Chicken Shawarma: ಕಡಿಮೆ ದರದಲ್ಲಿ ರುಚಿ-ರುಚಿಯಾದ ಶವರ್ಮಾ ಸಿಗುವ ಬೆಸ್ಟ್ ಸ್ಥಳಗಳಿವು
ಬೆಂಗಳೂರಿನಲ್ಲಿದ್ದು ನೀವು ಆಹಾರ ಪ್ರಿಯರಾಗಿದ್ದರೆ ನೀವು ಈ ಬೃಹತ್ ನಗರದಲ್ಲಿ ಸವಿಯಬೇಕಾದ ಆಹಾರಗಳನ್ನು ಪಟ್ಟಿ ಮಾಡ ಹೊರಟರೆ ಅದು ಮುಗಿಯದ ಕೆಲಸವಾಗುತ್ತದೆ. ಏಕೆಂದರೆ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಸಾವಿರಾರು ಹೋಟೆಲ್‌ಗಳಿದ್ದು, ಲಕ್ಷಾಂತರ ಬಗೆಯ ಆಹಾರವು ಪ್ರತಿನಿತ್ಯವು ತಯಾರಾಗುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ವಿಶೇಷವಿದ್ದು, ಆಹಾರ ಪ್ರಿಯರು ಹುಡುಕಿ ಹೋಗಬೇಕಷ್ಟೇ.
ನಾನ್ ವೆಜ್ ಪ್ರಿಯರಿಗೆ ತಿನ್ನಲು ನೂರಾರು ಆಯ್ಕೆಗಳಿವೆ, ಚಿಕನ್, ಮಟನ್, ಫಿಶ್, ಪೋರ್ಕ್, ಫ್ರಾನ್ಸ್, ಕ್ಯಾಬ್ ಸೇರಿದಂತೆ ಇತರ ಆಹಾರ ಪದಾರ್ಥಗಳಿಂದ ನೂರಾರು ಬಗೆಯ ಆಹಾರಗಳನ್ನು ತಯಾರಿಸಬಹುದು. ಅದರಲ್ಲೂ ಮುಖ್ಯವಾಗಿ ಚಿಕನ್‌ನಿಂದ ಮಾಡಿದ ಖಾದ್ಯಗಳನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಚಿಕನ್ ಬಿರಿಯಾನಿ, ಚಿಕನ್ ಫ್ರೈ, ಚಿಕನ್ ಕಬಾಬ್ ತಿಂದು ಬೇಸರವಾಗಿದ್ದರೆ ಒಮ್ಮೆ ಚಿಕನ್ ಶವರ್ಮಾ ರೋಲ್ ಟ್ರೈ ಮಾಡಿ.
ಶವರ್ಮಾ ರೋಲ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ಹಿರಿಯವರವರೆಗೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಶವರ್ಮಾದಲ್ಲಿ ಮಟನ್, ಚಿಕನ್, ಫೋರ್ಕ್ ಹೀಗೆ ವಿವಿಧ ರೀತಿಯ ಶವರ್ಮಾಗಳು ಲಭ್ಯವಿದ್ದು, ಬೆಂಗಳೂರಿನಲ್ಲಿ ಚಿಕನ್ ಶವರ್ಮಾ ರೋಲ್‌ಗೆ ಭಾರೀ ಬೇಡಿಕೆ ಇದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಬೆಸ್ಟ್ ಶವರ್ಮಾ ರೋಲ್ ಸವಿಯಲು ಭೇಟಿ ನೀಡಬೇಕಾದ ಐದು ಸ್ಥಳಗಳ ವಿವರ ಇಲ್ಲಿದೆ.

1. ಕಬಾಬ್ ಮ್ಯಾಜಿಕ್
ಹೆಸರೇ ಹೇಳುವಂತೆ ಈ ರೆಸ್ಟೋರೆಂಟ್ ಚಿಕನ್ ಖಾದ್ಯಗಳಿಗೆ ಹೆಚ್ಚು ಹೆಸರುವಾಸಿ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ನೀವು ವಿವಿಧ ರೀತಿಯ ರುಚಿಕರವಾದ ಚಿಕನ್ ಖಾದ್ಯಗಳನ್ನು ಸವಿಯಬಹುದು. ಸದಾ ಜನರಿಂದ ತುಂಬಿ ತುಳುಕುವ. ಕಬಾಬ್ ಮ್ಯಾಜಿಕ್ ಹೋಟೆಲ್‌ನಲ್ಲಿ ಶವರ್ಮಾ ರೋಲ್ ಜನರ ಮೆಚ್ಚಿನ ಆಯ್ಕೆ.
ತಂದೂರಿ ರೋಟಿಯೊಂದಿಗೆ ಬಿಸಿಬಿಸಿ ಚಿಕನ್ ಜೊತೆಗೆ ಮಯಾನಸ್ ಸಾಸ್, ಈರುಳ್ಳಿ, ಕ್ಯಾರೇಟ್, ಮೆಣಸಿನ ಕಾಯಿ ಹಾಗೂ ಮಸಾಲೆ ಸೇರಿಸಿ ಇಲ್ಲಿ ಶವರ್ಮಾ ರೋಲ್ ತಯಾರಿಸಲಾಗುತ್ತದೆ. ಕಡಿಮೆ ದರರಲ್ಲಿ ಹೆಚ್ಚು ರುಚಿಕರವಾದ ಚಿಕನ್ ಶವರ್ಮಾ ರೋಲ್ ಇಲ್ಲಿ ಸಿಗುತ್ತದೆ. ಇಲ್ಲಿ ಸಿಗುವ ಕಪ್ಪು ದ್ರಾಕ್ಷಿಯ ಜ್ಯೂಸ್(ಪಲ್ಪಿ) ಜೊತೆಗೆ ಚಿಕನ್ ಶವರ್ಮಾವನ್ನು ಮಿಸ್ ಮಾಡದೇ ಟ್ರೈ ಮಾಡಿ.
ಇನ್ನು ಕಬಾಬ್ ಮ್ಯಾಜಿಕ್‌ನಲ್ಲಿ ಬಿರಿಯಾನಿ, ಫ್ರೈಡ್ ಚಿಕನ್, ಕಬಾಬ್ ಸೇರಿದಂತೆ ಚಿಕನ್‌ನ ವಿವಿಧ ಬಗೆಯ ಖಾದ್ಯ ಲಭ್ಯವಿದ್ದು, ಇಲ್ಲಿಗೆ ಭೇಟಿ ನೀಡಿದವರು ಮಿಸ್ ಮಾಡದೇ ತಂದೂರಿ ಚಿಕನ್ ಸವಿಯಿರಿ. ಕೆ.ಆರ್ ಮಾರ್ಕೆಟ್, ಜಯನಗರ, ಸೌಂತ್ ಎಂಡ್ ಸೇರಿದಂತೆ ಬೆಂಗಳೂರಿನ ವಿವಿಧೆದೆಡೆ ಕಬಾಬ್ ಮ್ಯಾಜಿಕ್ ರೆಸ್ಟೋರೆಂಟ್ ಕಾಣಬಹುದು.

2. ಆಲ್-ಬೆಕ್
ಮಲ್ಲೇಶ್ವರಂಗೆ ಶಾಪಿಂಗ್ ತೆರಳಿದವರು ಮಿಸ್ ಮಾಡದೇ ಆಲ್-ಬೆಕ್ ಹೋಟೆಲ್‌ಗೆ ಒಮ್ಮೆ ಭೇಟಿ ನೀಡಿ. ಇಲ್ಲಿ ಚಿಕನ್‌ನ ಎಲ್ಲಾ ಖಾದ್ಯಗಳು ಲಭ್ಯವಿರುತ್ತದೆ. ಮುಖ್ಯವಾಗಿ ಇಲ್ಲಿನ ಶವರ್ಮಾ ರೋಲ್‌ಗೆ ಅಭಿಮಾನಿಗಳ ಬಳಗವೇ ಇದೆ. ಜೊತೆಗೆ ಇಲ್ಲಿ ಸಸ್ಯಹಾರಿಗಳಿಗೂ ಕೂಡ ವಿವಿಧ ರೀತಿಯ ಖಾದ್ಯಗಳು ಲಭ್ಯವಿರುತ್ತದೆ.
ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಈ ಹೋಟೆಲ್ ರಾತ್ರಿವರೆಗೂ ತೆರೆದಿರುತ್ತದೆ. ಸದಾ ಜನಸಂದಣಿಯಿಂದ ತುಂಬಿರುವ ಈ ಹೋಟೆಲ್‌ನಲ್ಲಿ ಶವರ್ಮಾ ರೋಲ್ ತಿನ್ನಲು ನೀವು ಕಾಯಲೇಬೇಕಾಗುತ್ತದೆ. ಆದರೆ ಶವರ್ಮಾ ರೋಲ್ ರುಚಿ ಮಾತ್ರ ನೀವು ಕೊಟ್ಟ ಹಣ ಮತ್ತು ಸಮಯಕ್ಕೆ ನ್ಯಾಯ ಒದಗಿಸಿಕೊಡುತ್ತದೆ. ಆಲ್-ಬೆಕ್ ಶವರ್ಮಾ ಜೊತೆಗೆ ಇಲ್ಲೇ ತಯಾರಿಸುವ ಜ್ಯೂಸ್‌ಗಳನ್ನು ಮಿಸ್ ಮಾಡದೇ ಟ್ರೈ ಮಾಡಿ. ಅಂದಹಾಗೆ ಈ ಹೋಟೆಲ್‌ನಲ್ಲಿ ಕಬಾಬ್, ಗೋಲ್ಡ್ ಚಿಕನ್, ಕಲ್ಮಿ ಕಬಾಬ್, ಗೀ ರೈಸ್ ಸೇರಿದಂತೆ ಒಂದಿಷ್ಟು ಆಹಾರಗಳನ್ನು ಮಿಸ್ ಮಾಡದೇ ಸವಿಯಿರಿ.

3. ಕಬಾಬ್ ಮ್ಯಾನರ್
ಆರ್.ಟಿ ನಗರದಲ್ಲಿರುವ ಕಬಾಬ್ ಮ್ಯಾನರ್ ಹೋಟೆಲ್ ಶವರ್ಮಾ ರೋಲ್‌ಗೆ ಸಖತ್ ಫೇಮಸ್. ಶವರ್ಮಾ ಎಂದರೆ ಕಬಾಬ್ ಮ್ಯಾನರ್ ಎಂದು ಹೇಳುವವರಿದ್ದಾರೆ. ಇಲ್ಲಿನ ಶವರ್ಮಾ ರುಚಿ ಗ್ರಾಹಕರನ್ನು ಹಿಡಿದಿಟ್ಟುಕೊಂಡಿದೆ. ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ಕಾದು ಶವರ್ಮಾ ರೋಲ್ ಸವಿಯುತ್ತಾರೆ. ಹಾಗೇ ಇಲ್ಲಿನ ತಂದೂರಿ ಚಿಕನ್ ಸಹ ರುಚಿಕರವಾಗಿದ್ದು, ರುಚಿರುಚಿಯಾದ ಚಿಕನ್ ಖಾದ್ಯಗಳನ್ನು ಸವಿಯಬೇಕೆಂದುಕೊಂಡವರು ಮಿಸ್ ಮಾಡದೇ ಇಲ್ಲಿಗೆ ಭೇಟಿ ನೀಡಿ. ಕೇವಲ ಆರ್‌ಟಿ ನಗರ ಮಾತ್ರವಲ್ಲದೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಬಾಬ್ ಮ್ಯಾನರ್ ಹೋಟೆಲ್‌ಗಳಿದ್ದು, ಅಲ್ಲಿಯೂ ಸಹ ಶವರ್ಮಾ ರೋಲ್ ಸವಿಯಬಹುದುದಾಗಿದೆ.
4. ಶವರ್ಮಾ ಗ್ರಿಲ್ ಹೌಸ್
ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಶವರ್ಮಾ ಗ್ರಿಲ್ ಹೌಸ್ ಹೆಸರಿಗೆ ತಕ್ಕಂತೆ ಶವರ್ಮಾ ರೋಲ್‌ಗೆ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿ ಶವರ್ಮಾ ರೋಲ್‌ಗೆ ಬಳಸುವ ಮಸಾಲೆ ಹಾಗೂ ಪದಾರ್ಥಗಳು ರೋಲ್‌ಗೆ ಬೇರೆಯೇ ರುಚಿಕೊಡುತ್ತಿದ್ದು, ಇಲ್ಲಿನ ಗ್ರಾಹಕರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಮಧ್ಯಾಹ್ನ 12 ಗಂಟೆ ಬಳಿಕ ತೆರೆಯುವ ಈ ಹೋಟೆಲ್ ಸಂಜೆ ಸಮಯದಲ್ಲಿ ಶವರ್ಮಾ ರೋಲ್‌ಗಾಗಿ ಜನರಿಂದ ತುಂಬಿ ತುಳುಕುತ್ತಿರುತ್ತದೆ.

5. ಎಂಪೈರ್ ರೆಸ್ಟೋರೆಂಟ್
ಬೆಂಗಳೂರಿನಲ್ಲಿ ರುಚಿರುಚಿಯಾದ ನಾನ್‌ವೆಜ್ ತಿನ್ನಬೇಕು ಎಂದುಕೊಂಡವರು ಮಿಸ್ ಮಾಡದೇ ಎಂಪೈರ್ ರೆಸ್ಟೋರೆಂಟ್‌ಗೆ ಭೇಟಿ ನೀಡಿ. ಬೆಂಗಳೂರಿನ ವಿವಿಧ ಕಡೆಗಳಲ್ಲಿರುವ ಈ ಹೋಟೆಲ್‌ನಲ್ಲಿ, ಚಿಕನ್, ಫಿಶ್, ಸೀಗಡಿ ಸೇರಿದಂತೆ ವಿವಿಧ ಬಗೆಯ ನಾನ್‌ವೆಜ್ ಖಾದ್ಯಗಳು ಲಭ್ಯವಿರುತ್ತದೆ. ಇಲ್ಲಿ ಶವರ್ಮಾ ರೋಲ್ ಕೂಡ ಸಖತ್ ಫೇಮಸ್ ಫುಡ್ ಆಗಿದೆ. ಇಲ್ಲಿ ಶವರ್ಮಾದಲ್ಲಿ ಬೇರೆ ಬೇರೆ ರೀತಿಯ ಬಗೆಗಳಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಇಲ್ಲಿ ಶವರ್ಮಾ ರೋಲ್ ತಯಾರಿಸಿಕೊಡಲಾಗುತ್ತದೆ. ಜ್ಯೂಸ್‌ನೊಂದಿಗೆ ಶವರ್ಮಾ ರೋಲ್ ಸವಿದು ಬಳಿಕ ಇಲ್ಲಿನ ಜನರು ಮೆಚ್ಚಿದ ಚಿಕನ್ ಖಾದ್ಯಗಳನ್ನು ಮಿಸ್ ಮಾಡದೇ ಟ್ರೈ ಮಾಡಿ.












Click it and Unblock the Notifications