Udyan Express: ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ಶಾಕ್! ಲೋಕಲ್ ಟ್ರೈನ್ ಪ್ರಯಾಣದ ಸಮಯ ಹೆಚ್ಚಳ
ಬೆಂಗಳೂರು: ಬೆಂಗಳೂರು ಪ್ರಾದೇಶಿಕ ರೈಲು ಸಾರಿಗೆಯು ಸುಧಾರಿಸಬೇಕಾದ ಅಗತ್ಯವಿದೆ. ಏಕೆಂದರೆ ನೈಋತ್ಯ ರೈಲ್ವೆ ವಲಯವು (SWR) ಉದ್ಯಾನ ಎಕ್ಸ್‌ಪ್ರೆಸ್ ಸ್ಥಳೀಯ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ರೈಲು ಸಂಚಾರದ ಸಮಯ ಪರಿಷ್ಕರಣೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇನು 2026ರ ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ನೀಡುತ್ತಿರುವ 'ಉಡುಗೊರೆಯೋ' ಅಥವಾ ಪ್ರಯಾಣಿಕರಿಗೆ ತೊಂದರೆ ನೀಡಲೆಂದೆ ಸಮಯ ಹೆಚ್ಚಿಸಲಾಯಿತಾ? ಎಂದು ಸಾರ್ವಜನಿಕರು ಖಾರವಾಗಿ ಪ್ರಶ್ನಿಸಿದ್ದಾರೆ.
ಹೌದು, ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ರೈಲು ಸಂಪರ್ಕ ಲಭ್ಯವಾಗುವಂತೆ ಹಾಗೂ ಸ್ಥಳೀಯರಿಗೆ ಅನುಕೂಲವಾಗುವಂತೆ 'ಉದ್ಯಾನ ಎಕ್ಸ್‌ಪ್ರೆಸ್ ರೈಲು (11301) ಸೇವೆ ಆರಂಭಿಸಲಾಯಿತು. ಈ ರೈಲು ವಾರದಲ್ಲಿ ಏಳು ದಿನವು ಬೆಂಗಳೂರು ಕೆಎಸ್ ಆರ್ ರೈಲು ನಿಲ್ದಾಣದಿಂದ ಯಲಹಂಕ ನಿಲ್ದಾಣವರೆಗೆ 27 ಕಿಲೋ ಮೀಟರ್ ಸಂಚರಿಸುತ್ತದೆ. ಈ ಪ್ರಯಾಣಕ್ಕಾಗಿ ರೈಲು ಒಟ್ಟು 2 ಗಂಟೆ ತೆಗೆದುಕೊಳ್ಳುತ್ತಿದ್ದ ಸಮಯವನ್ನು ರೈಲ್ವೆ ಅಧಿಕಾರಿಗಳು 2026 ಜನವರಿಯಿಂದ ಜಾರಿಗೆ ಬರುವಂತೆ 2.45 ನಿಮಿಷಗಳಿಗೆ ವಿಸ್ತರಿಸಿದ್ದು ಹಾಸ್ಯಾಸ್ಪವಾಗಿದೆ. ಈ ಬಗ್ಗೆ ರೈಲು ಬಳಕೆದಾರರು ಅಸಮಾಧಾನ ಹೊರ ಹಾಕಿದ್ದಾರೆ.

ಈ ಸಮಸ್ಯೆಗೆ ಪರಿಹಾರ ಇದೆಯೇ?
ಬಳಕೆದಾರರು ನೈಋತ್ಯ ರೈಲ್ವೆಯ ಬೆಂಗಳೂರು ಕೆಎಸ್‌ಆರ್-ಯಲಹಂಕ ಉದ್ಯಾನ ಎಕ್ಸ್‌ಪ್ರೆಸ್ (11301) ರೈಲಿನ ಪ್ರಯಾಣ ಸಮಯ ಹೆಚ್ಚಿಸಿದ ಮಾಹಿತಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ, ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಟ್ಯಾಗ್ ಮಾಡಲಾಗಿದೆ. ಕೇವಲ 27 ಕಿಲೋ ಮೀಟರ್ ದೂರವನ್ನು ಬರೋಬ್ಬರಿ 2.45 ನಿಮಿಷದಲ್ಲಿ ರೈಲು ಪ್ರಯಾಣಿಸಲಿದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಅದಕ್ಕೆ ತಾವುಗಳು ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ. ಇಂತಹ ಸಮಸ್ಯೆ ಕೇವಲ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಮಾತ್ರವೇ ಆಗುತ್ತದೆಯೇ? ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ.
ರೈಲು ಸಮಯ ಪರಿಷ್ಕರಣೆ ಅಸಮಂಜಸ
ಉದ್ಯಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಷ್ಟು ಕಡಿಮೆ ದೂರವನ್ನು 2 ಗಂಟೆಗಳಲ್ಲಿ ಪ್ರಯಾಣಿಸುವುದೇ ಸಾಕು ಸಾಕಾಗಿ ಹೋಗುತ್ತಿತ್ತು. ಇಂತಹ ಸಂದರ್ಭದಲ್ಲಿ 2026ರ ಜನವರಿಯಿಂದ ಜಾರಿಗೆ ಬರುವಂತೆ ಪ್ರಯಾಣದ ಸಮಯಕ್ಕೆ ಹೆಚ್ಚುವರಿ 45 ನಿಮಿಷಗಳನ್ನು ಸೇರಿಸಲಾಗಿದೆ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ನಗರ ಒಳಗಿನ ಕಡಿಮೆ ದೂರದ ಪ್ರಯಾಣಕ್ಕೆ ಇಷ್ಟು ಹೆಚ್ಚು ಸಮಯ ತೆಗೆದುಕೊಳ್ಳುವುದು ಅಸಮಂಜಸ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ರೈಲ್ವೆ ಇಲಾಖೆಯು ತನ್ನ ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ನೈಋತ್ಯ ರೈಲ್ವೆ ವ್ಯಾಪ್ತಿಯ ಈ ಉದ್ಯಾನ ಎಕ್ಸ್‌ಪ್ರೆಸ್ ರೈಲಿನ ಸಮಯ ಮಾತ್ರವಲ್ಲದೇ 2026ರ ಜನವರಿಯಿಂದ ಇನ್ನಷ್ಟು ಮಾರ್ಗಗಳ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಆಗುವ ನಿರೀಕ್ಷೆಗಳು ಇವೆ.












Click it and Unblock the Notifications