Tumakuru Metro: ಬೆಂಗಳೂರಿನ ಈ ಪ್ರಮುಖ ಮಾರ್ಗದಿಂದ ತುಮಕೂರಿನವರೆಗೆ ನಮ್ಮ ಮೆಟ್ರೋ ವಿಸ್ತರಣೆಗೆ ಟೆಂಡರ್-ಮಾಹಿತಿ ವಿವರ
ಬೆಂಗಳೂರು, ಮಾರ್ಚ್, 05: ಬೆಂಗಳೂರು ನಗರದಲ್ಲಿ ಸಂಚರಿಸುವ ಮೆಟ್ರೋ ಪ್ರಯಾಣಿಕರ ಮನ್ನಣೆ ಪಡೆಯುತ್ತಲೇ ಇದೆ. ಅಲ್ಲದೆ ಪ್ರಯಾಣಿಕರ ಬೇಡಿಕೆಯ ಮೇರೆಗೆ ಹಾಗೂ ಅವರ ಅನೂಕೂಲತೆಗೆ ತಕ್ಕಂತೆ ಬಿಎಂಆರ್‌ಸಿಎಲ್ ಮೆಟ್ರೋವನ್ನು ವಿಸ್ತರಣೆ ಮಾಡುತ್ತಿದೆ. ಹಾಗೆಯೇ ಇದೀಗ ನಗರದ ಮಾದವರದಿಂದ ತುಮಕೂರಿನವರೆಗೂ ಮೆಟ್ರೊ ವಿಸ್ತರಣೆ ಕುರಿತು ಅಧ್ಯಯನ ವರದಿಗೆ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ.
ಉತ್ತರ ಬೆಂಗಳೂರಿನ ಮಾದವರದಿಂದ ತುಮಕೂರಿನವರೆಗೆ ಮುಂದಿನ ಆರು ತಿಂಗಳೊಳಗೆ 52.41 ಕಿಲೋ ಮೀಟರ್ ಉದ್ದದ ಮೆಟ್ರೊ ಮಾರ್ಗದ ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ಮಾಡಲು ಬಿಡ್‌ಗಳನ್ನು ಆಹ್ವಾನ ಮಾಡಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದ ಮಾದರಿಯಡಿ ಬಿಡ್ ಆಹ್ವಾನಿಸಲಾಗಿದೆ. ಇದು ಸಾಧ್ಯವಾಗಿದ್ದೇ ಆದಲ್ಲಿ ಬೇರೆ ಜಿಲ್ಲೆಗಳ ನಡುವೆ ಸಂಚರಿಸುವ ಮೊದಲ ಮೆಟ್ರೊ ರೈಲು ಎನ್ನುವ ಹೆಗ್ಗಳಿಕೆಗೆ ನಮ್ಮ ಮೆಟ್ರೊ ಪ್ರಮುಖ ಪಾತ್ರ ಆಗಲಿದೆ.

2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೊ ಮಾರ್ಗಗಳನ್ನು ಘೋಷಣೆ ಮಾಡಿದ್ದಾರೆ. ಕಳೆದ ತಿಂಗಳು ನಮ್ಮ ಮೆಟ್ರೊ 118 ಕಿಲೋ ಮೀಟರ್ ಸಾಧ್ಯಾಸಾಧ್ಯತೆ ಅಧ್ಯಯನ ವರದಿಗೆ ಬಿಎಂಆರ್‌ಸಿಎಲ್ ಟೆಂಡರ್ ಕರೆದಿತ್ತು. ಇದೇ ವೇಳೆ ಮಾದಾವರದಿಂದ ಕುಣಿಗಲ್ ಕ್ರಾಸ್‌ವರೆಗೆ 11 ಕಿಲೋ ಮೀಟರ್ ದೂರದವರೆಗೆ ಹಸಿರು ಮಾರ್ಗ ವಿಸ್ತರಣಗೆ ಸರ್ಕಾರ ಪ್ರಾರಂಭದಲ್ಲಿ ಪ್ಲಾನ್ ಮಾಡಿತ್ತ.
ಆದರೆ ಟೆಂಡರ್‌ನಲ್ಲಿ ಈ ಯೋಜನೆಯನ್ನು ಕೈಬಿಡಲಾಯಿತು. ಇನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ ರೀತಿಯಲ್ಲೇ ಈ ಮಾರ್ಗಕ್ಕೆ ಟೆಂಡರ್ ಕರೆದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಎಂಆರ್‌ಸಿಎಲ್ 170 ಕಿಲೋ ಮೀಟರ್ ಸಾಧ್ಯಾಸಾಧ್ಯತೆ ಅಧ್ಯಯನ ವರದಿಗೆ ಟೆಂಡರ್ ಕರೆದಿದೆ.
ನಮ್ಮ ಮೆಟ್ರೊದ ಉತ್ತರ - ದಕ್ಷಿಣ ಕಾರಿಡಾರ್ ಆಗಿರುವ ಹಸಿರು ಮಾರ್ಗದಲ್ಲಿ ಪ್ರಸ್ತುತ ಮಾದಾವರದಿಂದ -ಸಿಲ್ಕ್ ಬೋರ್ಡ್‌ವರೆಗೆ 34.76 ಕಿಲೋ ಮೀಟರ್‌ನಲ್ಲಿ ರೈಲು ಸಂಚಾರ ಮಾಡುತ್ತಿದೆ. ಪ್
ರಸ್ತುತ ನಮ್ಮ ಮೆಟ್ರೊ ಒಟ್ಟು 74 ಕಿಲೋ ಮೀಟರ್ ಸಂಚಾರ ನಡೆಸುತ್ತಿದ್ದು, 2024ರ ಅಂತ್ಯಕ್ಕೆ ಇನ್ನೂ 23 ಕಿಲೋ ಮೀಟರ್ ವಾಣಿಜ್ಯ ಸಂಚಾರ ಹೆಚ್ಚಳ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಇದೇ ಮಾರ್ಗದಲ್ಲಿದ್ದು, ಲಕ್ಷಾಂತರ ಉದ್ಯೋಗಿಗಳು ತುಮಕೂರಿನಿಂದ ಕೆಲಸಕ್ಕೆ ಆಗಮಿಸುತ್ತಾರೆ. ಇವರಿಗೆ ಹೊಸ ಮಾರ್ಗದಿಂದ ಅನುಕೂಲ ಆಗಲಿದೆ.












Click it and Unblock the Notifications