ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಂಚಾರ ನಿಯಮ ಪಾಲನೆ: ದಂಡ ತಪ್ಪಿಸಲು ಫೋಲ್ಡಬಲ್ ನಂಬರ್ ಪ್ಲೇಟ್ ಬಳಕೆ!

|
Google Oneindia Kannada News

ಬೆಂಗಳೂರು, ಜನವರಿ 01: ಬೆಂಗಳೂರು ನಗರದ ವಿವಿಧ 50ಕಡೆಗಳಲ್ಲಿ ಸಂಚಾರ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿ ಹಾಗೂ ದಂಡದಿಂದ ತಪ್ಪಿಸಿಕೊಳ್ಳಲು ನಂಬರ್‌ ಪ್ಲೇಟ್ ಬದಲಾವಣೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ.

ಟ್ರಾಫಿಕ್ ನಿಯಮಗಳ ಅನುಸರಣೆಯ ಮೇಲ್ವಿಚಾರಣೆ ಮಾಡಲು ಎಐ-ಚಾಲಿತ ಕ್ಯಾಮೆರಾಗಳನ್ನು ನಗರದಲ್ಲಿ ಹಲವೆಡೆ ಅಳವಡಿಸಲಾಗಿದೆ. ಈ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಕೆಲವು ಬೈಕ್‌ ಸವಾರರು ಫೋಲ್ಡಬಲ್ ನಂಬರ್ ಪ್ಲೇಟ್‌ಗಳನ್ನು ಬಳಸಿದ್ದಾರೆ. ವಾಹನದ ನಂಬರ್‌ಗಳು ಕಾಣದಂತಹ ಪ್ಲೇಟ್‌ಗಳನ್ನು ಅಳವಡಿಸಿದ್ದಾರೆ. ಈ ಪೈಕಿ ಒಂದು ತಿಂಗಳಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಾಗಿದೆ.

ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋ ಮುನ್ನ ಯೋಚಿಸಿ, ಕ್ಷಣದಲ್ಲೇ ಬರುತ್ತೆ ಫೈನ್ ಚಲನ್!ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋ ಮುನ್ನ ಯೋಚಿಸಿ, ಕ್ಷಣದಲ್ಲೇ ಬರುತ್ತೆ ಫೈನ್ ಚಲನ್!

ಕಳೆದ ಕಳೆದ 15 ದಿನಗಳಿಂದ ಬೈಕ್ ಸವಾರರು ಟ್ರಾಪಿಕ್ ಮೇಲ್ವಿಚಾರಣೆಯ ಕ್ಯಾಮೆರಾಗಳಿಗೆ ಅಸ್ಪಷ್ಟವಾಗುವಂತೆ ನಂಬರ್ ಪ್ಲೇಟ್‌ ಹಾಕಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ಎಚ್ಚರಿಸಿದ್ದಾರೆ. ಮಾಗಡಿ ರಸ್ತೆಯಲ್ಲಿ ನಾವು 15 ದಿನಗಳಲ್ಲಿ 30 ವಾಹನಗಳ ಫೊಲ್ಡೆಬಲ್ ನಂಬರ್ ಪ್ಲೇಟ್‌ ಅನ್ನು ಡೌನ್ ಮಾಡಿರುವುದು ಗೊತ್ತಾಗಿದೆ ಎಂದು ಕುಲದೀಪ್ ಕುಮಾರ್ ಜೈನ್, ಡಿಸಿಪಿ (ಸಂಚಾರ, ಪಶ್ಚಿಮ) ಮಾಹಿತಿ ನೀಡಿದ್ದಾರೆ.

Traffic rule Violation: use of foldable number plate to avoid fines

ಕೆಲವು ಬೈಕ್‌ ಸವಾರರು ನಂಬರ್ ಪ್ಲೇಟ್‌ ಸರಿಯಾಗಿ ಕಾಣದಂತೆ ಸ್ಟಿಕ್ಕರ್‌ಗಳನ್ನು ಬಳಸುತ್ತಿದ್ದಾರೆ. ಆ ಮೂಲಕ ನಂಬರ್‌ ಪ್ಲೇಟ್‌ ಕವರ್ ಮಾಡಿ ಸಂಚಾರ ಮಾಡುತ್ತಿದ್ದಾರೆ. ಫೋಲ್ಡೇಬಲ್ ನಂಬರ್ ಪ್ಲೇಟ್‌ಗಳನ್ನು ಸವಾರರು ಕಡಿಮೆ ಮೊತ್ತದಲ್ಲಿ ಹತ್ತಿರದ ಗ್ಯಾರೇಜ್ ನಲ್ಲಿ ಖರೀದಿಸಿ ಅಳವಡಿಸಿದ್ದಾರೆ ಎನ್ನಲಾಗಿದೆ.

ಈ ಫೋಲ್ಡಬಲ್ ನಂಬರ್ ಪ್ಲೇಟ್‌ಗಳನ್ನು ಸ್ಕ್ರೂಗಳು, ಕೀಲುಗಳು ಮತ್ತು ಆಯಸ್ಕಾಂತಗಳಿಂದ ರೂಪಿಸಲಾಗಿದೆ ಇದರಿಂದ ಅವು ಹಿಂದಕ್ಕೆ ಮಡಚಲ್ಪಟ್ಟಿರುತ್ತವೆ. ನೇರವಾಗಿ ನೋಡಿದರೆ ವಾಹನದ ನಂಬರ್ ಸರಿಯಾಗಿ ಕಾಣಿಸುವುದಿಲ್ಲ. ಈ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದರೂ ಕ್ಯಾಮರಾಗಳ ಕಣ್ಣಿನಿಂದ ತಪ್ಪಿಸಿಕೊಂಡು ದಂಡ ಬೀಳದಂತೆ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟಿಕ್ಕರ್- ಲೋಹದ ಬಾರ್‌ ಬಳಕೆ

ಸ್ಟಿಕ್ಕರ್‌ಗಳು ಮತ್ತು ಲೋಹದ ಬಾರ್‌ಗಳು ಬಳಸಿ ನಂಬರ್ ಪ್ಲೇಟ್‌ಗಳ ಸಂಚಾರ ಪೊಲೀಸರು,ಕ್ಯಾಮರಾಗಳಿಂದ ಮರೆ ಮಾಚಲಾಗುತ್ತದೆ. ತಪಾಸಣೆ ವೇಳೆ ನಂಬರ್ ಪ್ಲೇಟ್ ಇಲ್ಲದಿರುವುದು, ಭಾಗಶಃ ಮರೆಮಾಚಿರುವುದು ಕಂಡು ಬಂದಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಗಳ ನಿಯಮಗಳಡಿಯಲ್ಲಿ ವಾಹನ ಸವಾರರ ಮೇಲೆ ಕ್ರಮ ಕೈಗೊರ್ಳಳಲಾಗುತ್ತದೆ ಎಂದು ಸಂಚಾರ ವಿಭಾಗದ ಎಡಿಜಿಪಿ ಹಾಗೂ ವಿಶೇಷ ಆಯುಕ್ತ ಎಂ.ಎ.ಸಲೀಂ ವಿವರಿಸಿದರು.

Traffic rule Violation: use of foldable number plate to avoid fines

ಈ ಹಿಂದೊಮ್ಮೆ ಮಾಗಡಿ ರಸ್ತೆಯಲ್ಲಿ ದಾಖಲಿಸಲಾದ ಪ್ರಕರಣವೊಂದರಲ್ಲಿ ಬೈಕ್ ಸವಾರನೊಬ್ಬ ಮುಖಗವಸು ಧರಿಸಿ (ಮಾಸ್ಕ್) ಬೈಕ್ ನಂಬರ್ ಪ್ಲೇಟ್ ಮುಚ್ಚಿದ್ದ. ಇದೇ ವ್ಯಾನ್‌ಗಳು ಮತ್ತು ಸಣ್ಣ ಟೆಂಪೋ ಟ್ರಾವೆಲರ್‌ಗಳ ನಂಬರ್ ಪ್ಲೇಟ್ ಮರೆಮಾಚುವುದು ಕಂಡು ಬಂದಿವೆ. ಇದಷ್ಟೇ ಅಲ್ಲದೇ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘಿಸಿರುವ ನಂಬರ್ ಪ್ಲೇಟ್‌ ಸಂಖ್ಯೆ ಹಾಗೂ ವಾಹನಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲದೇ ಪ್ರಕರಣಗಳು ಬೆಳಕಿಗೆ ಬಂದಿವೆ. ಇವೆಲ್ಲವು ಕದ್ದ ನಂಬರ್ ಪ್ಲೇಟ್‌ಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Bengaluru traffic rule Violation: use of foldable number plate to avoid fines,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X