ಟ್ವಿಟ್ ಮಳೆಯಲ್ಲಿ ಮೋದಿ 'ಭಾರತ ಗೆಲ್ಲಿಸಿ' ಸಮಾವೇಶ

ಬೆಂಗಳೂರು, ನ.17: ಕರ್ನಾಟಕ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿರುವ ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲ ತಾಣಗಳಲ್ಲೂ ಮೋದಿ ಮೋಡಿ ಮಾಡುತ್ತಿದ್ದಾರೆ. ಭಾನುವಾರದ ರಜಾ ದಿನದ ವಿರಾಮದ ನಡುವೆಯೂ ಟ್ವಿಟ್ಟರ್, ಫೇಸ್ ಬುಕ್, ಯೂಟ್ಯೂಬ್ ಮುಂತಾದ ತಾಣಗಳಲ್ಲಿ ಮೋದಿ ಜ್ವರ ಹಬ್ಬುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ಮೋದಿ ಅವರು ಕ್ಷಣ ಕ್ಷಣ ಘಟನೆಗಳ ಬಗ್ಗೆ ತಮ್ಮ ಟ್ವಿಟ್ಟರ್ ಮೈಕ್ರೋ ಬ್ಲಾಗಿಂಗ್ ಖಾತೆ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಾ ಬಂದಿದ್ದಾರೆ. ಇದು ಅಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಅತ್ಯಂತ ತ್ವರಿತವಾಗಿ ತಲುಪುವ ಪ್ರಮುಖ ಸಾಧನವೆನಿಸಿದೆ. ಇನ್ನು ಮೋದಿ ಅವರ ಪ್ರತಿ ಭಾಷಣದ ಲೈವ್ ವಿಡಿಯೋ ಪ್ರಸಾರ ಜನಪ್ರಿಯತೆ ಗಳಿಸುತ್ತಿದೆ.

ಬೆಂಗಳೂರಿನ 'ಭಾರತ ಗೆಲ್ಲಿಸಿ' ಸಾಮಾವೇಶದಲ್ಲಿ ಮೋದಿ ಮಾಡುವ ಭಾಷಣದ ನೇರ ವಿಡಿಯೋ ಪ್ರಸಾರ ಕೂಡಾ ಇಲ್ಲಿ ವೀಕ್ಷಿಸಬಹುದು.

'ದೇಶಕ್ಕೆ ನರೇಂದ್ರ ಮೋದಿ ಅವರ ನಾಯಕತ್ವ ಅನಿವಾರ್ಯವಾಗಿದೆ. ಸದೃಢ ಭಾರತ ನಿರ್ಮಾಣಕ್ಕೆ ಮೋದಿ ಅವರ ಅವಶ್ಯಕತೆ ಎದ್ದು ಕಾಣುತ್ತಿದೆ. ಈ ಹಿನ್ನಲೆಯಲ್ಲಿ ದೇಶದ ಎಲ್ಲೆಡೆ ಮೋದಿ ಅವರ ಸಮಾವೇಶಕ್ಕೆ ಅಭೂತಪೂರ್ವ ಬೆಂಬಲ ನೀಡಬೇಕಾಗಿದೆ' ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಂದೇಶಗಳು ಹರಿದಾಡಿವೆ. ಮೋದಿ ಅವರ ಟ್ವೀಟ್ ಸೇರಿದಂತೆ ಅಸಮಗ್ರ ಟ್ವೀಟ್ ರಾಶಿ ನಿಮ್ಮ ಮುಂದಿದೆ....

ಸಚಿನ್ ಭಾಷಣಕ್ಕೆ ಪ್ರಶಂಸೆ

ಮೋದಿ ಅವರ ಅಧಿಕೃತ ಖಾತೆ ಕೆಲ ಟ್ವೀಟ್ ನೋಡಿ ನಂತರ ಅಭಿಮಾನಿಗಳ ಟ್ವೀಟ್ ಓದಿರಿ..

'ಮೈದಾನದಲ್ಲಿ ನಿಮ್ಮ ಆಟ ಹಲವು ನೆನಪುಗಳನ್ನು ಕೆದಕುತ್ತದೆ. ನಿಮ್ಮ ಭಾಷಣ ಅಭೂತಪೂರ್ವವಾಗಿತ್ತು. ಭಾರತದ ಹೆಮ್ಮೆಯ ಪುತ್ರ ನೀವು' ಎಂದು ಸಚಿನ್ ಅವರನ್ನು ಮೋದಿ ಹೊಗಳಿದ್ದಾರೆ.

ಭಾರತ ರತ್ನಗಳು

ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹಾಗೂ ಕರ್ನಾಟಕದ ವಿಜ್ಞಾನಿ ಸಿಎನ್ ಆರ್ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿ ಇಬ್ಬರನ್ನು ಅಭಿನಂದಿಸಿದ ಮೋದಿ

ಕ್ಷಣ ಕ್ಷಣ ಮಾಹಿತಿ

ಬಿಜೆಪಿ ಪ್ರಧಾನಿ ಅಭ್ಯರ್ಥಿಮೋದಿ ಅವರ ಬೆಂಗಳೂರು ಭೇಟಿ, ಭಾರತ ಗೆಲ್ಲಿಸಿ ಸಮಾವೇಶದ ಬಗ್ಗೆ ಕ್ಷಣ ಕ್ಷಣದ ಮಾಹಿತಿ

ಮೋದಿ ಟ್ರೆಂಡಿಂಗ್ ಶುರು

ಟ್ವಿಟ್ಟರ್ ನಲ್ಲಿ ಮೋದಿ ಕುರಿತ(#namoinbangalore ) ಟ್ವೀಟ್ ಗಳು ಟಾಪ್ ಟ್ರೆಂಡಿಂಗ್ ನಲ್ಲಿದೆ

ಪೊಲೀಸರಿಗೆ ಪ್ರಶಂಸೆ

ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಿಳಿಗೊಳಿಸಿರುವ ಬೆಂಗಳೂರು ಪೊಲೀಸರಿಗೆ ಟ್ವೀಟ್ ಪ್ರಶಂಸೆ

ಮಳೆ ಬಂದರೆ ಏನು ಗತಿ

ಸಮಾವೇಶಕ್ಕೆ ಬಂದಿರುವ ಲಕ್ಷಾಂತರ ಜನರು ಮಳೆ ಬಂದರೆ ಕೊಡೆ ಹಿಡಿಯುವಂತಿಲ್ಲ. ಪೊಲೀಸರು ಕೊಡೆ ನಿಷೇಧಿಸಿರುವುದರಿಂದ ಮಳೆ ಬಂದರೆ ಒದ್ದೆಯಾಗಲೇಬೇಕು

ರೈಲ್ವೆ ರಾಜಕೀಯ

ರೈಲ್ವೆ ಇಲಾಖೆಯಿಂದಲೂ ಬೆಂಗಳೂರಿಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ

ಐಟಿ ಕ್ರಾಂತಿ ಸ್ಥಗಿತ

ಯುಪಿಎ ಸರ್ಕಾರ ಬಂದ ಮೇಲೆ ಐಟಿ ರಫ್ತು ಕುಸಿಯುತ್ತಿದೆ. ಯುಪಿಎ ಪಿಂಕ್ ಕ್ರಾಂತಿ(ಪ್ರಾಣಿಗಳ ಮಾಂಸ ರಫ್ತು) ಯಲ್ಲಿ ತೊಡಗಿದೆ: ಮೋದಿ

ಬಜೆಟ್ ವ್ಯತ್ಯಾಸ ನೋಡಿ

ದೇಶದ ಯುವಕರ ಕೌಶಲ್ಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಗುಜರಾತ್ ಹಾಗೂ ಯುಪಿಎ ಮೀಸಲಿಟ್ಟ ಮೊತ್ತ ವ್ಯತ್ಯಾಸ ನೋಡಿ

ಅರವಿಂದ ಲಿಂಬಾವಳಿ ಟ್ವೀಟ್

ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಅವರು ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿದ್ದು, ಮೋದಿ ಸಮಾವೇಶದ ಬಗ್ಗೆ ನಿರಂತರವಾಗಿ ಅಪ್ದೇಡ್ ನೀಡುತ್ತಿದ್ದಾರೆ.

ಲತಾ ಜೀ ಅವರಿಗೆ ಅಪಮಾನ

ಯುಪಿಎ ನಾಯಕರು ಮೋದಿ ಬೆಂಬಲಿಸಿದ್ದಕ್ಕೆ ಲತಾ ಮಂಗೇಷ್ಕರ್ ಅವರ ಭಾರತರತ್ನ ಕಿತ್ತುಕೊಳ್ಳಿ ಎಂದು ನೀಚ ಹೇಳಿಕೆ ನೀಡಿದರು

ಮಾಧ್ಯಮಗಳ ಮೇಲೆ ನಿಯಂತ್ರಣ

ಚುನಾವಣಾ ಸಮೀಕ್ಷೆ ನಿಷೇಧ ಸೇರಿದಂತೆ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಲು ಹೊರಟ ಯುಪಿಎ

ಶಾದಿ ಭಾಗ್ಯ ಬಗ್ಗೆ

ನರೇಂದ್ರ ಮೋದಿ ಅವರೇ ದಯವಿಟ್ಟು ಕರ್ನಾಟಕದ ಶಾದಿ ಭಾಗ್ಯ ಯೋಜನೆ ಬಗ್ಗೆ ಮಾತನಾಡಿ

ಜನರನ್ನು ದೂರವಿಟ್ಟ ಕಾಂಗ್ರೆಸ್

ಅಧಿಕಾರ ಒಂದೇ ಕುಟುಂಬದ ಕೈಗೊಂಬೆಯಾಗಿಸಿ ಜನರನ್ನು ದೂರವಿಟ್ಟ ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲ

ಎಷ್ಟು ಜನ ಬಂದಿದ್ದರು?

ಭಾರತ ಗೆಲ್ಲಿಸಿ ಸಮಾವೇಶಕ್ಕೆ ಆಗಮಿಸಿ ಮೋದಿ ಬೆಂಬಲಿಸಿದ್ದು 5.5 ಲಕ್ಷ ಜನ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.

ಪ್ರಿಯಾಂಕ್ ಖರ್ಗೆ ಟ್ವೀಟ್

ಕರ್ನಾಟಕ ಬಿಜೆಪಿ ವಿಪಕ್ಷವಾಗಿ ಸೋತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ

ಮೋದಿ ಸಮಾವೇಶ ಬಗ್ಗೆ ರಮ್ಯಾ

ಸಂಸದೆ ರಮ್ಯಾ ಟ್ವೀಟ್ ಮಾಡಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಆರಾಮಾವಾಗಿ ಚಲಿಸಬಹುದು ಸಮಾವೇಶಕ್ಕೆ ಜನ ಬಂದಿದ್ರಾ? ಅಥವಾ ಪೊಲೀಸರು ಸಕತ್ ಆಗಿ ಕಾರ್ಯ ನಿರ್ವಹಿಸಿದ್ದಾರಾ? ಎಂದಿದ್ದಾರೆ. ಕೊನೆಗೆ ಸಮಾವೇಶದ ಬಿಗಿ ಭದ್ರತೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹೊಗಳಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+