ಲೋಕಾಯುಕ್ತ ನೇಮಕಕ್ಕೆ ಸಭೆ, ಮತ್ತೆ ನಾಯಕ್ ಹೆಸರು
ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜೀನಾಮೆ ಬಳಿಕ ಕಳೆದ 13 ತಿಂಗಳಿಂದ ಖಾಲಿ ಇರುವ ಲೋಕಾಯುಕ್ತ ಸ್ತಾನಕ್ಕೆ ಈಗ ವಿಶ್ವನಾಥ ಶೆಟ್ಟಿ ಹೆಸರು ಕೇಳಿ ಬಂದಿತ್ತು.ಅದರ ಬೆನ್ನಲ್ಲೆ ಈ ಮತ್ತೆ ನ್ಯಾ. ನಾಯಕ್ ಹೆಸರು ಕೇಳಿ ಬರುತ್ತಿದೆ.
ಬೆಂಗಳೂರು. ಜನವರಿ 9: ಲೋಕಾಯುಕ್ತರನ್ನು ನೇಮಕ ಮಾಡುತ್ತಾರೊ ಇಲ್ಲವೋ ಎಂಬ ಅನುಮಾನಕ್ಕೆ ಈಗ ಉತ್ತರ ಸಿಕ್ಕಿದ್ದು ಮತ್ತೆ ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಿಫಾರಸು ಮಾಡಿ ಇಂದು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ನ್ಯಾ| ವಿಶ್ವನಾಥ ಶೆಟ್ಟಿ ನೇಮಕಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದ್ದು, ಲೋಕಾಯುಕ್ತ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದು ನ್ಯಾ. ನಾಯಕ್ ಅವರ ಹೆಸರನ್ನು ಸರಕಾರ ಶಿಫಾರಸು ಮಾಡಲಿದೆ ಎನ್ನಲಾಗಿದೆ. ನಾಯಕ್ ಅವರ ಹೆಸರು ಮತ್ತೆ ಪ್ರಸ್ತಾಪವಾದರೆ ಸರಕಾರಕ್ಕೆ ಮತ್ತೆ ಸಂಘರ್ಷ ಎದುರಾಗಲಿದೆ.[ಲೋಕಾಯುಕ್ತರ ಪದಚ್ಯುತಿ ಕಾನೂನು ಪ್ರಕ್ರಿಯೆಗಳೇನು?]

ಲೋಕಾಯುಕ್ತರ ಆಯ್ಕೆ ಕುರಿತು ಇಂದು( ಸೋಮವಾರ) ಮಧ್ಯಾಹ್ನ 1:30 ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ನ್ಯಾ. ನಾಯಕ್ ಅವರ ಹೆಸರನ್ನು ಸಿದ್ದರಾಮಯ್ಯ ಎತ್ತಲಿದ್ದಾರೆ ಎನ್ನಲಾಗಿದ್ದು, ಈ ಹಿಂದೆ ಬಿಜೆಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ರಾಜ್ಯಪಾಲರು ಎರಡು ಬಾರಿ ಶಿಫಾರಸು ಅನೂರ್ಜಿತಗೊಳಿಸಿದ್ದರು.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ನ್ಯಾ.ಭಾಸ್ಕರರಾವ್‌ಗೆ ಸಂಕಷ್ಟ]
ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜೀನಾಮೆ ಬಳಿಕ ಕಳೆದ 13 ತಿಂಗಳಿಂದ ಖಾಲಿ ಇರುವ ಲೋಕಾಯುಕ್ತ ಸ್ತಾನಕ್ಕೆ ನ್ಯಾ. ವಿಕ್ರಂಜಿತ್ ಸೇನ್ ಹೆಸರು ಕೇಳಿ ಬಂದಿತ್ತು. ನಂತರ ನಾಯಕ್ ಹೆಸರು ಕೇಳಿಬಂದು ರಾಜ್ಯಪಾಲರು ತಿರಸ್ಕರಿಸಿದ್ದರು. ಬಳಿಕ ವಿಶ್ವನಾಥ ಶೆಟ್ಟಿ ಹೆಸರು ಕೇಳಿ ಬಂದಿದ್ದು ಸಾಮಾಜಿಕ ಕಾರ್ಯಕರ್ತ ಹಿರೇಮಠ್ ಅವರು ವಿರೋಧ ವ್ಯಕ್ತ ಪಡಿಸಿದ್ದರು. ಈ ಮತ್ತೆ ನ್ಯಾ. ನಾಯಕ್ ಹೆಸರು ಕೇಳಿ ಬರುತ್ತಿದೆ. ಮತ್ತೆ ಏನೇನಾಗುತ್ತದೆಯೋ ನೋಡಬೇಕು.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications