ಸೋಮಣ್ಣ ಉಮೇದುವಾರಿಕೆ ವಜಾಗೊಳಿಸಿ: ಕಾಂಗ್ರೆಸ್
ಬೆಂಗಳೂರು: ಬಿಜೆಪಿ & ಕಾಂಗ್ರೆಸ್ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಬಿಜೆಪಿ ಪೋಸ್ಟ್ ಮಾಡುವ ಟ್ವೀಟ್‌ಗೆ ಕಾಂಗ್ರೆಸ್ ತಿರುಗೇಟು ನೀಡಿದರೆ, ಕಾಂಗ್ರೆಸ್ ಪೋಸ್ಟ್ ಮಾಡುವ ಟ್ವೀಟ್‌ಗೆ ಬಿಜೆಪಿ ತಿರುಗೇಟು ನೀಡುತ್ತಿದೆ. ಈಗ ಸೋಮಣ್ಣ ಉಮೇದುವಾರಿಕೆ ವಜಾಗೊಳಿಸುವ ವಿಚಾರದಲ್ಲೂ ಎರಡೂ ಪಕ್ಷಗಳ ನಡುವೆ ಫೈಟ್ ಶುರುವಾಗಿದೆ.
ಚುನಾವಣೆಯ ನಂತರ ಶಾಸಕರ ಆಪರೇಷನ್, ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಆಪರೇಷನ್.
— Karnataka Congress (@INCKarnataka) April 30, 2023
ಇದು ಬಿಜೆಪಿಯ ಹೊಲಸು ರಾಜಕಾರಣ.
ಇದು ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಡೆದುಕೊಳ್ಳುವ ರೀತಿ.@narendramodi ಅವರೇ, ಇಂತಹ ಲಜ್ಜೆಗೆಟ್ಟ ರಾಜಕಾರಣ ಮಾಡಲು ಹಿಂಜರಿಕೆಯೂ ಇಲ್ಲದಿರುವುದೇಕೆ?@ceo_karnataka ಸೋಮಣ್ಣನವರ ಉಮೇದುವಾರಿಕೆಯನ್ನು ವಜಾಗೊಳಿಸಬೇಕು. pic.twitter.com/aCbPUxUQ7n
ನಾಮಪತ್ರ ಹಿಂಪಡೆಯಲು ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಆಮಿಷ ಒಡ್ಡಿರುವ ಪ್ರಕರಣ ಸಂಬಂಧ ಸೋಷಿಯಲ್ ಮೀಡಿಯಾ ವಾರ್ ಶುರುವಾಗಿದೆ. ಈ ಸಂಬಂಧ ಸಚಿವ ಸೋಮಣ್ಣ ಮಾತನಾಡಿದ್ರು ಎಂದು ಆರೋಪ ಮಾಡಲಾಗಿರುವ ಆಡಿಯೋ ವೈರಲ್ ಆಗಿತ್ತು. ಘಟನೆ ಸಂಬಂಧ ವಿ. ಸೋಮಣ್ಣ ವಿರುದ್ಧ ಕಾಂಗ್ರೆಸ್ ಟ್ವೀಟ್ ವಾರ್ ಶುರುಮಾಡಿದೆ. ಕರ್ನಾಟಕ ಕಾಂಗ್ರೆಸ್ ಘಟಕದ ಟ್ವಿಟ್ಟರ್ ಅಕೌಂಟ್‌ನಲ್ಲಿ ಸೋಮಣ್ಣ ವಿರದ್ಧದ ಆರೋಪ ಪ್ರಸ್ತಾಪಿಸಿ ಟ್ವೀಟ್ ಮಾಡಲಾಗಿದೆ. ಈ ಮೂಲಕ ಸೋಮಣ್ಣ ಉಮೇದುವಾರಿಕೆ ವಜಾಗೊಳಿಸಲು ಆಗ್ರಹಿಸಲಾಗಿದೆ.

ಏನಿದೆ ಕಾಂಗ್ರೆಸ್ ಟ್ವೀಟ್‌ನಲ್ಲಿ
'ಚುನಾವಣೆಯ ನಂತರ ಶಾಸಕರ ಆಪರೇಷನ್, ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಆಪರೇಷನ್. ಇದು ಬಿಜೆಪಿಯ ಹೊಲಸು ರಾಜಕಾರಣ. ಇದು ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಡೆದುಕೊಳ್ಳುವ ರೀತಿ. @narendramodi ಅವರೇ, ಇಂತಹ ಲಜ್ಜೆಗೆಟ್ಟ ರಾಜಕಾರಣ ಮಾಡಲು ಹಿಂಜರಿಕೆಯೂ ಇಲ್ಲದಿರುವುದೇಕೆ? @ceo_karnataka ಸೋಮಣ್ಣನವರ ಉಮೇದುವಾರಿಕೆಯನ್ನು ವಜಾಗೊಳಿಸಬೇಕು.' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಮತ್ತೊಂದು ಕಡೆ ಕಾಂಗ್ರೆಸ್ ಮಾಡಿರುವ ಈ ಟ್ವೀಟ್ ಬಗ್ಗೆ ಪರ ವಿರೋಧದ ಚರ್ಚೆ ಕೂಡ ಜೋರಾಗಿದೆ.
ಸಂಕಷ್ಟದ ಸುಳಿಯಲ್ಲಿ ಸೋಮಣ್ಣ?
ಸೋಮಣ್ಣ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಬಳಿಕ ವಿರೋಧ ಪಕ್ಷಗಳು ಇದೇ ವಿಚಾರ ಹಿಡಿದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಬಗ್ಗೆ ದೂರು ಕೂಡ ನೀಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಸೋಮಣ್ಣ ಸಂಕಷ್ಟದಲ್ಲಿ ಸಿಲುಕಿದ್ದಾರಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಬಾರಿ ಎರಡೆರಡು ಕ್ಷೇತ್ರಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸೋಮಣ್ಣ, ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಹಾಗಾದರೆ ಸೋಮಣ್ಣ ಅವರಿಗೆ ಎದುರಾಗಿರುವ ಸಂಕಷ್ಟವೇನು? ಮುಂದೆ ತಿಳಿಯೋಣ.
ಸಮಸ್ಯೆ ತರುತ್ತಾ ಆಡಿಯೋ?
ಅಂದಹಾಗೆ ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ 'ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೊಡ್ತೀವಿ. ಮೊದಲು ನಾಮಪತ್ರ ವಾಪಸ್ ತಗೊ' ಎಂದು ಸೋಮಣ್ಣ ಕರೆ ಮಾಡಿ ಹೇಳಿದ್ದಾರೆ ಎನ್ನಲಾದ ಆಡಿಯೋ ತುಣುಕು ವೈರಲ್ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು, ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿತ್ತು. ಇದೇ ವಿಚಾರದಲ್ಲಿ ಸಚಿವ ಸೋಮಣ್ಣ ಅವರಿಗೆ ಸಂಕಷ್ಟ ಎದುರಾಗಬಹುದಾ? ಎಂಬ ಡೌಟ್ ಕೂಡ ಶುರುವಾಗಿದೆ.
ವರುಣಾದಲ್ಲೂ ಸೋಮಣ್ಣಗೆ ಟಫ್ ಫೈಟ್
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೊತೆಗೆ ವಿ.ಸೋಮಣ್ಣ ಸಿದ್ದರಾಮಯ್ಯ ಎದುರು ವರುಣಾ ಕ್ಷೇತ್ರದಲ್ಲಿ ಕೂಡ ಸ್ಪರ್ಧಿಸಿದ್ದಾರೆ. ಹೀಗಾಗಿ ವರುಣಾದಲ್ಲೂ ಸೋಮಣ್ಣಗೆ ಟಫ್ ಫೈಟ್ ಎದುರಾಗಿದೆ. ಮತ್ತೊಂದೆಡೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ರಾಜಕೀಯ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಸೋಲಿಸಲು ಭರ್ಜರಿ ಪ್ರಚಾರ ಕೂಡ ನಡೆಯುತ್ತಿದೆ. ವಿ. ಸೋಮಣ್ಣ ಪರ ದಿಲ್ಲಿಯಿಂದಲೇ ಬಂದು ಬಿಜೆಪಿ ವರಿಷ್ಠರು ಪ್ರಚಾರ ನಡೆಸುತ್ತಿದ್ದಾರೆ.
ಒಟ್ನಲ್ಲಿ ಮತದಾನಕ್ಕೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಅಸ್ತ್ರ ಮತ್ತು ಪ್ರತ್ಯಸ್ತ್ರ ಜೋರಾಗಿದೆ. ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಕ್ಕೆ ಕರ್ನಾಟಕದ ಮತದಾರ ಪ್ರಭು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ. ಸೋಮಣ್ಣ ಅವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.












Click it and Unblock the Notifications