ ಪ್ರೇಮಿಯ ಪಾಲಿಗೆ ಮರೆಯಲಾಗದ ದಿನ, ಏಕೆಂದರೆ ತನ್ನ ಸಂಗಾತಿಯಿಂದ ದೂರವಾಗಿ ಅಧಿಕೃತವಾಗಿ ತಾನು ಇನ್ಮುಂದೆ 'ಸಿಂಗಲ್' ಎಂಬುದನ್ನ ಒಪ್ಪಿಕೊಳ್ಳುವ ದಿನವಾಗಿದೆ.












Click it and Unblock the Notifications