ರೈಲ್ವೆ ಪ್ರಯಾಣಿಕರು ವಾರ ಮೊದಲೇ ಓಲಾ ಬುಕ್ ಮಾಡಬಹುದು
ಬೆಂಗಳೂರು, ಮಾರ್ಚ್ 27: ದೂರದ ಪ್ರಯಾಣ ಮಾಡಿ ಆಯಾಸದಿಂದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದು ಮನೆಗೆ ತೆರಳಲು ಕ್ಯಾಬ್, ಆಟೋಗಳಿಗಾಗಿ ಇನ್ನುಮುಂದೆ ಕಾಯಬೇಕಾಗಿಲ್ಲ.
ಹೌದು ಭಾರತೀಯ ರೈಲ್ವೆ ಇಲಾಖೆಯ ಆನ್‌ಲೈನ್ ಸೇವೆಯಾದ ಐಆರ್'ಸಿಟಿಸಿ ಮೂಲಕ ಓಲಾ ಕ್ಯಾಬ್, ಆಟೋಗಳನ್ನು ಮುಂಚಿತವಾಗಿಯೇ ಬುಕಿಂಗ್ ಮಾಡಬಹುದಾಗಿದೆ. ಐಆರ್'ಸಿಟಿಸಿಯು ಓಲಾ ಕಂಪನಿ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಲಭ್ಯವಾಗಲಿದೆ.
ಇದು 6 ತಿಂಗಳ ಪೈಲಟ್ ಯೋಜನೆಯಾಗಿದೆ. ರೈಲು ಪ್ರಯಾಣಿಕರಿಗೆ ಐಆರ್'ಸಿಟಿಸಿ ಮೂಲಕ ಓಲಾ ಬುಕಿಂಗ್ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಐಆರ್'ಸಿಟಿಸಿ ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ಮೂಲಕವೂ ಬುಕಿಂಗ್ ಮಾಡಬಹುದು. ಪ್ರಯಾಣಿಕರು ಅದರಲ್ಲಿ ಓಲಾದ ಮೈಕ್ರೋ, ಮಿನಿ, ಆಟೋ ಹಾಗೂ ಶೇರ್ ಆಯ್ಕೆಗಳನ್ನು ಪಡೆಯಬಹುದಾಗಿದೆ. ಆದರೆ ಓಲಾ ಕಂಪನಿ ನೀಡುವ ಆಫರ್ ಗಳು, ರಿಯಾಯಿತಿಯಾಗಲಿ ಇದಕ್ಕೆ ಅನ್ವಯವಾಗುವುದಿಲ್ಲ.

ಪ್ರಯಾಣಿಕರು ತಮ್ಮ ಪ್ರಯಾಣ ಒಂದು ವಾರವಿರುವಾಗಲೇ ಕ್ಯಾಬ್ ಗಳನ್ನು ಬುಕ್ ಮಾಡಬಹುದು ಅಥವಾ ರೈಲ್ವೆ ಸ್ಟೇಷನ್ ಗೆ ತೆರಳುವ ಸಂದರ್ಭದಲ್ಲಿಯೂ ಬುಕ್ ಮಾಡಬಹುದು. ರೈಲ್ವೆ ನಿಲ್ದಾಣದಲ್ಲಿ ಕ್ಯಾಬ್ ಬುಕಿಂಗ್ ಗಾಗಿ ಕಿಯೋ್ಕ್ ಅಳವಡಿಸಲಾಗಿದ್ದು, ಯಾರೂ ಬೇಕಾದರೂ ಬುಕ್ ಮಾಡಬಹುದಾಗಿದೆ.












Click it and Unblock the Notifications