ಪಾರ್ವತಮ್ಮ ಕನ್ನಡ ಚಿತ್ರರಂಗ ಶಕ್ತಿ : ಟ್ವಿಟ್ಟರಲ್ಲಿ ಕಂಬನಿ

ಕನ್ನಡ ಚಿತ್ರರಂಗದ ಶಕ್ತಿಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಸಂತಾಪ ಸಂದೇಶಗಳು ಹರಿದು ಬಂದಿವೆ.

ಬೆಂಗಳೂರು, ಮೇ 31: ಕನ್ನಡ ಚಿತ್ರರಂಗದ ಶಕ್ತಿಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಸಂತಾಪ ಸಂದೇಶಗಳು ಹರಿದು ಬಂದಿವೆ. ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಸದಾಶಿವನಗರದ ಪೂರ್ಣಪ್ರಜ್ಞ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಸಂಜೆ ವೇಳೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ಹೇಳಿವೆ.[ದಿ. ಪಾರ್ವತಮ್ಮ ರಾಜ್ ಕುಮಾರ್ ಅವರ ಮರೆಯಲಾರದ ಚಿತ್ರಗಳು]

ಈ ನಡುವೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸಂದೇಶಗಳು ಹರಿದು ಬಂದಿವೆ. ವರನಟ ಡಾ. ರಾಜ್ ಕುಮಾರ್ ಅವರಂತೆ ಪಾರ್ವತಮ್ಮ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಪಾರ್ವತಮ್ಮ ಅವರ ಸಾಧನೆ, ಚಿತ್ರರಂಗದ ಕಷ್ಟಸುಖಕ್ಕಾಗಿ ಮಿಡಿಯುತ್ತಿದ್ದ ರೀತಿಯನ್ನು ಸ್ಮರಿಸಲಾಗುತ್ತಿದೆ.

ಪ್ರತಿಭೆಗಳನು ಪರಿಚಯಿಸಿದ ನಿರ್ಮಾಪಕಿ

ಪ್ರತಿಭೆಗಳನು ಪರಿಚಯಿಸಿದ ನಿರ್ಮಾಪಕಿ

ಪೂರ್ಣಿಮಾ ಎಂಟರ್ ಪ್ರೈಸರ್ ಮೂಲಕ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಲ್ಲದೆ, ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ರಕ್ಷಿತಾ, ರಮ್ಯಾ ಅವರನ್ನು ಚಿತ್ರರಂಗಕ್ಕೆ ಕರೆ ತಂದವರು. ಸರಿ ಸುಮಾರು 80ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿದ್ದರು.

ಚಿತ್ರರಂಗ ಸ್ತಬ್ದ

ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದಿಂದಾಗಿ ಚಿತ್ರರಂಗದ ಚಟುವಟಿಕೆಗಳು ಸ್ತಬ್ದವಾಗಿದ್ದು, ಮೃತರ ಗೌರವಾರ್ಥವಾಗಿ ಶೂಟಿಂಗ್ ಕ್ಯಾನ್ಸಲ್ ಮಾಡಲಾಗಿದೆ

ಅಜನೀಶ್ ಲೋಕನಾಥ್ ಸಂತಾಪ

ಸಂಗೀತಗಾರ ಅಜನೀಶ್ ಲೋಕನಾಥ್ ಟ್ವೀಟ್ ಮಾಡಿ, ಚಿತ್ರರಂಗದ ಅಮ್ಮನನ್ನು ಕಳೆದುಕೊಂಡಿದೆ ಎಂದಿದ್ದಾರೆ.

ಹಲವು ಸುದ್ದಿ ಸಂಸ್ಥೆಯಿಂದ ವರದಿ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರ ನಿಧನದ ಸುದ್ದಿಯನ್ನು ಹಲವಾರು ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ

ಪಾರ್ವತಮ್ಮ ಅವರ ಹುಟ್ಟೂರು

ಪಾರ್ವತಮ್ಮ ಅವರ ಹುಟ್ಟೂರು, ಹುಟ್ಟಿದ ಮನೆ, ಅಪರೂಪದ ಚಿತ್ರಗಳನ್ನು ಹಂಚಿಕೊಂಡಿರುವ ಚಿತ್ರಲೋಕ.ಕಾಂ

ತೆಲುಗು ಪತ್ರಿಕೆಯಲಿ ಸುದ್ದಿ

ಸಾಕ್ಷಿ ತೆಲುಗು ಪತ್ರಿಕೆಯಲ್ಲಿ ಕನ್ನಡದ ಹಿರಿಯ ನಿರ್ಮಾಪಕಿ ನಿಧನದ ಸುದ್ದಿ

ಪಾರ್ವತಮ್ಮ ನಿಧನ

ತಮಿಳು ವೆಬ್ ಸೈಟ್ ಗಳಲ್ಲೂ ಪಾರ್ವತಮ್ಮ ಅವರ ನಿಧನದ ವಾರ್ತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+