Bengaluru Traffic: ಹೆಬ್ಬಾಳ ಕಡೆ ಹೋಗುವ ಪ್ರಯಾಣಿಕರೆ ಇತ್ತ ಗಮನಿಸಿ

ಬೆಂಗಳೂರು, ಮೇ. 09 : ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಹೆಬ್ಬಾಳ - ಕೊಡಿಗೇಹಳ್ಳಿ ಜಂಕ್ಷನ್‌ನಲ್ಲಿ ಮೆಟ್ರೋ ಸಂಬಂಧಿತ ಕಾಮಗಾರಿಗಳನ್ನು ಆರಂಭಿಸಲಿದೆ. ಈ ಕಾರಣದಿಂದ ಹೆಬ್ಬಾಳ ವೃತ್ತದ ಸುತ್ತಮುತ್ತ ಸಂಚರಿಸುವ ಪ್ರಯಾಣಿಕರು ಮುಂಜಾಗ್ರತೆ ವಹಿಸಬೇಕಿದೆ.

ಪ್ರಮುಖ ರಸ್ತೆಯಾದ ಹೆಬ್ಬಾಳ - ಕೊಡಿಗೇಹಳ್ಳಿ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಸಲಹೆಯನ್ನು ನೀಡಿದ್ದಾರೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಬೇಕು ಎಂದು ಪೊಳಿಸರು ಮನವಿ ಮಾಡಿದ್ದಾರೆ.

Traffic police issue advisory for commuters travelling around Hebbal Circle

ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. "ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ ಮೇ 10 ರಿಂದ ಕೊಡಿಗೇಹಳ್ಳಿ - ಹೆಬ್ಬಾಳ ವೃತ್ತದ ಮೆಟ್ರೋ ಪಿಲ್ಲರ್‌ಗಳಿಗೆ ಟ್ರ್ಯಾಕ್‌ಗಳನ್ನು ಜೋಡಿಸುತ್ತಿದೆ. ಕೊಡಿಗೇಹಳ್ಳಿ ಜಂಕ್ಷನ್‌ನಿಂದ ಎಸ್ಟೀಮ್ ಮಾಲ್‌ಗೆ ಸರ್ವಿಸ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ರಾತ್ರಿ 11.00 ರಿಂದ ಬೆಳಗ್ಗೆ 05.00 ರವರೆಗೆ ನಿಷೇಧಿಸಲಾಗಿದೆ" ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಎಸ್ಟೀಮ್ ಮಾಲ್‌ಗೆ ಹೋಗಲು ಪ್ರಯಾಣಿಕರು ರನ್ನ ರಸ್ತೆಯ ಮೂಲಕ ಹೋಗಬೇಕು. ರಸ್ತೆ ಬಳಕೆದಾರರಿಗೆ ದಾಸರಹಳ್ಳಿ ಮುಖ್ಯರಸ್ತೆಯಿಂದ ಪಂಪಾ ವಿಸ್ತರಣೆ ರಸ್ತೆಗೆ ತಲುಪಲು, ರನ್ನ ರಸ್ತೆ ಮೂಲಕ ಸಾಗಿ, ಕೆಂಪಾಪುರ ಮುಖ್ಯರಸ್ತೆಯ ಮೂಲಕ ಎಸ್ಟೀಮ್ ಮಾಲ್ ತಲುಪಲು ಸೂಚಿಸಲಾಗಿದೆ. ಎಲ್ಲಾ ಎಚ್‌ಜಿವಿ ವಾಹನಗಳು ವಿದ್ಯಾಶಿಲ್ಪ ಜಂಕ್ಷನ್‌ ಬಳಸಬೇಕು ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ.

ನಾಗವಾರ ಫ್ಲೈಓವರ್ ಅಪ್ ರಾಂಪ್ ಬಳಿಯ ಸರ್ವೀಸ್ ರಸ್ತೆಯ ಪ್ರವೇಶವನ್ನು ಶುಕ್ರವಾರದಿಂದ ಮುಚ್ಚಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಘೋಷಿಸಿದ್ದಾರೆ. ಇದು ಔಟರ್ ರಿಂಗ್ ರೋಡ್‌ನಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳ ಮೇಲ್ಸೇತುವೆಗಾಗಿ ಎರಡು ಹೊಸ ಲೇನ್‌ಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಹೀಗಾಗಿ ಕಳೆದ ತಿಂಗಳಿನಿಂದ ಕೆಲವು ತಿರುವುಗಳು ಈಗಾಗಲೇ ಜಾರಿಯಲ್ಲಿವೆ. ಇಲ್ಲಿನ ಕೆ.ಆರ್. ಹೆಬ್ಬಾಳ ಮೇಲ್ಸೇತುವೆ ಬಳಿಯಿರುವ ಪುರಂ ರ‍್ಯಾಂಪ್‌ನಲ್ಲಿ ಹೊಸ ಲೇನ್‌ಗಳನ್ನು ನಿರ್ಮಿಸಲು ಕಿತ್ತುಹಾಕಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+