ತಂಬಾಕು ಬೇಡ ಎಂದು ಮ್ಯಾಜಿಕ್ ಮಾಡಿದರು!
ಬೆಂಗಳೂರು, ಮೇ 31 : ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಜಾದೂಗಾರ ಎಸ್.ಪಿ. ನಾಗೇಂದ್ರ ಪ್ರಸಾದ್ ಮಕ್ಕಳಲ್ಲಿ ತಂಬಾಕು ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸಿದರು. ವಿವಿಧ ಜಾದೂಗಳನ್ನು ಮಕ್ಕಳಿಗೆ ಪ್ರದರ್ಶಿಸುವ ಮೂಲಕ ಜನರ ಜೀವಕ್ಕೆ ಕಂಟಕವಾದ ತಂಬಾಕಿನಿಂದ ದೂರವಿರುವಂತೆ ಮಕ್ಕಳಿಗೆ ಅರಿವು ಮೂಡಿಸಿದರು.
1987 ಮೇ 15ರಂದು ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ಸೇವನೆ ವಿರೋಧಿಸಿ ಆಂದೋಲನ ಆರಂಭಿಸಿತು. ಎಪ್ರಿಲ್ 7, 1988ರಲ್ಲಿ ಮೊದಲ ಬಾರಿ "ನೋ ಸ್ಮೋಕಿಂಗ್ ಡೇ' ಆಚರಿಸಲಾಯಿತು. ಬಳಿಕ, 1989ರ ಮೇ 17ರಂದು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರು ಸಭೆ ಸೇರಿ ಪ್ರತಿವರ್ಷ ಮೇ 31ನ್ನು ತಂಬಾಕು ನಿಷೇಧ ದಿನವಾಗಿ ಆಚರಿಸುವ ಬಗ್ಗೆ ನಿರ್ಧಾರ ಕೈಗೊಂಡರು. [ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ ನಿಷೇಧ]
ಅಂದಿನಿಂದ ಇಂದಿನವರೆಗೂ ಮೇ 31ರಂದು ತಂಬಾಕು ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ಸಮೀಕ್ಷೆಯೊಂದ ಪ್ರಕಾರ 15 ವರ್ಷಕ್ಕಿಂತ ಮೇಲ್ಪಟ್ಟ ಶೇ.40 ರಷ್ಟು ಪುರುಷರು ಮತ್ತು ಶೇ.16ರಷ್ಟು ಮಹಿಳೆಯರು ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ. ತಂಬಾಕು ಬಳಕೆಯಿಂದ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ. ಭಾರತದಲ್ಲಿ ವರ್ಷಕ್ಕೆ ಸುಮಾರು 10 ಲಕ್ಷ ಮಂದಿ ಬಲಿಯಾಗುತ್ತಿದ್ದಾರೆ. [ನೋ ಸ್ಮೋಕಿಂಗ್ ಡೇ ಚಿತ್ರಗಳು]

ಮಕ್ಕಳಿಗೆ ತಂಬಾಕು ಕುರಿತು ಜಾಗೃತಿ
ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಬೆಂಗಳೂದಿನ ಕಿದ್ವಾಯಿ ಆಸ್ಪತ್ರೆ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಂಡಿತ್ತು.

ಮ್ಯಾಜಿಕ್ ಮಾಡಿದ ನಾಗೇಂದ್ರ ಪ್ರಸಾದ್
ಜಾದೂಗಾರ ಎಸ್.ಪಿ.ನಾಗೇಂದ್ರ ಪ್ರಸಾದ್ ಮ್ಯಾಜಿಕ್ ಮಾಡುವ ಮೂಲಕ ಮಕ್ಕಳಿಗೆ ತಂಬಾಕ ಉತ್ಪನ್ನಗಳಿಂದ ದೂರವಿರುವಂತೆ ಸಂದೇಶ ಸಾರಿದರು.

ಶನಿವಾರ ನೋ ಸ್ಮೋಕಿಂಗ್ ಡೇ
ಎಪ್ರಿಲ್ 7, 1988ರಲ್ಲಿ ಮೊದಲ ಬಾರಿ "ನೋ ಸ್ಮೋಕಿಂಗ್ ಡೇ' ಆಚರಿಸಲಾಯಿತು. ಬಳಿಕ, 1989ರ ಮೇ 17ರಂದು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರು ಸಭೆ ಸೇರಿ ಪ್ರತಿವರ್ಷ ಮೇ 31ನ್ನು ತಂಬಾಕು ನಿಷೇಧ ದಿನವಾಗಿ ಆಚರಿಸುವ ಬಗ್ಗೆ ನಿರ್ಧಾರ ಕೈಗೊಂಡರು.

ಅಪ್ರಾಪ್ತ ವಯಸ್ಸಿನ ಸಾವಿರ ತಂಬಾಕು ಕಾರಣ
ಅಪ್ರಾಪ್ತ ವಯಸ್ಸಿನಲ್ಲಿ ಸಂಭವಿಸುವ ಸಾವುಗಳಿಗೆ ತಂಬಾಕು ಪ್ರಮುಖ ಕಾರಣ ಎಂದು ಹಲವಾರು ಸಮೀಕ್ಷೆಗಳು ದೃಢಪಡಿಸಿವೆ. ವಿಶ್ವದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಶೇ.40 ರಷ್ಟು ಪುರುಷರು ಮತ್ತು ಶೇ.16ರಷ್ಟು ಮಹಿಳೆಯರು ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಭಾರತದಲ್ಲಿ 10 ಲಕ್ಷ ಸಾವು
ಭಾರತ ದೇಶದಲ್ಲಿ ಪ್ರತಿವರ್ಷ ತಂಬಾಕು ಸೇವನೆಯಿಂದ 10 ಲಕ್ಷ ಮಂದಿ ಬಲಿಯಾಗುತ್ತಿದ್ದಾರೆರಂತೆ. ಯುವಕರು ಹೆಚ್ಚಾಗಿ ತಂಬಾಕು ಚಟಕ್ಕೆ ದಾಸರಾಗಿ, ಕ್ಯಾನ್ಸರ್ ಪೀಡಿತರಾಗಿ ಸಾವನ್ನಪ್ಪುತ್ತಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ
ತಂಬಾಕು ನಿಮ್ಮನ್ನು ಮಾತ್ರ ಕೊಲ್ಲುವುದಿಲ್ಲ ನಿಮ್ಮ ಅಕ್ಕಪಕ್ಕದವರನ್ನು ಕೊಲ್ಲುತ್ತದೆ. ಆದ್ದರಿಂದ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಧೂಪಪಾನವನ್ನು ನಿಷೇಧಿಸಿದೆ. ಆದರೆ, ಈ ಕಾನೂನು ಎಲ್ಲಾ ರಾಜ್ಯಗಳಲ್ಲಿಯೂ ಕಡ್ಡಾಯವಾಗಿ ಜಾರಿಗೆ ಬಂದಿಲ್ಲ.

ತಂಬಾಕು ಬಿಡಿ ಇಲ್ಲವೇ ಪ್ರಾಣ ಬಿಡಿ
ತಂಬಾಕು ಸೇವನೆಯನ್ನು ಬಿಡಿ ಇಲ್ಲವೇ ಪ್ರಾಣ ಬಿಡಿ ಎಂಬುದು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿವ ಘೋಷಣೆಯಾಗಿದೆ. ಇಂದಿನ ಯುವಕರಿಗೆ ಮತ್ತು ಶಾಲಾ ಮಕ್ಕಳಿಗೆ ತಂಬಾಕಿನಿಂದ ದೂರವಿರುವಂತೆ ಅರಿವು ಮೂಡಿಸಬೇಕಾಗಿದೆ.












Click it and Unblock the Notifications