‘ನಿಮ್ಮ ಧ್ವನಿಯನ್ನು ಎತ್ತರಿಸಿ; ಸಮುದ್ರಮಟ್ಟವನ್ನಲ್ಲ'

ಬೆಂಗಳೂರು, ಜೂ.5: ವಿಶ್ವದಾದ್ಯಂತ ಪರಿಸರ ವಿಚಾರಗಳಿಗೆ ಸಂಬಂಧಿಸಿ ಜಾಗೃತಿ ಮೂಡಿಸುವ ಹಾಗೂ ಈ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿವರ್ಷದ ಜೂನ್ 5ರಂದು ವಿಶ್ವಸಂಸ್ಥೆಯು ‘ವಿಶ್ವ ಪರಿಸರ ದಿನ'ವೆಂದು ಘೋಷಿಸಿದೆ. 1972ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ವಿಶ್ವ ಪರಿಸರ ದಿನಾಚರಣೆಯನ್ನು ಜಾರಿಗೆ ತಂದಿದೆ.

2014ನೆ ಸಾಲಿನ ವಿಶ್ವ ಪರಿಸರ ದಿನಾಚರಣೆಯು ‘ಸಣ್ಣ ದ್ವೀಪಗಳು ಹಾಗೂ ಹವಾಮಾನ ಬದಲಾವಣೆ' ವಿಷಯಕ್ಕೆ ಒತ್ತು ನೀಡಿದೆ. ‘ನಿಮ್ಮ ಧ್ವನಿಯನ್ನು ಎತ್ತರಿಸಿ; ಸಮುದ್ರಮಟ್ಟವನ್ನಲ್ಲ' (Raise your voice, not the sea level) ಎಂಬುದು ಈ ಬಾರಿಯ ವಿಶ್ವ ಪರಿಸರ ದಿನದ ಅಧಿಕೃತ ಘೋಷಣೆಯಾಗಿದೆ.

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನೆಲ್ಲೆಡೆ ಉಸಿರಾದ ಹಸಿರನ್ನು ಉಳಿಸಲು ಆಂದೋಲನಗಳು ನಡೆಯುತ್ತಿವೆ, ಪರಿಸರ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಪ್ರಯತ್ನಗಳು ನಡೆಯುತ್ತಿವೆ. ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮುಂದಿನ ಪೀಳಿಗೆಗೆ ನಾವು ಪ್ರಾಣಿ ಪಕ್ಷಿ, ಸಸ್ಯ ಸಂಪತ್ತು ಉಳಿಸದಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ.[ಇಂದು ಮಾತ್ರವಲ್ಲ ಪ್ರತಿದಿನ ಪರಿಸರ ಉಳಿಸಿ]

ಬೆಂಗಳೂರು ನಗರದ ಕಸವನ್ನು ತಮ್ಮ ಗ್ರಾಮದಲ್ಲಿ ವಿಲೇವಾರಿ ಮಾಡಿರುವುದನ್ನು ವಿರೋಧಿಸಿ ಮಂಡೂರು ಗ್ರಾಮಸ್ಥರು ಕೈಗೊಂಡಿರುವ ಪ್ರತಿಭಟನೆ ವಿಶ್ವ ಪರಿಸರ ದಿನ ಕೂಡಾ ಮುಂದುವರೆದಿದೆ.

ಮಕ್ಕಳಿಂದ ಜಾಗೃತಿ ಮೆರವಣಿಗೆ

ಮಕ್ಕಳಿಂದ ಜಾಗೃತಿ ಮೆರವಣಿಗೆ

ಪರಿಸರ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಗುವಾಹಟಿಯಲ್ಲಿ ವಿದ್ಯಾರ್ಥಿಗಳಿಂದ ಮೆರವಣಿಗೆ (ಪಿಟಿಐ ಚಿತ್ರ)

ಅಸ್ಸಾಂನ ಇನ್ನೊಂದೆಡೆ ಕಸದ ರಾಶಿ

ಅಸ್ಸಾಂನ ಇನ್ನೊಂದೆಡೆ ಕಸದ ರಾಶಿ

ಅಸ್ಸಾಂನ ಇನ್ನೊಂದೆಡೆ ಬೊರಗಾಂವ್ ಪ್ರದೇಶದಲ್ಲಿ ಕಸದ ರಾಶಿಯ ನಡುವೆ ಚಿಂದಿ ಆಯುವವರು ಸಾಗುತ್ತಿರುವ ಚಿತ್ರ PTI Photo

ಅಲಹಾಬಾದ್ ನಲ್ಲಿ ದಾಖಲೆ ವೀರ

ಅಲಹಾಬಾದ್ ನಲ್ಲಿ ದಾಖಲೆ ವೀರ

ಅಲಹಾಬಾದ್ : ಪರಿಸರ ಜಾಗೃತಿ ಮೂಡಿಸುವುದರಲ್ಲಿ ಎತ್ತಿದ ಕೈ ಎನಿಸಿರುವ ಗಿನ್ನಿಸ್ ದಾಖಲೆ ವೀರ ರಾಜೇಂದ್ರ ತಿವಾರಿ ಅವರು ಈ ಬಾರಿ ಜನ ಜಾಗೃತಿ ಮೂಡಿಸಿದ್ದು ಹೀಗೆ... PTI Photo

ವಾರಣಾಸಿಯಲ್ಲಿ ಪರಿಸರ ಸ್ನೇಹಿ ಜಾಗೃತಿ

ವಾರಣಾಸಿಯಲ್ಲಿ ಪರಿಸರ ಸ್ನೇಹಿ ಜಾಗೃತಿ

ವಾರಣಾಸಿಯಲ್ಲಿ ಪರಿಸರ ಸ್ನೇಹಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಈ ಬಾರಿ ಗಂಗಾ ಸ್ವಚ್ಛತಾ ಯೋಜನೆಗಾಗಿ ಪ್ರತ್ಯೇಕ ಸಚಿವಾಲಯವನ್ನು ಪ್ರಧಾನಿ ಮೋದಿ ಸ್ಥಾಪಿಸಿದ್ದು, ಉಮಾ ಭಾರ್ತಿ ಅವರು ಈ ಹೊಣೆ ಹೊತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಭ್ರಮ

ಬೆಂಗಳೂರು ನಗರದಲ್ಲಿ ಸಂಭ್ರಮ

ಬೆಂಗಳೂರು ನಗರದಲ್ಲಿ ಕೆಲವೆಡೆ ಪರಿಸರ ದಿನಾಚರಣೆ ಸಂಭ್ರಮ ಕಂಡು ಬಂದರೆ, ಮಂಡೂರಿನಲ್ಲಿ ಇನ್ನೂ ಆತಂಕ ಪರಿಸ್ಥಿತಿ ಇದೆ. ಕಸ ವಿಲೇವಾರಿ ಮಾಡಿರುವುದನ್ನು ವಿರೋಧಿಸಿ ಮಂಡೂರು ಗ್ರಾಮಸ್ಥರು ಕೈಗೊಂಡಿರುವ ಪ್ರತಿಭಟನೆ ಮುಂದುವರೆದಿದೆ.

ಕೇಂದ್ರ ಸಚಿವಾಲಯದಿಂದ ಪುಸ್ತಕ ಬಿಡುಗಡೆ

ಕೇಂದ್ರ ಸಚಿವಾಲಯದಿಂದ ಪುಸ್ತಕ ಬಿಡುಗಡೆ

ನವದೆಹಲಿ: ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಪರಿಸರ ದಿನಾಚರಣೆ ಅಂಗವಾಗಿ ಕೃತಿಯೊಂದನ್ನು ಬಿಡುಗಡೆ ಮಾಡಿದರು. ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರು ಉಪಸ್ಥಿತರಿದ್ದರು. PTI Photo by Shahbaz Khan

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+