ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ
ಬೆಂಗಳೂರು, ಮಾರ್ಚ್ 30: ಬಹಳ ಭಿನ್ನವಾಗಿ ಚುನಾವಣೆ ಎದುರಿಸಲು ಸಜ್ಜಾಗಿ ಬಂದಿರುವ ಉಪೇಂದ್ರ ಅವರು ತಮ್ಮ ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರಿಚಯ ಮಾಡಿಸಿದರು.
ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸುತ್ತಿರುವ 14 ಅಭ್ಯರ್ಥಿಗಳನ್ನು ಇಂದು ಉಪೇಂದ್ರ ಅವರು ಮಾಧ್ಯಮಗಳಿಗೆ ಪರಿಚಯ ಮಾಡಿಸಿದರು.
ಸಿನಿ ಶೈಲಿಯಲ್ಲಿಯೇ ಹಿನ್ನೆಲೆಯಲ್ಲಿ ಹಾಡೊಂದು ಬರುತ್ತಿದ್ದಾಗ ಅಭ್ಯರ್ಥಿಗಳು ತಾವು ಪ್ರತಿನಿಧಿಸಿಸುತ್ತಿರುವ ಕ್ಷೇತ್ರ ಹಾಗೂ ತಮ್ಮ ಹೆಸರು ಬರೆದಿರುವ ಬೋರ್ಡ್ ಅನ್ನು ಹಿಡಿದು ವೇದಿಕೆಯ ಮಧ್ಯಕ್ಕೆ ಬಂದು ಪರಿಚಯ ಮಾಡಿಕೊಂಡರು. ಪ್ರತಿಯೊಬ್ಬ ಅಭ್ಯರ್ಥಿಯು ಬಂದಾಗಲೂ ಆ ಕ್ಷೇತ್ರದ ಕುರಿತು ಹಾಡು ಹಿನ್ನೆಲೆಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು.

ನಮ್ಮ ಪಕ್ಷ ಅಥವಾ ಅಭ್ಯರ್ಥಿ ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯೂ ಕೈಚಾಚುವುದಿಲ್ಲ, ನಮ್ಮ ಪಕ್ಷವಾಗಲಿ, ಅಭ್ಯರ್ಥಿಯಾಗಲಿ ಯಾರಿಗೂ ಹಣ ನೀಡುವುದಿಲ್ಲ, ಕ್ಷೇತ್ರಕ್ಕೆ ತಾವು ಮಾಡುವ ಸೇವೆಯನ್ನು ಮಾತ್ರವೇ ಇರಿಸಿಕೊಂಡು ಮತ ಕೇಳುತ್ತೇವೆ ಎಂದು ಉಪೇಂದ್ರ ಈ ಸಮಯದಲ್ಲಿ ಹೇಳಿದರು.
ನಮ್ಮ ಪಕ್ಷದ ನೀತಿ-ನಿಯಮಗಳಿಗೆ ಬದ್ಧರಾಗಿ ಹಾಗೂ ಅವರು ಜನರ ಪರವಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ತಿಳಿಸಿದರು. ಹಣ ಬಲ, ಜಾತಿಬಲ ಯಾವುದೂ ಇಲ್ಲದೆ ಸಮಾಜಕ್ಕಾಗಿ ದುಡಿಯುವವರೇ ಬೇಕು ಎಂದು ಅವರು ಹೇಳಿದರು.
ಹಾಸನ ಹೆಚ್.ಎಂ ಚಂದ್ರೇಗೌಡ, ಉಡುಪಿ-ಚಿಕ್ಕಮಗಳೂರು ಸುರೇಶ್ ಕುಂದರ್, ಚಿತ್ರದುರ್ಗ ದೇವೇಂದ್ರಪ್ಪ , ತುಮಕೂರು ಛಾಯಾ ರಾಜಾಶಂಕರ್, ಮಂಡ್ಯ ಸಿ.ಪಿ.ಗೌಡ, ದಕ್ಷಿಣ ಕನ್ನಡ ವಿಜಯ ಶ್ರೀನಿವಾಸ್, ಮೈಸೂರು ವಿ.ಆಶಾರಾಣಿ ಸೇರಿದಂತೆ 14 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಪಕ್ಷದ ಚಿಹ್ನೆ ಆಟೋರಿಕ್ಷಾ. ಇದನ್ನು ಬೆಂಬಲಿಸುವಂತೆ ಮನವಿ ಮಾಡಿದರು.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications