Get Updates
Get notified of breaking news, exclusive insights, and must-see stories!

US Consulate: ಬೆಂಗಳೂರಿಗೆ ಬಂತು ಅಮೇರಿಕಾ ಕಾನ್ಸುಲೇಟ್‌ ಕಚೇರಿ, ಕರ್ನಾಟಕಕ್ಕೆ ಏನೆಲ್ಲ ಪ್ರಯೋಜನ?

ಗ್ಲೋಬಲ್‌ ಸಿಟಿ ಎಂದು ವಿಶ್ವದ ಗಮನ ಸೆಳೆದಿರುವ ಬೆಂಗಳೂರಿಗೆ ಅಮೇರಿಕಾ ಕೂಡ ಕಾಲಿಟ್ಟಿದೆ. ಇಂದು ಬೆಂಗಳೂರಿನಲ್ಲಿ ಅಮೇರಿಕಾ ಕಾನ್ಸುಲೇಟ್‌ ಕಚೇರಿ ಉದ್ಘಾಟನೆಗೊಂಡಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನೂತನ ಕಾನ್ಸುಲೇಟ್‌ ಕಚೇರಿ ಉದ್ಘಾಟಿಸಿದರು.

ಬೆಂಗಳೂರಿನ ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ತಾತ್ಕಾಲಿಕವಾಗಿ ಅಮೇರಿಕಾ ಕಾನ್ಸುಲೇಟ್‌ ಕಚೇರಿಯನ್ನು ಕಾರ್ಯಾರಂಭ ಮಾಡಲಾಗಿದೆ. ಇನ್ನು ಕಚೇರಿಗೆ ಶಾಶ್ವತ ಸೌಲಭ್ಯವನ್ನು ಸಿಗುವವರೆಗೆ ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ದೊಡ್ಡ ಪ್ರಮಾಣದ ಕಚೇರಿ ತಲೆ ಎತ್ತಲಿದೆ.

US Consulate Office Inaugurated In Bengaluru By S Jaishankar And DCM DK Shivakumar

ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವ ಜೈಶಂಕರ್‌, ಬೆಂಗಳೂರಿನಲ್ಲಿ ನೂತನ ಅಮೆರಿಕ ದೂತಾವಾಸ ಕಚೇರಿ ಆರಂಭಗೊಂಡಿರುವುದು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಹೊಸ ನಾಂದಿ ಹಾಡಲಿದೆ ಎಂದರು. ಇದು ಅನೇಕರಿಗೆ ಪ್ರಯಾಣ ಮತ್ತು ವೀಸಾ ಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತದೆ. ಈ ಬಹುನಿರೀಕ್ಷಿತ ಬೆಳವಣಿಗೆಯು ಬೆಂಗಳೂರಿನ ರೋಮಾಂಚಕ ಟೆಕ್ ಸಮುದಾಯದೊಂದಿಗೆ ಸಹಯೋಗವನ್ನು ಹೆಚ್ಚಿಸಲು ಭರವಸೆ ನೀಡುತ್ತದೆ ಎಂದರು.

ಬೆಂಗಳೂರು ಪ್ರಮುಖ ಸ್ಥಳವಾಗಿದೆ. ಈ ಬಾರಿ ಅಮೆರಿಕದ ರಾಜತಾಂತ್ರಿಕರ ಶಾಶ್ವತ ನಿವಾಸ ಇರುವುದು ನಮಗೆ ಅನಿವಾರ್ಯವಾಗಿತ್ತು. ಭಾರತದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಆದ್ದರಿಂದ ನಾವು ಅವರ ತವರಾದ ಲಾಸ್ ಏಂಜಲೀಸ್‌ನಲ್ಲಿ ನಮ್ಮ ಕಾನ್ಸುಲೇಟ್‌ ಕಚೇರಿಯನ್ನು ತೆರೆಯುತ್ತೇವೆ ಎಂದು ಜೈಶಂಕರ್‌ ಹೇಳಿದರು.

ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ಬೆಂಗಳೂರಿನಲ್ಲಿ ಅಮೆರಿಕನ್ ಕಾನ್ಸುಲೇಟ್ ಕಚೇರಿ ಉದ್ಘಾಟನೆಗೊಂಡಿದ್ದು, ಬೆಂಗಳೂರಿಗೆ ಐತಿಹಾಸಿಕ ಕ್ಷಣವಾಗಿದೆ. ಜಗತ್ತಿಗೆ ಭಾರತದ ಕಿಟಕಿಯಾಗಿರುವ ಬೆಂಗಳೂರು ಈ ಮಹತ್ವದ ಬೆಳವಣಿಗೆಯನ್ನು ಸ್ವಾಗತಿಸುತ್ತದೆ. ಸಚಿವರಾದ ಡಾ.ಎಸ್.ಜೈಶಂಕರ್ ಮತ್ತು ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರೊಂದಿಗೆ ಒಟ್ಟಾಗಿ, ನಾವು ಹಂಚಿಕೆಯ ಪ್ರಗತಿಯತ್ತ ಹೆಜ್ಜೆ ಹಾಕುತ್ತೇವೆ ಎಂದು ಹೇಳಿದರು.

US Consulate Office Inaugurated In Bengaluru By S Jaishankar And DCM DK Shivakumar

ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್‌ ಕಚೇರಿ ಆರಂಭಿಸಲು ಸುಮಾರು 25 ವರ್ಷಗಳಿಂದಲೂ ಪ್ರಯತ್ನಿಸಿದ್ದೆವು. ಆದರೆ ಹಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಈ ಬಗ್ಗೆ ಮನವಿ ಮಾಡಲಾಗಿತ್ತು. ಆಗ ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಸಿಎಂ ಆಗಿದ್ದರು. ಅವರ ನೇತೃತ್ವದಲ್ಲೇ ಬೆಂಗಳೂರಿಗೆ ಅಮೆರಿಕ ಕಾನ್ಸುಲೇಟ್‌ ಕಚೇರಿಗೆ ಮನವಿ ಮಾಡಿದ್ದೆವು. ಬಳಿಕ ಎಸ್‌.ಎಂ.ಕೃಷ್ಣ ಅವರೇ ವಿದೇಶಾಂಗ ಸಚಿವರಾದಾಗಲೂ ಈ ಪ್ರಯತ್ನ ನಡೆದಿತ್ತು ಎಂದು ಡಿ.ಕೆ.ಶಿವಕುಮಾರ್‌ ನೆನೆದರು.

ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ಬೆಂಗಳೂರಿಗೆ ಇದು ಮಹತ್ವದ ದಿನವಾಗಿದೆ. ಇಂದು ನಗರದಲ್ಲಿ ಯುಎಸ್‌ ಕಾನ್ಸುಲೇಟ್ ತನ್ನ ಬಾಗಿಲು ತೆರೆಯಿತು. ಇದು ಕನ್ನಡಿಗರಿಗೆ ಐತಿಹಾಸಿಕ ಮೈಲಿಗಲ್ಲು. ಈ ಮೈಲಿಗಲ್ಲು ಜಾಗತಿಕ ವೇದಿಕೆಯಲ್ಲಿ ಬೆಂಗಳೂರಿನ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ವೀಸಾ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಮೂಲಕ ಮತ್ತು ಅಮೇರಿಕಾಗೆ ಪ್ರಯಾಣವನ್ನು ಸುಗಮಗೊಳಿಸುವ ಮೂಲಕ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕುಟುಂಬಗಳು ಸೇರಿದಂತೆ ನಮ್ಮವರಿಗೆ ಬಹಳ ಅನುಕೂಲವಾಗುವ ಭರವಸೆ ಇದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+