ಬೆಂಗಳೂರು : ಕೆಲವು ರೈಲುಗಳ ಸಂಚಾರ ರದ್ದು
ಬೆಂಗಳೂರು, ಜುಲೈ 06 : ಮಧ್ಯ ಪ್ರದೇಶದ ಇಟಾರ್ಸಿ ಎಂಬಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಹಾನಿಯಾದ ರೈಲು ಮಾರ್ಗದ ದುರಸ್ತಿ ಮಾಡುವ ಕಾರಣ ಸೋಮವಾರ ಬೆಂಗಳೂರಿನಿಂದ ಹೊರಡುವ ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಹೊರಡಬೇಕಿದ್ದ ಬೆಂಗಳೂರು-ಪಾಟ್ನಾ ಎಕ್ಸ್‌ಪ್ರೆಸ್ (12295) ಹಾಗೂ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ಹೊರಡುವ ನಿಜಾಮುದ್ದೀನ್-ಮೈಸೂರು ಎಕ್ಸ್‌ಪ್ರೆಸ್ (12782) ರೈಲುಗಳ ಓಡಾಟ ಸೋಮವಾರ ರದ್ದಾಗಿದೆ. [ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು]

ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಬೇಕಿದ್ದ ಯಶವಂತಪುರ-ಪಾಟಲೀಪುತ್ರ ಎಕ್ಸ್‌ಪ್ರೆಸ್ (22352), ಯಶವಂತಪುರ-ಲಕ್ನೋ ಎಕ್ಸ್‌ಪ್ರೆಸ್ (22683) ರೈಲುಗಳ ಸಂಚಾರ ರದ್ದುಗೊಂಡಿದೆ. [ಪ್ರಯಾಣಿಕರ ಪರದಾಟ ತಪ್ಪಿಸಿದ ಸುವಿಧ ರೈಲು]












Click it and Unblock the Notifications