ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೊಸ ಘಟಕ: 2000 ಉದ್ಯೋಗ ಸೃಷ್ಟಿ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹೊಸ ಹೂಡಿಕೆಗಳ ಮೂಲಕ ದೇಶದಲ್ಲಿ ಅಸ್ತಿತ್ವದಲ್ಲಿರುವ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಿಸಲು ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ.
ಭಾರತದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸುಮಾರು 3,300 ಕೋಟಿ ರೂ.ಗಳ ಹೂಡಿಕೆಯು ಹೊಸ ಸ್ಥಾವರವನ್ನು ಸ್ಥಾಪಿಸುವುದು, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಇದರಿಂದ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಗೆ ಗಣನೀಯ ಉತ್ತೇಜನ ದೊರೆಯಲಿದೆ.

ಇದು ಭಾರತದ ಮೂರನೇ ಘಟಕವಾಗಿದ್ದು, ಕರ್ನಾಟಕದ ಬೆಂಗಳೂರು ಬಳಿಯ ಬಿಡದಿಯಲ್ಲಿ ಸ್ಥಾಪನೆಯಾಗಲಿದೆ. ಕರ್ನಾಟಕ ಸರ್ಕಾರದೊಂದಿಗಿನ ತಿಳುವಳಿಕಾ ಒಡಂಬಡಿಕೆಗೆ ಸಿಎಂ ಸಿದ್ದರಾಮಯ್ಯ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸಕಾಜು ಯೋಶಿಮುರಾ ಅವರು ಸಹಿ ಮಾಡಿ ವಿನಿಮಯ ಮಾಡಿಕೊಂಡರು.
2000 ಉದ್ಯೋಗ ಸೃಷ್ಟಿ
ಬ್ಯಾಟರಿ ಮತ್ತು ಸೆಲ್ ಉತ್ಪಾದನೆ, ಬಿಡಿಭಾಗಗಳ ಉತ್ಪಾದನೆ, ಮೂಲ ಉಪಕರಣ ತಯಾರಕರು, ಚಾರ್ಜಿಂಗ್ ಮತ್ತು ಪರೀಕ್ಷಾ ಮೂಲಸೌಕರ್ಯಗಳಿಂದ ಸಂಶೋಧನೆ ಮತ್ತು ಅಭಿವೃದ್ಧಿಯವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ವ್ಯಾಪಿಸಿರುವ ಎಲೆಕ್ಟ್ರಿಕ್ ವಾಹನ (ಇವಿ) ಉತ್ಪಾದನೆಯ ಪ್ರಮುಖ ತಾಣವಾಗಿ ಕರ್ನಾಟಕವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಹೊಸ ಕ್ಲೀನ್ ಮೊಬಿಲಿಟಿ ನೀತಿಯನ್ನು ಸರ್ಕಾರ ತರುತ್ತಿದೆ.
ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಮತ್ತು ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿಟಿಇಪಿ) ಕಾರ್ಯಕ್ರಮಗಳ ಮೂಲಕ 'ಸ್ಕಿಲ್ ಇಂಡಿಯಾ' ಗೆ ಕೊಡುಗೆ ನೀಡುತ್ತದೆ ಎಂದು ಹೇಳಲಾಗಿದೆ.
ಪ್ರಸ್ತುತ ಟಿಟಿಟಿಐ ಕರ್ನಾಟಕದ ಸುಮಾರು 1,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಟಿಟಿಇಪಿ ಮೂಲಕ ಭಾರತದ 26 ರಾಜ್ಯಗಳ 63 ಸಂಸ್ಥೆಗಳಿಂದ 12,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಹೊಸ ಹೂಡಿಕೆಗಳು ಟಿಕೆಎಂ ಉತ್ಪಾದನಾ ಸಾಮರ್ಥ್ಯವನ್ನು 1,00,000 ಯುನಿಟ್ ಗಳಷ್ಟು ಹೆಚ್ಚಿಸುತ್ತವೆ. ಸುಮಾರು 2,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸ ಅಭಿವೃದ್ಧಿಯು ಪೂರೈಕೆದಾರ ಪರಿಸರ ವ್ಯವಸ್ಥೆಯಲ್ಲಿ ಮತ್ತಷ್ಟು ಬೆಳವಣಿಗೆಯ ಸಾಮರ್ಥ್ಯ ಎಂದು ಕಂಪನಿ ಹೇಳಿದೆ.
ಕಳೆದ ವರ್ಷ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ (ಟಿಕೆಎಪಿ) ಒಳಗೊಂಡ ಟೊಯೊಟಾ ಗ್ರೂಪ್ ಆಫ್ ಕಂಪನಿಗಳು ಕರ್ನಾಟಕ ಸರ್ಕಾರದೊಂದಿಗೆ 4,100 ಕೋಟಿ ರೂ.ಗಳ ಹೂಡಿಕೆ ಮಾಡಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು.












Click it and Unblock the Notifications