ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಳಸಿ ಬಿಸಾಕುವ ಪಾಠ...' HDK ಸೇರಿಗೆ ಸಿದ್ದು ಸವ್ವಾಸೇರು!

|
Google Oneindia Kannada News

Recommended Video

ಜೋರಾಯ್ತು ಹದ್ದು, ಗಿಣಿಗಳ ಯುದ್ದ. | HD Kumaraswamy | Oneindia Kannada

ಬೆಂಗಳೂರು, ಸೆಪ್ಟೆಂಬರ್ 24: ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಟ್ವಿಟ್ಟರ್ ಕಾಳಗ ನಿಲ್ಲುವಂತೆ ಕಾಣುತ್ತಿಲ್ಲ.

"ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ" ಎನ್ನುವ ಮೂಲಕ ಮತ್ತೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ ಸಿದ್ದರಾಮಯ್ಯ.

ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್

'ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ಕುಕ್ಕಿದವು' ಎಂದು ಜೆಡಿಎಸ್ ವರಿಷ್ಟ ಎಚ್ ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, 'ಹೌದು ನಾನು ನಂಬಿದ ಗಿಣಿಗಳೇ ಹದ್ದಾಗಿ ಕಾಡಿದ್ದು ನಿಜ, ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ' ಎಂದು ಕುಮಾರಸ್ವಾಮಮಿ ಅವರ ಕಾಲೆಳೆದಿದ್ದರು.

ಬಳಸಿ ಬಿಸಾಡುವ ಪಾಠ

ಬಳಸಿ ಬಿಸಾಡುವ ಪಾಠ

"ಸನ್ಮಾನ್ಯ ಎಚ್ ಡಿ ಕುಮಾರಸ್ವಾಮಿ ಅವರೇ, ನಿಮ್ಮನ್ನು ನಾನು ಸಾಕಿದ್ದೇನೆ ಎಂದು ಎಲ್ಲಿ ಹೇಳಿದ್ದೆ? ನಿಮ್ಮನ್ನು ಸಾಕಿದ್ದು ದೇವೇಗೌಡರು ಬಳಸಿಕೊಂಡದ್ದು ಮಾತ್ರ ನಮ್ಮಂತಹವರನ್ನು.

ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ. ಈ ಬಗ್ಗೆ ಬಿ ಎಸ್ ಯಡಿಯೂರಪ್ಪ ಅವರನ್ನು ಕೇಳಿ" -ಸಿದ್ದರಾಮಯ್ಯ

ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ

ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ

"ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ.

ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ"- ಸಿದ್ದರಾಮಯ್ಯ

ಕಾಂಗ್ರೆಸ್ ನ ಅಪ್ಪುಗೆಯಿಂದ ಜೆಡಿಎಸ್ ಕಳೆದುಕೊಂಡಿದ್ದು ಏನೇನು?ಕಾಂಗ್ರೆಸ್ ನ ಅಪ್ಪುಗೆಯಿಂದ ಜೆಡಿಎಸ್ ಕಳೆದುಕೊಂಡಿದ್ದು ಏನೇನು?

ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲು ಸಾಧ್ಯವೇ?

ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲು ಸಾಧ್ಯವೇ?

ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ‌ ಎಚ್ ಡಿ ಕುಮಾರಸ್ವಾಮಿ ಅವರೇ, ನೀವು ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲು ಎಂದಾದರೂ ಸಾಧ್ಯವೇ?- ಸಿದ್ದರಾಮಯ್ಯ

ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ

ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ

ಅಕ್ಟೋಬರ್ 21 ರಂದು ನಡೆಯಲಿರುವ 15 ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಉಭಯ ಪಕ್ಷಗಳ ನಡುವಿನ ಕೆಸರೆರಚಾಟ ಮತ್ತಷ್ಟು ಹೆಚ್ಚಾಗಿದೆ.

ಯಾರು ಗಿಣಿ, ಯಾರು ಹದ್ದು: ಸಿದ್ದರಾಮಯ್ಯ ಟ್ವೀಟ್ ಸೂಚಿಸುತ್ತಿರುವುದು ಏನು?ಯಾರು ಗಿಣಿ, ಯಾರು ಹದ್ದು: ಸಿದ್ದರಾಮಯ್ಯ ಟ್ವೀಟ್ ಸೂಚಿಸುತ್ತಿರುವುದು ಏನು?

English summary
Twitter War Between HD Kumaraswamy And Siddaramaiah continues,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X