ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕಮಾಂಡ್ ಬುಲಾವ್, ರಮ್ಯಾ ನಾಮಪತ್ರ ವಿಳಂಬ

By Mahesh
|
Google Oneindia Kannada News

ಬೆಂಗಳೂರು, ಮಾ.23: ಮಂಡ್ಯ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಸೋಮವಾರ ನಾಮಪತ್ರ ಸಲ್ಲಿಕೆ ತಯಾರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ನಿಂದ ರಮ್ಯಾ ಅವರಿಗೆ ಬುಲಾವ್ ಬಂದಿದೆ. ಈ ಬಗ್ಗೆ ರಮ್ಯಾ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಮಂಡ್ಯ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾದ ವಿಷಯವಾಗಿಲ್ಲ. ರಮ್ಯಾ ಅವರು ಹಳ್ಳಿ ಗಲ್ಲಿ ಸುತ್ತುತ್ತಾ ಬಿರುಸಿನ ಪ್ರಚಾರ ಕಾರ್ಯ ನಿರತರಾಗಿರುವ ಸಂದರ್ಭದಲ್ಲೇ ಕಾಂಗ್ರೆಸ್ ಹೈಕಮಾಂಡ್ ನಿಂದ ಬಂದಿರುವ ಕರೆ ಕೊಂಚ ಹಿನ್ನಡೆ ಎನ್ನಬಹುದು. ಮಂಡ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿರುವುದು ಹಾಗೂ ಹೀಗೂ ದೆಹಲಿಯ ಹಿರಿಯ ನಾಯಕರ ಕಿವಿಗೆ ಬಿದ್ದಿದೆ.

ಹಿರಿಯ ನಾಯಕ ಜಿ. ಮಾದೇಗೌಡರು ಬರೆದಿದ್ದರು ಎನ್ನಲಾದ ಪತ್ರ, ಅಂಬರೀಷ್ ಬಗ್ಗೆ ರಮ್ಯಾ ಹೇಳಿಕೆ, ಅಂಬರೀಷ್ ಅಭಿಮಾನಿಗಳಿಗೆ ರಮ್ಯಾ ಬೆಲೆ ಕೊಡುತ್ತಿಲ್ಲ ಎಂಬ ದೂರು ಸೇರಿದಂತೆ ಇನ್ನಷ್ಟು ವಿಷಯಗಳ ಬಗ್ಗೆ ರಮ್ಯಾ ಅವರ ಹೇಳಿಕೆ ಪಡೆಯಲು ಕಾಂಗ್ರೆಸ್ ಹೈಕಮಾಂಡ್ ಇಚ್ಛಿಸಿದೆ. ಹೀಗಾಗಿ ಭಾನುವಾರ ದೆಹಲಿಗೆ ಬರುವಂತೆ ರಮ್ಯಾ ಅವರಿಗೆ ಕರೆ ಬಂದಿದೆ. ಹೀಗಾಗಿ ಸೋಮವಾರ (ಮಾ.23) ನಾಮಪತ್ರ ಸಲ್ಲಿಸಬೇಕಿದ್ದ ರಮ್ಯಾ ಅವರು ಮಾ.26ರಂದು ನಾಮಪತ್ರ ಸಲ್ಲಿಸಲಿದ್ದಾರಂತೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಕರೆ ಬಂದಿರುವುದರಿಮ್ದ ರಮ್ಯಾ ಅವರು ದೆಹಲಿಗೆ ತೆರಳುತ್ತಿದ್ದಾರೆ. ರಮ್ಯಾ ಅವರು ಮಾ.26ಕ್ಕೆ ನಾಮಪತ್ರ ಸಲ್ಲಿಸುತ್ತಾರೆ. ರಮ್ಯಾ ಪರ ಪ್ರಚಾರ ಕೈಗೊಳ್ಳುವುದಾಗಿ ಸಚಿವ ಅಂಬರೀಷ್ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಅವರು ಘೋಷಿಸಿದ್ದಾರೆ. [ರಮ್ಯಾ ಚುನಾವಣಾ ಪ್ರಚಾರ ಗ್ಯಾಲರಿ ನೋಡಿ]

ಮಂಡ್ಯದಲ್ಲಿ ಕಾರ್ಯಕರ್ತ ಕಡೆಗಣನೆ ಬಗ್ಗೆ ರಮ್ಯಾ

ಮಂಡ್ಯದಲ್ಲಿ ಕಾರ್ಯಕರ್ತ ಕಡೆಗಣನೆ ಬಗ್ಗೆ ರಮ್ಯಾ

'ನಾನು ಯಾರನ್ನು ಕಡೆಗಣಿಸಿಲ್ಲ, ಉದ್ದೇಶಪೂರ್ವಕವಾಗಿಯೇ ನನ್ನನ್ನು ಸೋಲಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಲ ಕಾರ್ಯಕರ್ತರ ವಿರುದ್ಧ ರಮ್ಯಾ ನೀಡಿದ ಹೇಳಿಕೆಯಿಂದ ಕೆಲಕಾಲ ಮಂಡ್ಯ ಕಾಂಗ್ರೆಸ್ ಘಟಕದಲ್ಲಿ ಸಂಚಲನ ಉಂಟಾಗಿತ್ತು.

ರಾಹುಲ್ ಗಾಂಧಿ ಮುಂದೆ ರಮ್ಯಾ ವಿವರಣೆ ನೀಡಿಕೆ

ರಾಹುಲ್ ಗಾಂಧಿ ಮುಂದೆ ರಮ್ಯಾ ವಿವರಣೆ ನೀಡಿಕೆ

ಗೆಲುವು ಸಾಧಿಸಿದ ಮೇಲೆ ರಮ್ಯಾ ಅವರು ಕಾರ್ಯಕರ್ತರನ್ನು ಮರೆತ್ತಿದ್ದಾರೆ. ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಚೇರಿ ತನಕ ಕೇಳಿಸುವಂತೆ ಮಂಡ್ಯದ ಉತ್ಸಾಹಿ ಯುವ ಕಾರ್ಯಕರ್ತರು ದನಿ ಎತ್ತಿದ್ದರು. ಈಗ ಈ ದನಿ ದೆಹಲಿ ದೊರೆಗಳಿಗೂ ಮುಟ್ಟಿದ್ದು ರಮ್ಯಾ ಅವರನ್ನು ಈ ಬಗ್ಗೆ ಪ್ರಶ್ನಿಸಲು ಕರೆಸಿಕೊಳ್ಳಲಾಗಿದೆ. ರಾಹುಲ್ ಗಾಂಧಿ ಮುಂದೆ ರಮ್ಯಾ ವಿವರಣೆ ನೀಡಲಿದ್ದಾರೆ

ನಾಮಪತ್ರ ಸಲ್ಲಿಕೆ ಬಗ್ಗೆ ಸಂಸದೆ ರಮ್ಯಾ ಟ್ವೀಟ್

ನಾಮಪತ್ರ ಸಲ್ಲಿಕೆ ಬಗ್ಗೆ ಸಂಸದೆ ರಮ್ಯಾ ಟ್ವೀಟ್ ಮಾಡಿ ಮಾ.27ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.

ವಿವಿಧ ಹಳ್ಳಿಗಳಲ್ಲಿ ರಮ್ಯಾ ಚುನಾವಣೆ ಪ್ರಚಾರ

ವಿವಿಧ ಹಳ್ಳಿಗಳಲ್ಲಿ ರಮ್ಯಾ ಚುನಾವಣೆ ಪ್ರಚಾರ

ವಿವಿಧ ಹಳ್ಳಿಗಳಲ್ಲಿ ರಮ್ಯಾ ಚುನಾವಣೆ ಪ್ರಚಾರ ನಡೆಸಿದ ಚಿತ್ರ

ನೀರಿನ ಬವಣೆ ಕಂಡು ಕೊಡ ಹಿಡಿದ ರಮ್ಯಾ

ನೀರಿನ ಬವಣೆ ಕಂಡು ಕೊಡ ಹಿಡಿದ ರಮ್ಯಾ

ನೀರಿನ ಬವಣೆ ಕಂಡು ಕೊಡ ಹಿಡಿದ ರಮ್ಯಾ ಅವರು ಸ್ವತಃ ನಲ್ಲಿ ಹತ್ತಿರ ನಿಂತು ನೀರು ಹಿಡಿದರು.

ಮಂಡ್ಯ ಘಟಕದ ಸಭೆಯಲ್ಲಿ ನಡೆದಿದ್ದೇನು?

ಮಂಡ್ಯ ಘಟಕದ ಸಭೆಯಲ್ಲಿ ನಡೆದಿದ್ದೇನು?

* ರಮ್ಯಾ ಅವರು ನೀಡುತ್ತಿರುವ ವಸತಿ ಸಚಿವ ಎಂ.ಎಚ್ ಅಂಬರೀಷ್ ಅವರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಅಂಬರೀಷ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ
* ಕಳೆದ ವಾರ ನಡೆದ ಸಭೆಯಲ್ಲಿ ನಂತರ ಅಂಬರೀಷ್ ಅಭಿಮಾನಿಗಳು ಬೆಂಬಲಿಗ ಕಾರ್ಯಕರ್ತರು ಮಾತ್ರ ಕಾಣಿಸಿಕೊಂಡಿದ್ದು ವಕ್ತಾರ ಟಿ.ಎಸ್ ಸತ್ಯಾನಂದ ಅವರ ಗುಂಪಿನ ಕಡೆಗಣನೆ.
* ನಾಗಮಂಗಲ, ಶ್ರೀರಂಗಪಟ್ಟಣ, ಕೊಪ್ಪ, ಪಾಂಡವಪುರದ ನಾಯಕರಿಗೆ ಮಾತ್ರ ಆಹ್ವಾನ, ಮಂಡ್ಯ ನಗರದ ನಾಯಕರಿಗೆ ಆಹ್ವಾನ ಸಿಗದಿರುವುದು
* ಎಲ್ ಆರ್ ಶಿವರಾಮೇಗೌಡ, ಅಂಬರೀಷ್ ಆಪ್ತ ಅಮರಾವತಿ ಚಂದ್ರಶೇಖರ್ ಅವರಿಂದ ಸತ್ಯಾನಂದ ಬೆಂಬಲಿಗರಿಗೆ ಸಮಾಧಾನ.

ರಮ್ಯಾ ನಾಮಪತ್ರ ಸಲ್ಲಿಕೆ ಬಗ್ಗೆ ವಿವರ

ರಮ್ಯಾ ನಾಮಪತ್ರ ಸಲ್ಲಿಕೆ ಬಗ್ಗೆ ವಿವರ

ಮಾ.26ರಂದು ಬೆಳಗ್ಗೆ ನಾಮಪತ್ರಸಲ್ಲಿಕೆಗೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಎಲ್ಲಾ ಚಿತ್ರಗಳ ಕೃಪೆ: ರಮ್ಯಾ ಟ್ವಿಟ್ಟರ್ ಖಾತೆ

ರಮ್ಯಾಗೆ ಬಿ ಫಾರಂ ನೀಡಿದ ಕೆಪಿಸಿಸಿ ಅಧ್ಯಕ್ಷ

ರಮ್ಯಾಗೆ ಬಿ ಫಾರಂ ನೀಡಿದ ಕೆಪಿಸಿಸಿ ಅಧ್ಯಕ್ಷ

ಮಂಡ್ಯ ಕ್ಷೇತ್ರದ ಅಭ್ಯರ್ಥಿ ರಮ್ಯಾ ಅವರಿಗೆ ನಾಮಪತ್ರ ಸಲ್ಲಿಸಲು ಬಿ ಫಾರಂ ನೀಡಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್

English summary
Elections 2014: Mandya MP Ramya tweeted (@divyaspandana) saying her nomination filing is delayed due to an urgent call from New Delhi. It remains to be seen, the reasons for High Command summoning her to the capital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X