ಕ್ರೈಂ ರೌಂಡಪ್: ವಿದ್ಯುತ್ ಶಾಕ್‌ಗೆ ನಾಲ್ವರು ಬಲಿ

ನಾರಾಯಣಪ್ಪ(70), ಗೀತಾ(25) ಮೃತಪಟ್ಟಿದ್ದು, ನಾರಾಯಣಪ್ಪನ ಮಗ(28) ಚೇತನ್ ಗಾಯಗೊಂಡಿದ್ದು ಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗ್ಗೆ ಗೀತಾ ಬಟ್ಟೆ ಒಣಗಿಸಲು ಕಟ್ಟಿದ್ದ ಕಬ್ಬಿಣದ ತಂತಿಯನ್ನು ಹಿಡಿದಿದ್ದಾರೆ. ಮನೆಯ ಬಾಗಿಲ ಸಮೀಪದ ಟ್ಯೂಬ್‌ಲೈಟ್‌ನ್ನುಇದೇ ಕಂಬಿಯ ಇನ್ನೊಂದು ಭಾಗವನ್ನು ಕಟ್ಟಿದ್ದರು. ಈ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಗೀತಾಗೆ ಕರೆಂಟ್ ಶಾಕ್ ಹೊಡೆದಿದೆ. ತಪ್ಪಿಸಿಕೊಳ್ಳಲು ಗೀತಾ ಒದ್ದಾಡಿದಾಗ ಮಾವ ನಾರಾಯಣಪ್ಪ ಗೀತಾಳನ್ನು ರಕ್ಷಿಸಲು ಮುಂದಾದಾಗ ಅವರಿಗೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಇಬ್ಬರನ್ನು ರಕ್ಷಿಸಲು ಬಂದ ಚೇತನ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಆನೇಕಲ್‌ನಲ್ಲಿ ಕಳೆದ ರಾತ್ರಿಯಿಂದ ಭಾರೀ ಮಳೆ ಆಗುತ್ತಿದ್ದು, ಈ ಅವಘಡ ವಿದ್ಯುತ್ ಕಂಬದಿಂದ ಆಗಿದೆಯೇ ಅಥವಾ ಮನೆಯ ಶಾರ್ಟ್ ಸರ್ಕ್ಯೂಟ್‌ನಿಂದ ಆಗಿದೆಯೇ ಎಂಬ ಬಗ್ಗೆ ಪರಿಶೀಲನೆ ಆರಂಭವಾಗಿದೆ.
ದಂಪತಿ ಸಾವು:ಮನೆಯಲ್ಲಿ ವಿದ್ಯುತ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಪತಿ-ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದಲ್ಲಿ ನಡೆದಿದೆ. ಪಲ್ಲವಿ ಪತ್ತಾರ್(30), ಸಂಜೀವ್ ಪತ್ತಾರ್(35) ಸಾವನ್ನಪ್ಪಿರುವ ದುರ್ದೈವಿ ದಂಪತಿಗಳು. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications