ಬೆಂಗಳೂರಲ್ಲಿ ಊಬರ್ ಚಾಲಕನಿಂದ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು, ಅಕ್ಟೋಬರ್ 8: ನಗರದಲ್ಲಿ ಅಪ್ಲಿಕೇಷನ್ ಆಧಾರಿತ ಕ್ಯಾಬ್ ಸೇವೆ ನಂಬುವುದು ಕಷ್ಟವಾಗಿದೆ.

ಇಲ್ಲೊಬ್ಬ ಊಬರ್ ಕ್ಯಾಬ್ ಚಾಲಕ ಪ್ರಯಾಣಿಕನ ಮೂಗಿಗೆ ಹೊಡೆದು, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ದಿನನಿತ್ಯ ಒಂದಲ್ಲಾ ಒಂದು ಆತಂಕದ ಸುದ್ದಿಯನ್ನು ನಾವು ಕೇಳುತ್ತಲೇ ಇರುತ್ತೇವೆ.ಇತ್ತೀಚೆಗಷ್ಟೇ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಬರುವಾಗ ಮಹಿಳೆಯನ್ನು ನಡು ರಾತ್ರಿ ರಸ್ತೆಯ ಮಧ್ಯೆ ಬಿಟ್ಟುಹೋಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

Uber Driver Breaks Bengaluru Techies Nose

ಬುಕ್​ ಮಾಡಿರುವ ಕ್ಯಾಬ್​ ಕ್ಯಾನ್ಸಲ್​ ಮಾಡುವ ವಿಚಾರಕ್ಕೆ ಸಂಬಂಧಿಸಿ ಊಬರ್​ ಕಾರು ಚಾಲಕ ಪ್ರಯಾಣಿಕನ ಮೂಗನ್ನು ಒಡೆದಿದ್ದಾನೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಅನೀಕ್​ ರಾಯ್​ ಹೂಡಿಯಿಂದ ಕೆಂಪೇಗೌಡ ಬಸ್​ ನಿಲ್ದಾಣಕ್ಕೆ ಶೇರ್​ ಕ್ಯಾಬ್​ ಬುಕ್​ ಮಾಡಿದ್ದರು. ದಸರಾ ಪ್ರಯುಕ್ತ ತಮ್ಮ ಊರಾದ ಕೋಲ್ಕತ್ತಾಗೆ ಅವರು ತೆರಳುವವರಿದ್ದರು.

ಹರೀಶ್​ ದುರುದ್ದೇಶದಿಂದಲೇ ಕಾರನ್ನು ನಿಧಾನವಾಗಿ ಚಲಾಯಿಸಿದ್ದ ಎದು ದೂರಿರುವ ಅವರು, ಇದರಿಂದ ಸಿಟ್ಟಾದ ಅನೀಕ್​ ಮತ್ತೊಂದು ಕ್ಯಾಬ್​ ಬುಕ್​ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಮೂಗಿನಲ್ಲಿ ರಕ್ತ ಸುರಿಯುತ್ತಿದ್ದರಿಂದ ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಿಲ್ಲ. ಘಟನೆ ಕುರಿತು ರಾಯ್​ ಪೊಲೀಸರಿಗೆ ದೂರು ನೀಡಿದ್ದಾರೆ.

ಅನೀಕ್​ ಕಾಯ್ದಿರಿಸಿದ್ದು ಊಬರ್​ ಶೇರ್​ ಆದರೂ, ಊಬರ್​ ಗೋ ಚಾರ್ಜ್​ ನೀಡುವಂತೆ ಕಾರು ಚಾಲಕ ಹರೀಶ್ ಕೆಎಸ್​​ ಬೇಡಿಕೆ ಇಟ್ಟಿದ್ದ.
ಆದರೆ ಇದಕ್ಕೆ ಅನೀಕ್​ ಒಪ್ಪಿರಲಿಲ್ಲ.

ಇದರಿಂದ ಸಿಟ್ಟಾದ ಹರೀಶ್​ ಅವಾಚ್ಯ ಶಬ್ದಗಳಿಂದ ಬಯ್ಯುತ್ತಲೇ ಬುಕಿಂಗ್​ ಕ್ಯಾನ್ಸಲ್​ ಮಾಡುವಂತೆ ಅನೀಕ್​ಗೆ ಆದೇಶಿಸಿದ್ದ. ಇದನ್ನೂ ಅನೀಕ್​ ತಿರಸ್ಕರಿಸಿದ್ದ. ಇದರಿಂದ ಸಿಟ್ಟಾದ ಹರೀಶ್​, ಅನೀಕ್​ ಮೂಗಿಗೆ ಗುದ್ದಿದ್ದಾನೆ.

ಈ ವೇಳೆ ಅನೀಕ್​ ಮೂಗಿನಿಂದ ರಕ್ತ ಸುರಿಯಲು ಆರಂಭವಾಗಿತ್ತು, ವಾಗ್ವಾದ ತಾರಕಕ್ಕೇರಿತ್ತು. ನಂತರ ಸ್ಥಳೀಯರು ಇಬ್ಬರ ನಡುವೆ ರಾಜೀ ಮಾಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+