Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ

ಬೆಂಗಳೂರು: ಸೇಲಂ ವಿಭಾಗದ ಜೋಲಾರ್‌ಪೆಟ್ಟೈ ಮತ್ತು ದೊಡ್ಡಂಪಟ್ಟಿ ಮಧ್ಯದ ರೈಲು ಮಾರ್ಗದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಸಿಗ್ನಲ್ ಮತ್ತು ಟ್ರಾಫಿಕ್ ಬ್ಲಾಕ್ ಮಾಡಲಾಗುತ್ತಿದೆ. ಈ ಕಾಮಗಾರಿ ಕಾರಣದಿಂದಾಗಿ ಇದೇ ಮಾರ್ಚ್ 24 ರಂದು ಸಂಚರಿಸಬೇಕಾದ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಹೊಸ ಸಮಯದ ಅನ್ವಯ ಪ್ರಯಾಣ ಬೆಳೆಸಬೇಕು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತುರ್ತು ಸಿಗ್ನಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಕೆಎಸ್‌ಆರ್ ಬೆಂಗಳೂರು - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲನ್ನು (22626) 60 ನಿಮಿಷಗಳ ಕಾಲ ಮಾರ್ಗ ಮಧ್ಯೆ ತಡೆ ಹಿಡಿಲಾಗುತ್ತದೆ. ನಿಗದಿತ ಗಮ್ಯ ನಿಲ್ದಾಣ ತಲುಪುವುದು ಒಂದು ಗಂಟೆ ತಡವಾಗಲಿದೆ.

Train Delays

ಎಸ್‌ಎಂವಿಟಿ ಬೆಂಗಳೂರು - ಮಾಲ್ಡಾ ಟೌನ್ ಎಕ್ಸ್‌ಪ್ರೆಸ್ ರೈಲು (13433) ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ವಿಳಂಬವಾಗಲಿವೆ. ಈ ಮಾರ್ಗದ ಪ್ರಯಾಣಿಕರು ವಿಳಂಬ ನೋಡಿಕೊಂಡು ಸಂಚಾರಕ್ಕೆ ಪ್ಲಾನ್ ಮಾಡಿಕೊಳ್ಳಬಹುದು.

120 ನಿಮಿಷಗಳ ಸಂಚಾರ ವಿಳಂಬ

ಇನ್ನೂ ಮೈಸೂರು - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (20608) ತನ್ನ ಸಂಚಾರ ಮಾರ್ಗದಲ್ಲಿ 45 ನಿಮಿಷ ಕಾಲ ನಿಯಂತ್ರಣಕ್ಕೆ ಒಳಪಡಲಿದೆ. ಸರ್‍‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಕಾಕಿನಾಡ ಟೌನ್ ಎಕ್ಸ್‌ಪ್ರೆಸ್ ರೈಲು (17209) ಮಾರ್ಗ ಮಧ್ಯೆ ಬರೋಬ್ಬರಿ 120 ನಿಮಿಷಗಳ (ಎರಡು ಗಂಟೆ) ಕಾಲ ತಡವಾಗಿ ಸಂಚರಿಸಲಿವೆ. ಸಂಚಾರ ಸಮಯದಲ್ಲಿ ಉಂಟಾಗುವ ಈ ಅಡೆತಡೆಗೆ ಸಹಕರಿಸುವಂತೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಸೋಮವಾರ ತಿಳಿಸಿದೆ.

ಭಾಗಶಃ ರದ್ದಾದ ರೈಲುಗಳ ವಿವರ

ಗದಗ ಮತ್ತು ಆಲಮಟ್ಟಿ ನಿಲ್ದಾಣಗಳ ನಡುವೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಪ್ರಯುಕ್ತ ಬೆಂಗಳೂರು, ವಿಜಯಪುರ, ಮೈಸೂರು ಮಾರ್ಗದ ವಿವಿಧ ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಯಾವೆಲ್ಲ ರೈಲುಗಳ ಸಂಚಾರ ರದ್ದಾಗಿದೆ ಎಂಬ ಮಾಹಿತಿ ಮುಂದಿದೆ.

ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ (16547) ರೈಲು ಮಾರ್ಚ್ 23 ಮತ್ತು 24 ರಂದು ಬಾಗಲಕೋಟೆಯಲ್ಲಿ ಸಂಚಾರ ಕೊನೆಗೊಳಿಸಲಿದೆ. ವಿಜಯಪುರ-ಯಶವಂತಪುರ (16548) ರೈಲು ಮರಳಿ ಅದೇ ದಿಕ್ಕಿನಲ್ಲಿ ವಿಜಯಪುರಕ್ಕೆ ಬದಲಾಗಿ, ಬಾಗಲಕೋಟೆಯಿಂದ ಸಂಚಾರ ಪ್ರಾರಂಭಿಸಲಿದೆ.

ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲು (17307) ಮೈಸೂರಿನಿಂದ ಮಾರ್ಚ್ 23 ಮತ್ತು 24 ರಂದು ಸಂಚಾರ ಆರಂಭಿಸಿ, ತನ್ನ ಪ್ರಯಾಣ ಅಂತ್ಯಗೊಳ್ಳುತ್ತದೆ. ಈ ರೈಲು ವಿಜಯಪುರ- ಬಾಗಲಕೋಟೆ ಮಧ್ಯೆ ಸಂಚಾರ ಮಾಡುವುದಿಲ್ಲ. ಮರಳಿ ಬಾಗಲಕೋಟೆ ಬದಲಾಗಿ, ವಿಜಯಪುರದಿಂದ ಸಂಚಾರ ಆರಂಭಿಸಿ, ಮೈಸೂರು ನಿಲ್ದಾಣ ತಲುಪುತ್ತದೆ. ಭಾಗಶಃ ರದ್ದಾದ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ ಕಂಡು ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+