ಬೆಂಗಳೂರು : ಮೆಜೆಸ್ಟಿಕ್ ಸುತ್ತಮುತ್ತ ಮಾರ್ಗ ಬದಲಾವಣೆ
ಬೆಂಗಳೂರು, ಏ. 28 : ಕರ್ನಾಟಕ ರೈತ ಸಂಘದ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳು 'ಭೂಮಿ ನೀರು ನಮ್ಮ ಹಕ್ಕು' ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಸುಗಮ ಸಂಚಾರಕ್ಕಾಗಿ ಬೆಂಗಳೂರು ಪೊಲೀಸರು ಮಾರ್ಗ ಬದಲಾವಣೆಗಳನ್ನು ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಿಟಿ ರೈಲ್ವೆ ನಿಲ್ದಾಣದಿಂದ ಹೊರಡುವ ಬೃಹತ್ ಪ್ರತಿಭಟನೆ ಫ್ರೀಡಂಪಾರ್ಕ್ ತಲುಪಲಿದೆ. ಸುಮಾರು 25 ಸಾವಿರ ಜನರು ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮೆಜೆಸ್ಟಿಕ್, ಆನಂದರಾವ್ ವೃತ್ತ, ಫ್ರೀಡಂಪಾರ್ಕ್ ಸುತ್ತಮುತ್ತ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. [ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಇದ್ದರೆ ದಂಡ]

* ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ ಕಡೆಗಳಿಂದ ಆನಂದರಾವ್ ಫ್ಲೈ ಓವರ್ ಮೂಲಕ ನಗರದ ವಿವಿಧ ಭಾಗಗಳಿಗೆ ಹೋಗುವ ವಾಹನ ಸವಾರರು ಮಲ್ಲೇಶ್ವರಂ ಲಿಂಕ್ ರಸ್ತೆ ಮೂಲಕ ಶೇಷಾದ್ರಿಪುರಂ-ಬಸವೇಶ್ವರ ವೃತ್ತ ತಲುಪಿ ಮುಂದೆ ಸಾಗಬಹುದು. [ಕಾರು ಪೂಲಿಂಗ್ ಬಗ್ಗೆ ಮಾಹಿತಿ ಬೇಕೆ?]
* ಮಾಗಡಿ ರಸ್ತೆ, ಓಕಳಿಪುರಂ ಜಂಕ್ಷನ್ ಕಡೆಯಿಂದ ಆನಂದರಾವ್ ಫ್ಲೈ ಓವರ್ ಮೂಲಕ ಸಾಗುವವರು ಮಾಗಡಿ ರಸ್ತೆಯ ಹುಣಸೇಮರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಬಿನ್ನಿಮಿಲ್-ಶಿರಸಿ ಸರ್ಕಲ್-ಸಿಟಿ ಮಾರ್ಕೆಟ್-ಟೌನ್ ಹಾಲ್ ಮೂಲಕ ಮುಂದೆ ಸಾಗಬಹುದು.
*ಬಸವೇಶ್ವರ ಸರ್ಕ್‌ಲ್‌ನಿಂದ ರೇಸ್‌ಕೋರ್ಸ್ ರಸ್ತೆ ಮೂಲಕ ಆನಂದರಾವ್ ವೃತ್ತಕ್ಕೆ ಬರುವವರು ಬಸವೇಶ್ವರ ವೃತ್ತದ ಬಳಿ ಬಲತಿರುವು ಪಡೆದು ಪ್ಯಾಲೇಸ್ ರಸ್ತೆ-ಕೆ.ಆರ್.ವೃತ್ತದ ಮೂಲಕ ಮುಂದೆ ಸಾಗಬೇಕು.












Click it and Unblock the Notifications