Get Updates
Get notified of breaking news, exclusive insights, and must-see stories!

Valentine's Day: ಪ್ರೇಮಿಗಳ ದಿನದಂದು ‘ಪೋಷಕರ ಆರಾಧನಾ ದಿನ’ ಆಚರಿಸಲು ಹಿಂದೂಪರ ಸಂಘಟನೆ ಬೇಡಿಕೆ

ಬೆಂಗಳೂರು ನಗರದಲ್ಲಿ ಪ್ರೇಮಿಗಳ ದಿನ ಆಚರಿಸಲು ಅವಕಾಶ ನೀಡಬಾರದು ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

ಬೆಂಗಳೂರು, ಫೆಬ್ರವರಿ. 13: ಫೆ.14 ರಂದು ಪ್ರೇಮಿಗಳ ದಿನದ ಬದಲು 'ಪೋಷಕರ ಆರಾಧನಾ ದಿನ' ಆಚರಿಸುವಂತೆ ಬಲಪಂಥೀಯ ಹಿಂದೂ ಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಬೆಂಗಳೂರು ನಗರದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಯಾವುದೇ ಸಂದರ್ಭದಲ್ಲೂ ಆಚರಿಸಲು ಅವಕಾಶ ನೀಡಬಾರದು ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಹೊಸ ಬೇಡಿಕೆಯನ್ನು ತಿಳಿಸಿದೆ.

ಪ್ರೇಮಿಗಳ ದಿನವನ್ನು ಹಸು ಅಪ್ಪುಗೆಯ ದಿನವನ್ನಾಗಿ ಆಚರಿಸುವ ನಿರ್ಧಾರ ತೀವ್ರ ವಿವಾದಕ್ಕೀಡಾಗಿದ್ದು, ಕೇಂದ್ರ ಸರ್ಕಾರ ಅದನ್ನು ಹಿಂಪಡೆದಿದೆ. ಇದಾದ ಕೂಡಲೇ ಹಿಂದೂ ಜನಜಾಗೃತಿ ಸಮಿತಿ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ.

Valentines Day 2023: Hindu organization demands to celebrate Parents Worship Day

"ಪ್ರೇಮಿಗಳ ದಿನದಂದು ಅನೇಕ ಹುಡುಗಿಯರು ಪ್ರೀತಿಯ ಬಲೆಗೆ ಬೀಳುತ್ತಾರೆ. ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು ಪ್ರೇಮಿಗಳ ದಿನವನ್ನು ಆಚರಿಸುವುದು ಸರಿಯಲ್ಲ. ಆದ್ದರಿಂದ ಫೆಬ್ರವರಿ 14 ಅನ್ನು ಪೋಷಕರಿಗೆ ಗೌರವ ನೀಡುವ ದಿನವನ್ನಾಗಿ ಆಚರಿಸಬೇಕು'' ಎಂದು ಜನಜಾಗೃತಿ ಸಮಿತಿ ಮುಖಂಡರು ಹೇಳಿದರು.

ಈ ಹಿಂದೆ ಬೆಂಗಳೂರಿನಲ್ಲಿ ಪ್ರೇಮಿಗಳ ದಿನ ಆಚರಿಸುತ್ತಿದ್ದವರ ಮೇಲೆ ಹಲವಾರು ದಾಳಿಗಳು ನಡೆದಿದ್ದವು.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ವಿವಾದಿತ ದೇವಮಾನವ ಅಸಾರಾಂ ಬಾಪು ಕೂಡ ಪ್ರೇಮಿಗಳ ದಿನವನ್ನು ಪೋಷಕರನ್ನು ಪೂಜಿಸುವ ದಿನವನ್ನಾಗಿ ಆಚರಿಸಬೇಕೆಂದು ಒತ್ತಾಯಿಸಿದ್ದಾರೆ. ಫೆಬ್ರವರಿ 14 ರಂದು ಪೋಷಕರನ್ನು ಗೌರವಿಸುವ ದಿನವನ್ನಾಗಿ ಆಚರಿಸಬೇಕೆಂದು ಅಸಾರಾಂ ಬಾಪು ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ.

Valentines Day 2023: Hindu organization demands to celebrate Parents Worship Day

ಪ್ರೇಮಿಗಳ ದಿನವನ್ನು ಹಸು ಅಪ್ಪುಗೆಯ ದಿನವನ್ನಾಗಿ ಆಚರಿಸುವಂತೆ ಕಳೆದ ತಿಂಗಳು ಪ್ರಾಣಿ ಕಲ್ಯಾಣ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ವಿಷಯ ವಿವಾದವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಯಾವುದೇ ಕಾರಣ ನೀಡದೆ ಆದೇಶವನ್ನು ಹಿಂಪಡೆದಿದೆ.

ಇತ್ತ, ಮಂಗಳೂರಿನಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ನವೀನ್ ಮೂಡುಶೆಡ್ಡೆ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿದ್ದು, ಮಂಗಳೂರಿನ ಎಲ್ಲಾ ವ್ಯಾಪಾರ ಸಂಸ್ಥೆಗಳು, ವಿಶೇಷವಾಗಿ ಉಡುಗೊರೆ ಕೇಂದ್ರಗಳು ಆಚರಣೆಗೆ ಬೆಂಬಲ ನೀಡದಂತೆ ಒತ್ತಾಯಿಸಿದ್ದಾರೆ.

ಪ್ರೇಮಿಗಳ ದಿನದ ಅಂಗವಾಗಿ ಉಡುಗೊರೆ ಕೇಂದ್ರಗಳು ವಿಶೇಷ ಉಡುಗೊರೆಗಳ ಮಾರಾಟವನ್ನು ಉತ್ತೇಜಿಸಬಾರದು ಎಂದು ಬಜರಂಗದಳದ ಸಂಚಾಲಕರು ಸೂಚನೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+