ಅಂಕಿತ ಪುಸ್ತಕ ಪ್ರಕಾಶನದಿಂದ ಎರಡು ಪುಸ್ತಕಗಳ ಬಿಡುಗಡೆ
ಬೆಂಗಳೂರು, ಜೂನ್ 13: ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿರುವ ಅಂಕಿತ ಪುಸ್ತಕ ಪ್ರಕಾಶನ ಅವರಿಂದ ಇದೇ ಜೂನ್ 16, ಭಾನುವಾರದಂದು ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಬಿಡುಗಡೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಕೆ.ಮುಕುಂದನ್ ಅವರ 'ಕಿವಿ ಕಾಂಗರೂಗಳ ನಾಡಿನಲ್ಲಿ' ಹಾಗೂ ಸಂತೋಷಕುಮಾರ್ ಮೆಹೆಂದಳೆ ಅವರ 'ಅಘೋರಿಗಳ ಲೋಕದಲ್ಲಿ' ಪುಸ್ತಕಗಳು ಬಿಡುಗಡೆ ಆಗಲಿವೆ. 'ಕಿವಿ ಕಾಂಗರೂಗಳ ನಾಡಿನಲ್ಲಿ' ಪುಸ್ತಕವು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ಕಥನವಾಗಿದ್ದರೆ, 'ಅಘೋರಿಗಳ ಲೋಕದಲ್ಲಿ' ಪುಸ್ತಕವು ನಿಷಿದ್ಧ ಪ್ರಪಂಚದ ಅನುಭವವನ್ನು ತೆರೆದಿಡುತ್ತದೆ.

ಸಾಹಿತಿ ಡಾ. ಎಚ್. ಎಸ್ ವೆಂಕಟೇಶಮೂರ್ತಿ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಲೇಖಕ ಹಾಗೂ ಪತ್ರಕರ್ತ ಎನ್.ಎಸ್.ಶ್ರೀಧರಮೂರ್ತಿ ಹಾಗೂ ಲೇಖಕಿ ಡಾ. ಕೆ.ಎಸ್.ಚೈತ್ರಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವತ ಜತೆ ಪುಸ್ತಕಗಳ ಲೇಖಕರು ಉಪಸ್ಥಿತರಿರುತ್ತಾರೆ.












Click it and Unblock the Notifications