Namma Metro; ಗೊಟ್ಟಿಗೆರೆ-ನಾಗವಾರ ಮಾರ್ಗ ಸುರಂಗ ಸವಾಲು, ನಿಲ್ದಾಣಗಳು

ಬೆಂಗಳೂರು, ನವೆಂಬರ್ 09: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಾಗುತ್ತಿದೆ. ಮೆಟ್ರೋದಲ್ಲಿ ಪ್ರತಿದಿನ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2024ರಲ್ಲಿ ಕಾಮಗಾರಿ ಅಂತ್ಯಗೊಳ್ಳುವ ಮಾರ್ಗಗಳು ಭವಿಷ್ಯದಲ್ಲಿ ನಗರದ ಸಂಚಾರ ದಟ್ಟಣೆಗೆ ಪರಿಹಾರ ಎಂದು ನಿರೀಕ್ಷಿಸಲಾಗಿದೆ.

ಮುಂದಿನ ವರ್ಷ ನಗರದ ಅತಿ ಉದ್ದದ ನಮ್ಮ ಮೆಟ್ರೋ ಯೋಜನೆಯ ಸುರಂಗ ಮಾರ್ಗದ ಕಾಮಗಾರಿ ಅಂತ್ಯಗೊಳ್ಳುವ ನಿರೀಕ್ಷೆ ಇದೆ. ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಈ ಸುರಂಗ ಬರಲಿದೆ. ಈ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸಲು ಸುರಂಗ ಮಾರ್ಗವೇ ಸವಾಲಾಗಿದೆ.

Tunnel Work Challenge For Namma Metro Pink Line Stations List

ಮಾರ್ಗ, ಸುರಂಗದ ವಿವರಗಳು; ನಮ್ಮ ಮೆಟ್ರೋ ಯೋಜನೆಯ ಹಂತ-2 75 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ. 61 ನಿಲ್ದಾಣಗಳು ಇದರಲ್ಲಿ ಬರುತ್ತವೆ. ಹಂತ-1 ಯೋಜನೆಯ ನೇರಳೆ ಮತ್ತು ಹಸಿರು ಮಾರ್ಗದ ನಾಲ್ಕು ದಿಕ್ಕುಗಳಲ್ಲಿ 34.6 ಕಿ. ಮೀ. ವಿಸ್ತರಿತ ಮಾರ್ಗ ಮತ್ತು ಎರಡು ಹೊಸ ಮಾರ್ಗವನ್ನು ಒಳಗೊಂಡಿದೆ.

ಹೊಸ ಮಾರ್ಗಗಳಲ್ಲಿ ಗೊಟ್ಟಿಗೆರೆ-ನಾಗವಾರ 21.25 ಕಿ. ಮೀ. ಮತ್ತು ಆರ್. ವಿ. ರಸ್ತೆ-ಬೊಮ್ಮಸಂದ್ರ 19.15 ಕಿ. ಮೀ. ಮಾರ್ಗ ಬರುತ್ತದೆ. ಈ ಹೊಸ ಮಾರ್ಗದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ 13.9 ಕಿ. ಮೀ. (ಡೈರಿ ಸರ್ಕಲ್-ನಾಗವಾರ) ನಡುವೆ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಒಟ್ಟು ನಾಲ್ಕು ಪ್ಯಾಕೇಜ್‌ಗಳಲ್ಲಿ ಈ ಕಾಮಗಾರಿ ನಡೆಯುತ್ತಿದೆ.

ಡೈರಿ ವೃತ್ತದಿಂದ ನಾಗವಾರ ಮಿಲಿಟರಿ ಶಾಲೆ ಮೊದಲ ಹಂತದ ಪ್ಯಾಕೇಜ್‌ ಆಗಿದೆ. ಮಿಲಿಟರಿ ಶಾಲೆಯಿಂದ ಶಿವಾಜಿನಗರ, ಶಿವಾಜಿನಗರದಿಂದ ಟ್ಯಾನರಿ ರಸ್ತೆ ಹೀಗೆ 4 ಪ್ಯಾಕೇಜ್ ಅಡಿಯಲ್ಲಿ ಸುರಂಗ ಕಾಮಗಾರಿ ನಡೆಯುತ್ತಿದೆ. ರುದ್ರ, ವಾಮಿಕಾ, ವರದಾ, ಅವನಿ ಹೀಗೆ ಟಿಬಿಎಂಯಂತ್ರಗಳು ಸುರಂಗ ಮಾರ್ಗ ನಿರ್ಮಾಣದಲ್ಲಿ ತೊಡಗಿವೆ.

ಎಂ. ಜಿ. ರಸ್ತೆ, ಶಿವಾಜಿನಗರ, ಪಾಟರಿ ಟೌನ್, ಟ್ಯಾನರಿ ರಸ್ತೆ ಹೀಗೆ ಅತ್ಯಂತ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ನೆಲದಡಿಯಲ್ಲಿಯೇ ಮೆಟ್ರೋ ಹಾದು ಹೋಗಲಿದೆ. ಜಯದೇವ ಜಂಕ್ಷನ್, ಎಂ. ಜಿ. ರಸ್ತೆ ಮತ್ತು ನಾಗವಾರ ಎಂಬ ಮೂರು ಇಂಟರ್ ಚೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿವೆ.

ಗೊಟ್ಟಿಗೆರೆ-ನಾಗವಾರ ಮಾರ್ಗ ದಕ್ಷಿಣ ಬೆಂಗಳೂರನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಜೊತೆಗೆ ಪ್ರಮುಖ ವಾಣಿಜ್ಯ ಕೇಂದ್ರಗಳಿಗೆ ತೆರಳಲು ಸಹಾಯಕವಾಗಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ ಈ ಮಾರ್ಗದಲ್ಲಿ ಎತ್ತರಿಸಿದ ಮಾರ್ಗದ ಕಾಮಗಾರಿ ಬೇಗ ಮುಗಿಯಲಿದೆ. ಆದರೆ 2024ರ ಅಂತ್ಯಕ್ಕೆ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ.

ಈ ಮೆಟ್ರೋ ಮಾರ್ಗವು ನಮ್ಮ ಮೆಟ್ರೋ 'ಪಿಂಕ್' ಮಾರ್ಗದಡಿ ಬರುತ್ತದೆ. ನಾಗವಾರದಲ್ಲಿ ಆರಂಭಗೊಂಡು ಹಸಿರು ಮಾರ್ಗದೊಂದಿಗೆ ಇಂಟರ್‌ಚೇಂಜ್ ನಿಲ್ದಾಣವನ್ನು ಹೊಂದಿದೆ. ಹಸಿರು ವಿಸ್ತರಿತ ನಮ್ಮ ಮೆಟ್ರೋ ಮಾರ್ಗ ವಾಹನ ದಟ್ಟಣೆಯ ಬೆಂಗಳೂರು-ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ) ತನಕ ಸಾಗಲಿದೆ.

ಪಿಂಕ್ ಮಾರ್ಗದಲ್ಲಿ ನಾಗವಾರ, ಅರೇಬಿಕ್ ಕಾಲೇಜು, ವೆಂಕಟೇಶಪುರ, ಟ್ಯಾನರಿ ರಸ್ತೆ, ಪಾಟರಿ ಟೌನ್, ಕಂಟೋನ್ಮೆಂಟ್, ಶಿವಾಜಿನಗರ, ಎಂ. ಜಿ. ರಸ್ತೆ, ವೆಲ್ಲಾರ, ಲ್ಯಾಂಗ್‌ಫೋರ್ಡ್ ಟೌನ್, ಮೈಕೊ ಇಂಡಸ್ಟ್ರೀಸ್, ಡೈರಿ ಸರ್ಕಲ್, ಸ್ವಾಗತ್ ರೋಡ್ ಕ್ರಾಸ್, ಜಯದೇವ ಆಸ್ಪತ್ರೆ ಜಂಕ್ಷನ್, ಜೆ. ಪಿ. ನಗರ 4ನೇ ಹಂತ, ಐಐಎಂ (ಬಿ), ಹುಳಿಮಾವು ನಿಲ್ದಾಣಗಳಿವೆ.

ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು 2025ರ ಮಾರ್ಚ್‌ ವೇಳೆಗೆ ಪಿಂಕ್‌ಲೈನ್‌ನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಸಂಪೂರ್ಣ ಪಿಂಕ್ ಮಾರ್ಗ 2026ರ ಸುಮಾರಿಗೆ ಉದ್ಘಾಟನೆಗೊಳ್ಳಲಿದೆ. ಸುರಂಗ ಮಾರ್ಗದ ನಿರ್ಮಾಣವೇ ಈ ಮಾರ್ಗದ ಕಾಮಗಾರಿಗೆ ದೊಡ್ಡ ಸವಾಲು ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+