ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಮಸ್ಯೆ ಬಗ್ಗೆ ಸಿಎಂಗೆ ಯುನೈಟೆಡ್ ಬೆಂಗಳೂರು ಪತ್ರ

By Gururaj
|
Google Oneindia Kannada News

ಬೆಂಗಳೂರು, ಜೂನ್ 24 : ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರು ನಗರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಂಗಳೂರು ಡಿಮಾಂಡ್ಸ್ ಕ್ಯಾಂಪೈನ್ ಎಂಬ ಘೋಷವಾಕ್ಯದಡಿ ಬೆಂಗಳೂರು ನಗರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ವೇದಿಕೆ ಸಿದ್ಧವಾಗಿದೆ.

ಬತ್ತುತ್ತಿರುವ ಕೆರೆಗಳು, ಅನಧಿಕೃತ ಒತ್ತುವರಿ, ಎಲ್ಲೆಂದರಲ್ಲಿ ಕಸ ತಂದು ಸುರಿಯುವುದು, ನಂಬಿಕಸ್ತರಲ್ಲದ ನೆರೆಹೊರೆಯವರು ಮುಂತಾದವುಗಳಿಂದಾಗಿ ಬೆಂಗಳೂರು ನಗರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮತ್ತೊಂದು ಸ್ಕೈ ವಾಕ್‌ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ ಬಿಬಿಎಂಪಿಮತ್ತೊಂದು ಸ್ಕೈ ವಾಕ್‌ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ

ಬೆಂಗಳೂರು ನಗರ ಮತ್ತೆ ಹಿಂದಿನ ರೀತಿಯಲ್ಲಿ ಆಗಬೇಕಾದರೆ ಸರ್ಕಾರ ಮತ್ತು ಜನರು ಒಟ್ಟಾಗಿ ಕೆಲಸ ಮಾಡಬೇಕು. ಯುನೈಟೆಡ್ ಬೆಂಗಳೂರು ಮುಖ್ಯಮಂತ್ರಿ/ಉಪಮುಖ್ಯಮಂತ್ರಿಗಳಿಗೆ ಸರ್ಕಾರ ಮತ್ತು ಜನರ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಕುರಿತು ಮನವಿ ಸಲ್ಲಿಸಿದೆ.

United Bengaluru petitions to Chief Minister about Bengaluru city

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾಗ ಎಚ್.ಎಸ್.ದೊರೆಸ್ವಾಮಿ ಮತ್ತು ಇತರರು ಬೆಂಗಳೂರು ನಗರದ ಸಮಸ್ಯೆ ಕುರಿತು ಚರ್ಚೆ ನಡೆಸಲು ಕಾಲಾವಕಾಶ ನೀಡುವಂತೆ ಸರ್ಕಾರವನ್ನು ಮನವಿ ಮಾಡಿದರು.

ಅಂತೂ ಇಂತೂ ಈಡೇರಿದ ಮೆಟ್ರೋ ನೌಕರರ ಬೇಡಿಕೆಗಳುಅಂತೂ ಇಂತೂ ಈಡೇರಿದ ಮೆಟ್ರೋ ನೌಕರರ ಬೇಡಿಕೆಗಳು

ಎಚ್.ಎಸ್.ದೊರೆಸ್ವಾಮಿ ಅವರು, 'ಎಚ್.ಡಿ.ಕುಮಾರಸ್ವಾಮಿ ಅವರು ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವಿಷನ್ ಗ್ರೂಪ್ ಸದಸ್ಯರನ್ನು ಭೇಟಿ ಮಾಡಿ ಬೆಂಗಳೂರು ನಗರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು' ಎಂದರು.

'ನಮ್ಮ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಕೆರೆಗಳನ್ನು ಸಂರಕ್ಷಣೆ ಮಾಡಬೇಕಿದೆ. ಬಜೆಟ್ ಮಂಡನೆ ಮಾಡುವ ಮುನ್ನ ಅವರು ನಗರದ ಜನರ ಜೊತೆ ಚರ್ಚೆ ನಡೆಸಲಿ' ಎಂದು ದೊರೆಸ್ವಾಮಿ ಹೇಳಿದರು.

ನಗರದ ಸಮಸ್ಯೆಗಳು
* ವಸತಿ ಪ್ರದೇಶಗಳ ವಾಣಿಜ್ಯೀಕರಣ
* ಮೂಲಸೌಕರ್ಯಗಳು
* ವಾರ್ಡ್ ಕಮಿಟಿ ಮತ್ತು ಆಡಳಿತದಲ್ಲಿ ಜನರ ಸಹಭಾಗಿತ್ವ
* ಬೆಂಗಳೂರಿನಲ್ಲಿ ಕೆಸಿಡಿಸಿಯ ಸಂಪೂರ್ಣ ಕಾರ್ಯವಿಧಾನ
* ಘನತ್ಯಾಜ್ಯ ವಿಲೇವಾರಿ ನಿರ್ವಹಣೆ
* ಮಹಿಳೆ ಮತ್ತು ಮಕ್ಕಳ ಸುರಕ್ಷತೆ
* ರಿಯಲ್ ಎಸ್ಟೇಟ್ ರೆಗ್ಯುಲರ್ ಅಥಾರಿಟಿ

English summary
Bengaluru has in the last several years witnessed a massive deterioration. We strongly believe both the government and citizens must work together to reclaim our city and therefore. United Bengaluru requested CM/ DCM to act upon the following plea from citizens of Bengaluru through a letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X