ಚಿತ್ರಗಳು : ಸುರಂಗ ಮಾರ್ಗದಲ್ಲಿ ಓಡಿದ ನಮ್ಮ ಮೆಟ್ರೋ

ಬೆಂಗಳೂರು, ಮಾ. 14 : ಬಹು ನಿರೀಕ್ಷಿತ ನಮ್ಮ ಮೆಟ್ರೋ ರೈಲಿನ ಸುರಂಗ ಮಾರ್ಗದ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಎಂ.ಜಿ. ರಸ್ತೆಯಿಂದ ಕಬ್ಬನ್‌ಪಾರ್ಕ್‌ ನಿಲ್ದಾಣದವರೆಗಿನ ನಮ್ಮ ಮೆಟ್ರೋ ಸಂಚಾರ ಗುರುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಮಾರ್ಗ 2016ರ ಜನವರಿಗೆ ಸಾರ್ವಜನಿಕ ಪ್ರಯಾಣಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಚಾಲಕರಾದ ದೀನ್‌ದಯಾಳ್‌ ಮತ್ತು ಆನಂದ್‌ ಸೇರಿದಂತೆ 45 ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡ ರೈಲು ಎಂ.ಜಿ.ರಸ್ತೆಯಿಂದ ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿತು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ರೈಲನ್ನು ಬರಮಾಡಿಕೊಂಡರು. [ಮೆಜೆಸ್ಟಿಕ್ ನಲ್ಲಿ ನವೆಂಬರ್ ನಲ್ಲಿ ಓಡಲಿದೆ ರೈಲು]

'ನಮ್ಮ ಮೆಟ್ರೋ'ಯೋಜನೆಯ ಮೊದಲ ಹಂತದಲ್ಲಿ 2010ಏಪ್ರಿಲ್‌ನಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್‌ನ 4.8 ಕಿ.ಮೀ. ಉದ್ದದ ಈ ಸುರಂಗ ಮಾರ್ಗ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿತ್ತು. 2010ರ ನವೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿತ್ತು. 2015ರಲ್ಲಿ ಪ್ರಾಯೋಗಿಕ ಸಂಚಾರ ಸಾಧ್ಯವಾಗಿದೆ.

ಈ ಮಾರ್ಗದಲ್ಲಿ ಇನ್ನೂ ಸುಮಾರ 3.50 ಕಿ.ಮೀ. ಉದ್ದದ ಪ್ರಾಯೋಗಿಕ ಸಂಚಾರ ಬಾಕಿ ಇದೆ. ಇದೇ ರೈಲು ವಿಧಾನಸೌಧ, ಸೆಂಟ್ರಲ್‌ ಕಾಲೇಜು, ಕೆ.ಜಿ. ರಸ್ತೆ, ಮೆಜೆಸ್ಟಿಕ್‌, ಸಿಟಿ ರೈಲು ನಿಲ್ದಾಣದ ಮೂಲಕ ಮಾಗಡಿ ರಸ್ತೆಯನ್ನು ತಪುಪಬೇಕಾಗಿದೆ. (ಪಿಟಿಐ ಚಿತ್ರಗಳು)

ಸುರಂಗ ಮಾರ್ಗದೊಳಗೆ ಓಡಿದ ನಮ್ಮ ಮೆಟ್ರೋ

ಸುರಂಗ ಮಾರ್ಗದೊಳಗೆ ಓಡಿದ ನಮ್ಮ ಮೆಟ್ರೋ

ಬೆಂಗಳೂರಿನ ನಮ್ಮ ಮೆಟ್ರೋ ರೈಲು ಗುರುವಾರ ಸುರಂಗ ಮಾರ್ಗದೊಳಗೆ ಪ್ರಯಾಣ ಬೆಳೆಸಿದೆ. 2010ರಲ್ಲಿ ಆರಂಭವಾಗಿದ್ದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು 2015ರಲ್ಲಿ ರೈಲು ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿದೆ. (ಚಿತ್ರ : ಕಬ್ಬನ್ ಪಾರ್ಕ್ ನಿಲ್ದಾಣ)

ಯಾವ ಮಾರ್ಗದಲ್ಲಿ ಸಂಚಾರ?

ಯಾವ ಮಾರ್ಗದಲ್ಲಿ ಸಂಚಾರ?

ಪೂರ್ವ-ಪಶ್ಚಿಮ ಕಾರಿಡಾರ್‌ನ ಎಂ.ಜಿ.ರಸ್ತೆ-ಕಬ್ಬನ್ ಪಾರ್ಕ್ ನಿಲ್ದಾಣದ ನಡುವಿನ 4.8 ಕಿ.ಮೀ. ಉದ್ದದ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆದಿದೆ. 45 ಸಿಬ್ಬಂದಿಗಳು ಈ ಪ್ರಾಯೋಗಿಕ ಸಂಚಾರದಲ್ಲಿ ಪಾಲ್ಗೊಂಡಿದ್ದರು. (ಚಿತ್ರ : ಕಬ್ಬನ್ ಪಾರ್ಕ್‌ನಲ್ಲಿ ರೈಲು ಬಂದಾಗ ಕಂಡಿದ್ದು ಹೀಗೆ)

10 ನಿಮಿಷದಲ್ಲಿ ಮುಗಿದ ಪ್ರಾಯೋಗಿಕ ಸಂಚಾರ

10 ನಿಮಿಷದಲ್ಲಿ ಮುಗಿದ ಪ್ರಾಯೋಗಿಕ ಸಂಚಾರ

ಎಂ.ಜಿ. ರಸ್ತೆ ನಿಲ್ದಾಣದಿಂದ ಕಬ್ಬನ್‌ಪಾರ್ಕ್‌ ನಿಲ್ದಾಣದ ನಡುವಿನ ಅಂತರವನ್ನು ನಮ್ಮ ಮೆಟ್ರೋ ರೈಲು ಸುಮಾರು 10 ನಿಮಿಷದಲ್ಲಿ ಕ್ರಮಿಸಿತು. ಪ್ರಾಯೋಗಿಕ ಸಂಚಾರವಾದ್ದರಿಂದ ನಿಧಾನವಾಗಿ ರೈಲು ಚಲಿಸಿತು. (ಕಬ್ಬನ್ ಪಾರ್ಕ್ ನಿಲ್ದಾಣ)

ರೈಲನ್ನು ಬರಮಾಡಿಕೊಂಡ ಖರೋಲಾ

ರೈಲನ್ನು ಬರಮಾಡಿಕೊಂಡ ಖರೋಲಾ

ರೈಲಿನ ಚಾಲಕರಾದ ದೀನ್‌ದಯಾಳ್‌ ಮತ್ತು ಆನಂದ್‌ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ 45 ಜನರ ತಂಡ ಪ್ರಾಯೋಗಿಕ ಸಂಚಾರದ ರೈಲಿನಲ್ಲಿ ಪ್ರಯಾಣಿಸಿತು. ಕಬ್ಬನ್‌ಪಾರ್ಕ್‌ ನಿಲ್ದಾಣದಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ರೈಲನ್ನು ಸ್ವಾಗತಿಸಿದರು. (ರೈಲು ಕಬ್ಬನ್‌ ಪಾರ್ಕ್ ನಿಲ್ದಾಣಕ್ಕೆ ಬಂದಾಗ ಕಂಡಿದ್ದು ಹೀಗೆ)

2010ರಿಂದ ಸುರಂಗ ಮಾರ್ಗ ಕಾಮಗಾರಿ ಆರಂಭ

2010ರಿಂದ ಸುರಂಗ ಮಾರ್ಗ ಕಾಮಗಾರಿ ಆರಂಭ

2010ರ ಏಪ್ರಿಲ್‌ನಲ್ಲಿ 4.8 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿತ್ತು. 2010ರ ನವೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು. 4.8 ಕಿ.ಮೀ.ಮಾತ್ರ ಸಂಚಾರ ನಡೆದಿದ್ದು ಇನ್ನೂ 3.50 ಕಿ.ಮೀ. ಕ್ರಮಿಸಬೇಕಾಗಿದೆ.

ರೈಲು ಮಾಗಡಿ ರಸ್ತೆ ತಲುಪಬೇಕು

ರೈಲು ಮಾಗಡಿ ರಸ್ತೆ ತಲುಪಬೇಕು

ಇದೇ ರೈಲು ಮುಂದಿನ ವಾರದಲ್ಲಿ ವಿಧಾನಸೌಧ, ಸೆಂಟ್ರಲ್‌ ಕಾಲೇಜು, ಕೆ.ಜಿ. ರಸ್ತೆ, ಮೆಜೆಸ್ಟಿಕ್‌, ಸಿಟಿ ರೈಲು ನಿಲ್ದಾಣದ ಮೂಲಕ ಮಾಗಡಿ ರಸ್ತೆಯ ನಿಲ್ದಾಣವನ್ನು ತಲುಪಬೇಕಿದೆ. ಆದರೆ, ಈ ಮಾರ್ಗದಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಆದ್ದರಿಂದ ಬ್ಯಾಟರಿ ಸಹಾಯದಿಂದ ರೈಲು ಚಲಿಸಬೇಕು.

ಜೂನ್‌ನಲ್ಲಿ ಹಳಿಗಳ ಪರೀಕ್ಷೆ

ಜೂನ್‌ನಲ್ಲಿ ಹಳಿಗಳ ಪರೀಕ್ಷೆ

ಈ ಮಾರ್ಗದಲ್ಲಿ ತಜ್ಞರು ಜೂನ್‌ನಲ್ಲಿ ಸಿಗ್ನಲ್‌ ಮತ್ತು ಹಳಿಗಳ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಪೂರ್ವ-ಪಶ್ಚಿಮ ಮಾರ್ಗದಲ್ಲಿ ಡಿ. 31ಕ್ಕೆ ಎಲ್ಲಾ ಪರೀಕ್ಷೆಗಳು ಮುಗಿಯಲಿದ್ದು, 2016ರ ಜನವರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+