ಸಂಗೀತಕ್ಕಾಗಿ ಯಮನ ಕರೆಯನ್ನು ಕಡೆಗಣಿಸಿದ!

ಆಂಧ್ರಪ್ರದೇಶ ಕಡಪ ಮೂಲದ ಕಲ್ಯಾಣ ನಗರ ನಿವಾಸಿ ಅಶೋಕ ಕುಮಾರ್ ರೆಡ್ಡಿ(29) ಮೃತಪಟ್ಟ ಟೆಕ್ಕಿ. ಅಶೋಕ ಅವರು ಪ್ರತಿದಿನ ಈಸ್ಟ್ ರೈಲು ನಿಲ್ದಾಣ ಬಳಿ ಇರುವ ಮೈದಾನಕ್ಕೆ ಬ್ಯಾಡ್ಮಿಂಟನ್ ಆಡಲು ಬರುತ್ತಿದ್ದರು.
ಬುಧವಾರ ಬೆಳಗ್ಗೆ ಬ್ಯಾಡ್ಮಿಂಟನ್ ಆಡಲು ಬಂದಿದ್ದ ಅಶೋಕ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾರ್ವಜನಿಕರು ಶವ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪರಿಶೀಲಿಸಿದಾಗ ಮೃತನ ಶವದ ಮೇಲೆ ಇಯರ್‌ಫೋನ್ ಇರುವುದು ಪತ್ತೆಯಾಗಿದೆ.
ಸಂಗೀತ ಕೇಳಿಸಿಕೊಂಡು ಹಳಿ ದಾಟುತ್ತಿದ್ದಾಗ ರೈಲಿನ ಸದ್ದು ಕೇಳಿಸದೆ ಡಿಕ್ಕಿ ಹೊಡೆದು ಮೃತಪಟಿಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications