ರೇಪ್ ತಪ್ಪಿಸಲು ಮೊಬೈಲ್ ನಿಷೇಧ : ಟ್ವಿಟ್ಟರಲ್ಲಿ ನಗೆಪಾಟಲು
ಬೆಂಗಳೂರು, ಜು. 12 : ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ತಪ್ಪಿಸಲು ಶಾಲಾಕಾಲೇಜುಗಳಲ್ಲಿ ಮೊಬೈಲನ್ನು ನಿಷೇಧಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿರುವುದು ಟ್ವಿಟ್ಟರಿನಲ್ಲಿ ನಗೆಪಾಟಲಿಗೀಡಾಗಿದೆ.
ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶಕುಂತಲಾ ಶೆಟ್ಟಿ ಅವರು 271 ಪುಟಗಳ ಒಂದು ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಮಹಿಳೆಯರ ರಕ್ಷಣೆಗೆ ಶಿಫಾರಸುಗಳನ್ನು ಮಾಡಿದ್ದಾರೆ. ಇದೇ ವಿಷಯ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಿಸ್ಡ್ ಕಾಲ್ ಅಟೆಂಡ್ ಮಾಡುತ್ತಿರುವ ಯುವತಿಯರು ತೊಂದರೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಮಕ್ಕಳು ಪ್ರಬುದ್ಧರಾಗುವವರೆಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ಶಕುಂತಲಾ ಶೆಟ್ಟಿ ಅವರು ನೀಡಿರುವ ವಿವರಣೆ.
ಶಾಲೆಗಳಲ್ಲಿ ಮೊಬೈಲ್ ನಿಷೇಧಿಸಿದ್ದರೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ. ಆದರೆ, ಮೊಬೈಲನ್ನು ಕಾಲೇಜುಗಳಲ್ಲಿ ನಿಷೇಧಿಸುವುದರಿಂದ ಅತ್ಯಾಚಾರ ತಪ್ಪಿಸಲು ಒಂದು ದಾರಿಯಾಗುತ್ತದಾ ಎಂಬುದು ಚರ್ಚೆಯ ವಿಷಯವಾಗಿದೆ. [ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ನಿಷೇಧ?]

ಟ್ವಿಟ್ಟಿಗರು ಟ್ವಿಟ್ಟರಲ್ಲಿ ಏನು ಕುಟ್ಟುತ್ತಿದ್ದಾರೆ
ಈ ವಿಷಯದ ಬಗ್ಗೆ ಟ್ವಿಟ್ಟಿಗರು ಟ್ವಿಟ್ಟರಲ್ಲಿ ಏನು ಕುಟ್ಟುತ್ತಿದ್ದಾರೆ ನೋಡೋಣ ಬನ್ನಿ. ವ್ಯಂಗ್ಯ ಮಿಶ್ರಿತ ಟ್ವೀಟ್ ಬಾಣಗಳನ್ನು ಓದಲು ಮುಂದೆ ಸಾಗಿರಿ.
|
ಇದನ್ನು ಕೇಳಿದರೆ ಕತ್ತೆಗೂ ಜ್ವರ ಬರುತ್ತದೆ!
ಮೊಬೈಲ್ ಬಳಕೆಗೂ ಮೊದಲು ಅತ್ಯಾಚಾರ ನಡೆಯುತ್ತಿರಲಿಲ್ಲ ಎಂದು ಕರ್ನಾಟಕದ ಸದನ ಸಮಿತಿ ಸಾಬೀತು ಮಾಡಬೇಕಾಗುತ್ತದೆ.
|
ಇಂಥ ಇನ್ನೊಂದಿಷ್ಟು ವರದಿಗಳು ಸಲ್ಲಿಕೆಯಾಗಲಿ!
ನಮ್ಮದು ಮುಂದುವರಿದ ದೇಶ ಎಂದು ಹೇಳಿಕೊಳ್ಳಲು ಇಂಥ ಇನ್ನೊಂದಿಷ್ಟು ವರದಿಗಳು ಸಲ್ಲಿಕೆಯಾಗಲಿ.
|
ಆಹಾ ಎಂಥಾ ವಿಚಾರಧಾರೆ
ಕಾಂಡೋಮ್ ಇದ್ರೆ ಲೈಂಗಿಕತೆ, ಮೊಬೈಲ್ ಇದ್ರೆ ಅತ್ಯಾಚಾರ!
|
ರೇಪಿಸ್ಟ್ ರೇಪ್ ಮಾಡುತ್ತಾರೆ, ಮೊಬೈಲ್ ಅಲ್ಲ
ಕರ್ನಾಟಕ ಸರಕಾರ ಖಾಪ್ ಗಳಂತೆ ವರ್ತನೆ ಮಾಡುತ್ತಿದೆ. ಅತ್ಯಾಚಾರಿಗಳು ಅತ್ಯಾರಾ ಮಾಡುತ್ತಾರೆ, ಮೊಬೈಲ್ ಗಳು ಅತ್ಯಾಚಾರ ಮಾಡುವುದಿಲ್ಲ.
|
ಅತ್ಯಾಚಾರಕ್ಕೆ ಪೆನ್, ಪೆನ್ಸಿಲ್ ಕೂಡ ಕಾರಣ!
ಅತ್ಯಾಚಾರಗಳಿಗೆ ಮೊಬೈಲ್ ಅಷ್ಟೇ ಏಕೆ, ಪೆನ್, ಪೆನ್ಸಿಲ್, ಟವಿಯನ್ನು ಕೂಡ ದೂಷಿಸಿ. ಆದರೆ, ನಿರ್ಭಯಾಳನ್ನು ಅತ್ಯಾಚಾರ ಮಾಡಿದ ಅಪ್ರಾಪ್ತನನ್ನು ಮಾತ್ರ ಶಿಕ್ಷಿಸಬೇಡಿ.
|
ಶಕುಂತಲಾ ಶೆಟ್ಟಿ ನಿಮ್ಮ ಬಳಿಯೂ ಮೊಬೈಲ್ ಇದೆಯಲ್ಲ
ಶಕುಂತಲಾ ಶೆಟ್ಟಿ ಅವರೆ ನಿಮ್ಮ ಬಳಿಯೂ ಮೊಬೈಲ್ ಇದೆಯಲ್ಲ. ಥತ್ ನಾಚಿಕೆಗೇಡು.












Click it and Unblock the Notifications